ಬೆಂಗಳೂರು: ನಿಗಮ ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿಗಳ ಪಟ್ಟಿಗೆ ಭಾನುವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಂಕಿತ ಹಾಕಿದ್ದು, ಕಾಂಗ್ರೆಸ್ ನಿಂದ ನೀಡಿದ್ದ ಪಟ್ಟಿಯಲ್ಲಿ 6 ಶಾಸಕರನ್ನು ಕೈಬಿಟ್ಟಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರುಗಳು ಅಂತಿಮ ಗೊಳಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಒಪ್ಪಿಗೆ ಪಡೆದು ನೀಡಿದ್ದ ಪಟ್ಟಿಯಲ್ಲಿ 6 ಶಾಸಕರನ್ನು ಕೈಬಿಟ್ಟಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ನೀಡಿದ ಪಟ್ಟಿ ಯಲ್ಲಿದ್ದ ಬಿಡಿಎ, ಬಿಎಂಆರ್‍ಟಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಆರ್‍ಎಸ್‍ಆರ್‍ಟಿಸಿ, ರೇಷ್ಮೆ ಕೈಗಾರಿಕೆ ಸೇರಿದಂತೆ ಮಹತ್ವದ ನಿಗಮ ಮಂಡಳಿ ಸ್ಥಾನಗಳಿಗೆ ನೇಮಕವಾಗಿದ್ದ ಶಾಸಕರನ್ನು ಕೈಬಿಟ್ಟಿರುವುದು ಅಸಮಾಧಾನಕ್ಕೆ ನಾಂದಿ ಹಾಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಶಾಸಕರಾದ ಎಸ್.ಟಿ.ಸೋಮಶೇಖರ್, ಎನ್.ಎ.ಹ್ಯಾರೀಸ್, ಡಾ. ಸುಧಾ ಕರ್, ವೆಂಕಟರಮಣಪ್ಪ, ಎಸ್.ಎನ್.ಸುಬ್ಬಾರೆಡ್ಡಿ , ಎಂ.ಎ. ಗೋಪಾಲಸ್ವಾಮಿ ಸೇರಿದಂತೆ 7 ಶಾಸಕರ ಹೆಸರು ಕಾಂಗ್ರೆಸ್ ಪಟ್ಟಿಯಲ್ಲಿತ್ತಾದರೂ, ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಅವರೆಲ್ಲರೂ ಅವಕಾಶ ವಂಚಿತರಾಗಿದ್ದಾರೆ.
ನಿಗಮ ಮಂಡಳಿಗಳಿಗೆ ನೇಮಕವಾದ ಶಾಸಕರು: ಬಿ.ಕೆ.ಸಂಗ ಮೇಶ್ವರ್ (ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ (ಭೂ ಸೇನಾ) ನಿಗಮ ನಿಯಮಿತ), ಆರ್.ನರೇಂದ್ರ (ಆಹಾರ ಮತ್ತು ನಾಗರಿಕ ಸರಬರಾಜು ನಿಗಮ), ಬಿ.ನಾರಾಯಣ ರಾವ್ (ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ), ಡಾ. ಉಮೇಶ್ ಜಿ. ಜಾಧವ್ (ಕರ್ನಾಟಕ ರಾಜ್ಯ ಉಗ್ರಾಣ ನಿಗಮ), ಟಿ.ರಘುಮೂರ್ತಿ (ಚಿನ್ನದ ಹಟ್ಟಿ ಗಣಿ ಕಂಪನಿ), ಯಶವಂತರಾಯ ಗೌಡ ವಿ.ಪಾಟೀಲ್ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ), ಬಿ.ಎ.ಬಸವರಾಜು (ಕರ್ನಾ ಟಕ ಸಾಬೂನು ಮತ್ತು ಮಾರ್ಜಕ ನಿಯ ಮಿತ), ಬಿ. ಶಿವಣ್ಣ (ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ಬೆಂಗ ಳೂರು), ಎಸ್.ಎಲ್.ನಾರಾಯಣಸ್ವಾಮಿ (ಡಾ.ಬಿ.ಆರ್. ಅಂಬೇ ಡ್ಕರ್ ಅಭಿವೃದ್ಧಿ ನಿಗಮ), ಮುನಿರತ್ನ (ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ), ಅರಬೈಲ್ ಶಿವರಾಂ ಹೆಬ್ಬಾರ್ (ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ), ಬಿ.ಎನ್.ಸುರೇಶ್ (ಕರ್ನಾ ಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ), ಶ್ರೀಮತಿ ಲಕ್ಷ್ಮಿ ಆರ್.ಹೆಬ್ಬಾಳ್ಕರ್ (ಕರ್ನಾಟಕ ರಾಜ್ಯ ಖನಿಜ ನಿಗಮ (ಮೈಸೂರು ಮಿನರಲ್ಸ್) ನಿಯಮಿತ), ಟಿ.ಡಿ.ರಾಜೇಗೌಡ (ಮಲೆನಾಡು ಪ್ರದೇ ಶಾಭಿವೃದ್ಧಿ ಮಂಡಳಿ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇವ ರೆಲ್ಲರಿಗೂ ಸಂಪುಟ ದರ್ಜೆ ಸ್ಥಾನಮಾನವನ್ನು ನೀಡಲಾಗಿದೆ.
ಸಂಸದೀಯ ಕಾರ್ಯದರ್ಶಿಗಳು: ಕೆ.ಅಬ್ದುಲ್ ಜಬ್ಬಾರ್, ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್, ಐವಾನ್ ಡಿಸೋಜಾ, ಕೌಜಲಗಿ ಮಹಂತೇಶ್ ಶಿವಾನಂದ್, ಶ್ರೀಮತಿ ರೂಪಕಲಾ ಎಂ.ಶಶಿಧರ್, ಕೆ.ಗೋವಿಂದರಾಜ್, ಕೆ.ರಾಘವೇಂದ್ರ ಬಸವ ರಾಜ ಹಿಟ್ನಾಳ್, ಡಿ.ಎಸ್.ಹುಲಗೇರಿ ಅವರುಗಳು ಸಂಸ ದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ. ಇವ ರೆಲ್ಲರಿಗೂ ರಾಜ್ಯ ಸಚಿವ ಸ್ಥಾನಮಾನವನ್ನು ನೀಡಲಾಗಿದೆ.