ಕುಮಾರವ್ಯಾಸನ ಸಾಹಿತ್ಯ ಅಧ್ಯಯನದಿಂದ ಬರವಣಿಗೆಯಲ್ಲಿ ರಸದ ಹದ ಸೃಷ್ಟಿ ಸಾಧ್ಯ
ಮೈಸೂರು

ಕುಮಾರವ್ಯಾಸನ ಸಾಹಿತ್ಯ ಅಧ್ಯಯನದಿಂದ ಬರವಣಿಗೆಯಲ್ಲಿ ರಸದ ಹದ ಸೃಷ್ಟಿ ಸಾಧ್ಯ

January 3, 2019

ಮೈಸೂರು:-ಕುಮಾರ ವ್ಯಾಸನ ಸಾಹಿತ್ಯ ರಸ ಪ್ರವಾಹದಿಂದ ಕೂಡಿದ್ದು, ಇಂದಿನ ನಮ್ಮ ಲೇಖಕರು ಕುಮಾರವ್ಯಾಸನ ಸಾಹಿತ್ಯವನ್ನು ಆಳವಾಗಿ ಓದಿಕೊಂಡರೆ ತಮ್ಮ ಬರವಣಿಗೆಯಲ್ಲಿ ರಸದ ಹದ ಕಾಯ್ದುಕೊಳ್ಳಬಹುದು ಎಂದು ಸರ ಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.
ಮೈಸೂರಿನ ಕುವೆಂಪುನಗರದ ಉದಯ ರವಿ ರಸ್ತೆಯಲ್ಲಿರುವ ಡಾ.ಎಸ್.ಎಲ್.ಭೈರಪ್ಪ ಅವರ ನಿವಾಸದ ಆವರಣದಲ್ಲಿ ತನುಮನು ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟದ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಡಾ.ಸಿಪಿಕೆ ಅವರ ಸಂಯೋಜನೆಯಲ್ಲಿ ಹೊರತಂದಿ ರುವ ಕುಮಾರ ವ್ಯಾಸ ವಿರಚಿತ `ಗದುಗಿನ ಭಾರತ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕುಮಾರವ್ಯಾಸನ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ರೂಪಕಗಳನ್ನು ಕಾಣಬಹು ದಾಗಿದ್ದು, ರಸದ ರಭಸ ಅವನ ಸಾಹಿತ್ಯದ ವಿಶೇಷ. ಇದೇ ಕಾರಣಕ್ಕೆ ಅವನ ಸಾಹಿತ್ಯ ಕಳೆಗಟ್ಟಿ ಸಾಹಿತ್ಯಾಸಕ್ತರನ್ನು ಸೆಳೆಯುತ್ತದೆ. ಸಾಹಿತ್ಯ ರಚನೆಯ ಎಲ್ಲಾ ಆಯಾಮ ಗಳನ್ನು ಸಿದ್ಧಿಸಿಕೊಂಡಿದ್ದ ಕುಮಾರ ವ್ಯಾಸನು ಹುಟ್ಟು ಕವಿಯಂತೆಯೂ ಗೋಚ ರಿಸುತ್ತಾನೆ. ಹೀಗಾಗಿ ನಮ್ಮ ಲೇಖಕರು ಕುಮಾರ ವ್ಯಾಸನ ಆಳವಾದ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

1940ರ ಸುಮಾರಿಗೆ ಅಂದಿನ ಮೈಸೂರು ಸಂಸ್ಥಾನದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಕುಮಾರವ್ಯಾಸ ಭಾರತದ ವಾಚನ ಮಾಡುವ ವಾಡಿಕೆ ಇತ್ತು. ಸಣ್ಣ ಹಾರ್ಮೋನಿಯಂನ ಶ್ರುತಿಯಲ್ಲೇ ಗಮಕಿಗಳು ಕುಮಾರವ್ಯಾಸ ಭಾರತ ಸಾದರಪಡಿಸುತ್ತಿದ್ದರು. ಇದು ಪೂರ್ಣ ವಾಗಿ ಅರ್ಥವಾಗದಿದ್ದರೂ ಒಂದು ಚಿತ್ರಣ ವನ್ನು ಕಟ್ಟಿಕೊಡುತ್ತಿತ್ತು. ಹೀಗೆ ಆಗಾಗ್ಗೆ ಕುಮಾರವ್ಯಾಸ ಭಾರತದ ವಾಚನ ಕೇಳುವ ಅವಕಾಶ ಲಭಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಮಾರವ್ಯಾಸ ಭಾರತದ ಅನೇಕ ಪದ್ಯ ಗಳು ನನಗೆ ಕಂಠಪಾಠವಾಗಿತ್ತು ಎಂದು ನೆನಪಿಸಿಕೊಂಡರು.

ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ `ಕುಮಾರವ್ಯಾಸ ಭಾರತ’ದ ಮೊಟ್ಟ ಮೊದಲ ಆವೃತ್ತಿಯನ್ನು ಹೊರತರಲು ಕಾರಣೀಭೂತರು. 50 ಸಾವಿರ ಪ್ರತಿ ಯನ್ನು ಮುದ್ರಿಸಿ ಕೇವಲ 2 ರೂಪಾಯಿ ದರ ನಿಗದಿಗೊಳಿಸಿದ್ದರು. ಇಂತಹ ಸನ್ನಿ ವೇಶದಲ್ಲಿ ಸರ್ಕಾರದಿಂದ 2 ರೂಪಾಯಿಗೆ ಖರೀದಿಸಿ 7 ರೂ.ಗೆ ಮಾರಾಟ ಮಾಡು ವಂತಹ ಅಕ್ರಮವೂ ವ್ಯಾಪಕವಾಗಿತ್ತು. ವಿಶೇಷವೆಂದರೆ ಅಂದು ಕಂದಾಯ ಇಲಾಖೆಯ ಶಾನುಭೋಗರು ಹಾಗೂ ಪಟೇಲರಿಗೆ ಕೃತಿಯನ್ನು ನೀಡಿ ಅದನ್ನು ಗ್ರಾಮಗಳಲ್ಲಿ ವಾಚಿಸುವ ಕಾರ್ಯಕ್ರಮ ರೂಪಿಸಲು ನಿರ್ದೇಶನ ನೀಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಕೆಂಗಲ್ ಹನು ಮಂತಯ್ಯ ಅವರಿಗೆ ಇದ್ದ ಸಾಂಸ್ಕøತಿಕ ಪ್ರಜ್ಞೆ ಯಿಂದಾಗಿಯೇ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆರಂಭಗೊಂಡಿತು ಎಂದರು.

ಅವಿದ್ಯಾವಂತರಿಗೂ ಅರ್ಥವಾಗುತ್ತಿತ್ತು: ಒಂದು ಕಾಲದಲ್ಲಿ ಕುಮಾರವ್ಯಾಸ ಭಾರತ ವಾಚನ ಮಾಡುವ ಕಲಾವಿದರು ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸುತ್ತಿದ್ದರು. ಈ ವೇಳೆ ಕುಮಾರವ್ಯಾಸ ಭಾರತವನ್ನು ಅವಿದ್ಯಾವಂತ ಸಭಿಕರೂ ಅರ್ಥ ಮಾಡಿ ಕೊಳ್ಳುತ್ತಿದ್ದರು. ಓದು-ಬರಹ ಬಾರ ದಿದ್ದರೂ ಪದ್ಯದ ಭಾವವನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ವ್ಯಕ್ತಪಡಿಸು ತ್ತಿದ್ದರು. ಆ ಮೂಲಕ ಕಾವ್ಯ ಅರ್ಥ ಮಾಡಿ ಕೊಳ್ಳಲು ವ್ಯಾಕರಣ ಜ್ಞಾನ ಹೊಂದಿರ ಬೇಕು ಎಂಬುದನ್ನು ಮೀರಿ ಅವಿದ್ಯಾವಂತ ರನ್ನು ತಲುಪುವ ಶಕ್ತಿಯನ್ನು ಅಂದು ಕುಮಾರವ್ಯಾಸ ಭಾರತ ಪ್ರದರ್ಶಿಸಿದೆ ಎಂದು ಡಾ.ಭೈರಪ್ಪ ನುಡಿದರು.
ಅತ್ಯಂತ ಜನಪ್ರಿಯ ಕವಿ: ಕುಮಾರವ್ಯಾಸ ಭಾರತದಂತಹ ಕೃತಿ ಕನ್ನಡದಲ್ಲಿ ಮತ್ತೊಂದು ಇಲ್ಲ. ಕುಮಾರವ್ಯಾಸ ಬಹಳ ವಾಕ್ಚಾಳಿ. ಸಾಹಿತ್ಯದಲ್ಲಿ ರೂಪಕದ ವ್ಯಾಪಕತೆ ಮಾತ್ರ ವಲ್ಲ ಎಲ್ಲವೂ ಪುನರಾವರ್ತನೆ ಎಂಬ ಅಪವಾದವನ್ನು ಕೆಲ ವಿದ್ವಾಂಸರು ಮಾಡು ತ್ತಾರೆ. ಆದರೆ ಈ ಎಲ್ಲಾ ಅಂಶಗಳನ್ನು ಒಳಗೊಂಡಿದ್ದರಿಂದಲೇ ಕಥಾವಸ್ತು ಕಳೆ ಗಟ್ಟಲು ಹಾಗೂ ರಸರಭಸ ಹುಟ್ಟಲು ಸಾಧ್ಯವಾಗಿದೆ. ಕುಮಾರವ್ಯಾಸ ಅತ್ಯಂತ ಜನಪ್ರಿಯ ಕವಿಯಾಗಿದ್ದು, ಕಾವ್ಯಕ್ಕೆ ಮಾತ್ರ ಗುರುವಲ್ಲ, ಕವಿಗಳಿಗೂ ಗುರು ಎಂದು ಡಾ. ಭೈರಪ್ಪ ಬಣ್ಣಿಸಿದರು.
ಸುಜನಾ ನೆರವಾಗಿದ್ದರು: ಕೃತಿಯ ಸಂಯೋಜಕರೂ ಆದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಮಾತನಾಡಿ, ಕುಮಾರವ್ಯಾಸನ ಗದುಗಿನ ಭಾರತ’ ವಿಶಿಷ್ಟವಾದ ಕಾವ್ಯ. ಇದರ ಸಂಯೋಜನೆ ಮಾಡಿದ್ದೇನೆ. 1958ರಲ್ಲಿ ರಾಜ್ಯ ಸರ್ಕಾರ ಹಸ್ತಪ್ರತಿ, ಮುದ್ರಿತ ಆವೃತ್ತಿಗಳು ಸೇರಿ ದಂತೆ ಇನ್ನಿತರ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸಮಗ್ರಗದುಗಿನ ಭಾರತ’ ಕೃತಿ ಹೊರತಂದಿತ್ತು. ಇದರ ಸಂಪಾದನಾ ಕಾರ್ಯವನ್ನು ಕುವೆಂಪು ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ನಿರ್ವಹಿಸಿದ್ದರು. ಇಲ್ಲಿ ಮತ್ತೊಂದು ಗಮನಾರ್ಹ ಅಂಶ ವೆಂದರೆ ಈ ಸಂಪಾದನೆ ಕಾರ್ಯಕ್ಕೆ ಕವಿ ಎಸ್.ನಾರಾಯಣಶೆಟ್ಟಿ (ಸುಜನಾ) ನೆರ ವಾಗಿದ್ದರು. ಹೀಗಾಗಿ ಸುಜನಾ ಅವರನ್ನೂ ಸ್ಮರಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿ ದರು. ಕುವೆಂಪು ಭಾಷಾ ಭಾರತಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರು ದತ್ತ, ತನುಮನು ಪ್ರಕಾಶನದ ಮಾನಸ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರೂ ಆದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ರಂಗಕರ್ಮಿ ರಾಜಶೇಖರ ಕದಂಬ ಮತ್ತಿತರರು ಹಾಜರಿದ್ದರು.

\

Translate »