ಕೆಪಿಎಲ್ ಆರಂಭಿಕ ಪಂದ್ಯ ಮೈಸೂರಿಗೆ ಸ್ಥಳಾಂತರ
ಮೈಸೂರು

ಕೆಪಿಎಲ್ ಆರಂಭಿಕ ಪಂದ್ಯ ಮೈಸೂರಿಗೆ ಸ್ಥಳಾಂತರ

August 23, 2018

ಮೈಸೂರು: ಪ್ರಕೃತಿ ವೈಪರಿತ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಯಲ್ಲಿ ನಡೆಯಬೇಕಿದ್ದ ಕೆಪಿಎಲ್ ಪಂದ್ಯ ಗಳನ್ನು ತಕ್ಷಣದಿಂದ ಮೈಸೂ ರಿಗೆ ಸ್ಥಳಾಂತರಿಸಲಾಗಿದೆ. ಆ.23 ಹಾಗೂ 24ರ ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಈ ಎರಡು ಪಂದ್ಯ ಗಳು ಆ.31 ರಂದು ನಡೆಯಲಿವೆ. ಆ.27 ಹಾಗೂ 30 ವಿರಾಮ ದಿನಗಳಾ ಗಿದ್ದು, ಉಳಿದಂತೆ ಮೂಲ ವೇಳಾ ಪಟ್ಟಿಯಂತೆ ಆ.25ರ ನಂತರ ಮೈಸೂ ರಿನ ಎಸ್‍ಡಿಎನ್‍ಆರ್ ಒಡೆಯರ್ ಸ್ಟೇಡಿಯಂನಲ್ಲಿ ಪಂದ್ಯಗಳು ಆರಂಭ ವಾಗಲಿವೆ. 25 ರಂದು ಬೆಳಗಾವಿ ಪ್ಯಾಂಥರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಮತ್ತು ಬೆಂಗಳೂರು ಬುಲ್ಸ್ ಹಾಗೂ ಆ. 26 ರಂದು ಬಿಜಾಪುರ್ ಬುಲ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವೆ ಪಂದ್ಯ ನಡೆಯಲಿವೆ.

Translate »