ಕೆಆರ್‍ಎಸ್ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ  ಸರ್ಕಾರದಿಂದ ಸಲಹಾ ಸಮಿತಿ ರಚನೆ
ಮೈಸೂರು

ಕೆಆರ್‍ಎಸ್ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಸರ್ಕಾರದಿಂದ ಸಲಹಾ ಸಮಿತಿ ರಚನೆ

January 7, 2019

ಮೈಸೂರು: ರಾಜ್ಯ ಸರ್ಕಾರ ಬೃಂದಾ ವನ ಗಾರ್ಡನ್ ಅನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಾಧಕ-ಬಾಧÀಕವನ್ನು ಚರ್ಚಿಸಿ ವರದಿ ಸಲ್ಲಿಸಲು 29 ಸದಸ್ಯರುಳ್ಳ ಸಲಹಾ ಸಮಿತಿಯೊಂದನ್ನು ರಚಿಸಿದೆ.

ಮಂಡ್ಯ ಜಿಲ್ಲೆಯ ಬೃಂದಾವನ ಉದ್ಯಾನವನ (ಕೆಆರ್‍ಎಸ್) ವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪ್ರಸ್ತುತ ಇರುವ ಉದ್ಯಾನವನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ಉದ್ದೇಶಿಸಿದೆ.
ಈ ನಡುವೆ ಸಾರ್ವಜನಿಕ ವಲಯ ದಿಂದ ವಿರೊಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಡಿಸ್ನಿ ಲ್ಯಾಂಡ್ ಮಾದರಿಯ ಅವಶ್ಯಕತೆ, ಸಾಧಕ-ಬಾಧಕ ಚರ್ಚಿಸಿ ವರದಿ ಸಲ್ಲಿಸುವುದಕ್ಕಾಗಿ ಸಲಹಾ ಸಮಿತಿ ರಚಿಸಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಈ ಸಲಹಾ ಸಮಿತಿಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಚಿವ ಡಿ.ಸಿ.ತಮ್ಮಣ್ಣ, ಸಂಸದರಾದ ಪ್ರತಾಪ ಸಿಂಹ, ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ ಸದಸ್ಯರಾಗಿದ್ದಾರೆ. ಇದರೊಂದಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಥವಾ ರಾಜಮನೆತನದ ಪ್ರಮುಖರು, ಮೈಸೂರು ವಿವಿ ಪ್ರವಾಸೋದ್ಯಮ ವಿಭಾಗದ ಪ್ರೊಫೆಸರ್, ವೇಣುಗೋಪಾಲ ಸ್ವಾಮಿ ದೇವಾಲಯದ ಪ್ರತಿನಿಧಿ, ಬೆಂಗಳೂರಿನ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ರಾಕ್ ಮೆಷಿನ್ಸ್ ಪ್ರೊಫೆಸರ್, ಇನ್ಸ್‍ಸ್ಟಿ ಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಅಧ್ಯಕ್ಷರು, ವಿಮಾನ ನಿಲ್ದಾಣದ ಪ್ರತಿನಿಧಿ, ರೈಲ್ವೆ ಇಲಾಖೆ ಪ್ರತಿನಿಧಿ, ಜಲಸಂಪ ನ್ಮೂಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಲಹಾ ಸಮಿತಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಈ ಕುರಿತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕೆಆರ್‍ಎಸ್ ಉದ್ಯಾನವನವನ್ನು ಆಧುನಿಕತೆಗೆ ತಕ್ಕಂತೆ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಲಹಾ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಅಭಿ ವೃದ್ಧಿಗೆ ಮಾಡುವುದಕ್ಕೆ ಸಾಧಕ ಹಾಗೂ ಬಾಧಕಗಳನ್ನು ಚರ್ಚಿಸಲಾಗುತ್ತದೆ. ಕೆಆರ್‍ಎಸ್‍ಗೆ ಬರುತ್ತಿರುವ ಪ್ರವಾಸಿ ಗರಿಗೆ ಉತ್ತಮವಾದ ವಾತಾವರಣ ಕಲ್ಪಿಸುವುದರೊಂದಿಗೆ, ಬಂದವರಿಗೆ ನಿರಾಸೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಉದ್ಯಾನವನದ ಅಭಿವೃದ್ಧಿ ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇ ಗೌಡ, ಯು.ಬಿ.ಆಚಾರ್ಯ, ಗುಂಡಪ್ಪಗೌಡ, ಕೈಗಾರಿಕೋ ದ್ಯಮಿ ಬಿ.ಆರ್.ಪೈ, ಅಶ್ವಿನಿ ರಂಜನ್, ನರೇಂದ್ರ ಶಾ, ಎನರ್ಜಿ ಎಕ್ಸ್‍ಪರ್ಟ್ ಭಾಮಿ ವಿ.ಶೆಣೈ, ಶಿಕ್ಷಣ ತಜ್ಞೆ ಎಸ್.ಶೋಭನ, ಕೃಷಿ ವಿಜ್ಞಾನಿ ನಂಜಾಪುರ ಯದುರಾಜು, ಉಷಾ ಯದುರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪಾರಂಪರಿಕತೆಗೆ ಧಕ್ಕೆ ಬಾರದಿರಲಿ ಕೆಆರ್‍ಎಸ್ ಅನ್ನು ಡಿಸ್ನಿ ಲ್ಯಾಂಡ್ ಮಾಧರಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಸಂಬಂಧಿಸಿದಂತೆ ಮೈಸೂರು ನಾಗರಿಕರು ಸಭೆ ನಡೆಸಿ ಕೆಆರ್‍ಎಸ್ ಉದ್ಯಾನವನದ ಅಭಿವೃದ್ಧಿ ಮಾಡುವಾಗ ಮೈಸೂರಿನ ಪಾರಂಪರಿಕತೆ ಹಾಗೂ ಕೆಆರ್‍ಎಸ್ ಅಣೆಕಟ್ಟೆಗೆ ದಕ್ಕೆ ಯಾಗದಂತೆ ಎಚ್ಚರಿಕೆವಹಿಸಬೇಕು. ಕೆಆರ್‍ಎಸ್ ಅಭಿವೃದ್ಧಿ ಮಾಡು ವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆ ಯಲಿದೆ. ಅಲ್ಲದೆ ಮೈಸೂರಿನಲ್ಲಿ 200ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಅವುಗಳನ್ನು ಅಭಿವೃದ್ಧಿ ಮಾಡುವುದರಿಂದ ಪ್ರವಾಸಿಗರನ್ನು ಸೆಳೆಯಬಹುದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Translate »