ಚುನಾವಣಾ ಸಿಬ್ಬಂದಿಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ
ಮೈಸೂರು

ಚುನಾವಣಾ ಸಿಬ್ಬಂದಿಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ

April 13, 2019

ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿ ರುವ ಮತಗಟ್ಟೆ ಸಿಬ್ಬಂದಿಗಳಿಗೆ ಅವರು ಕರ್ತವ್ಯ ನಿರ್ವಹಿಸಿರುತ್ತಿ ರುವ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ರುವ ಕ್ಷೇತ್ರಕ್ಕೆ ತೆರಳಲು ಏ.17ರಂದು ಬೆಳಿಗ್ಗೆ 6 ಗಂಟೆಗೆ ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಸ್ಥಳದಿಂದ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಮಸ್ಟರಿಂಗ್ ನಡೆಯುವ ಸ್ಥಳದ ವಿವರ ಇಂತಿದೆ.
210-ಪಿರಿಯಾಪಟ್ಟಣ-ಪಿರಿಯಾಪಟ್ಟಣ ತಾಲೂಕಿನ ಗೋಣಿಕೊಪ್ಪ ರಸ್ತೆಯಲ್ಲಿರುವ ಪುಷ್ಪಾ ಕಾನ್ವೆಂಟ್. 211-ಕೃಷ್ಣರಾಜ ನಗರ-ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. 212- ಹುಣಸೂರು-ಹುಣಸೂರು ತಾಲೂಕಿನ ಶ್ರೀ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು. 213-ಹೆಚ್.ಡಿ.ಕೋಟೆ-ಹೆಚ್.ಡಿ.ಕೋಟೆ ತಾಲೂಕಿನ ಸೆಂಟ್ ಮೇರಿಸ್ ಹಿರಿಯ ಪ್ರಾಥ ಮಿಕ ಶಾಲೆ (ಕನ್ನಡ ಮಾಧ್ಯಮ). 214-ನಂಜನಗೂಡು-ನಂಜನಗೂಡು ತಾಲೂಕಿನ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು. 215- ಚಾಮುಂಡೇಶ್ವರಿ-ಜೆ.ಎಲ್. ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು. 216-ಕೃಷ್ಣರಾಜ-ಮೈಸೂರು ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ. 217-ಚಾಮರಾಜ-ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರವಿರುವ ಬೇಡನ್ ಪೊವೆಲ್ ಸ್ಕೂಲ್. 218-ನರಸಿಂಹ ರಾಜ-ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು. 219-ವರುಣ-ನಂಜನಗೂಡು ತಾಲೂಕಿನ ದೇವೀರಮ್ಮನಹಳ್ಳಿಯ ಜೆ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜು. 220-ಟಿ.ನರಸೀಪುರ- ವಿದ್ಯೋ ದಯ ಮಹಿಳಾ ಪಿ.ಯು. ಕಾಲೇಜಿನಲ್ಲಿ ನಡೆಯಲಿದೆ. ಚುನಾ ವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಗಳು ಮಸ್ಟರಿಂಗ್ ಸ್ಥಳದಲ್ಲಿ ಏ.17ರಂದು ಬೆಳಿಗ್ಗೆ 6 ಗಂಟೆಗೆ ಹಾಜರಾಗಿ ಕೆಎಸ್ ಆರ್‍ಟಿಸಿ ಬಸ್ ಸೌಲಭ್ಯ ಸದುಪಯೋಗ ಪಡೆದುಕೊಳ್ಳುವುದು.

Translate »