ಕುಶಾಲನಗರ: ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಶ್ರದ್ಧಾಂಜಲಿ
ಕೊಡಗು

ಕುಶಾಲನಗರ: ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಶ್ರದ್ಧಾಂಜಲಿ

December 30, 2019

ಕುಶಾಲನಗರ, ಡಿ.29- ಸಾಮಾಜಿಕ ಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ಪಟ್ಟಣದ ಗಣಪತಿ ದೇವಾಲಯದ ಮುಂಭಾಗ ಭಾನುವಾರ ವಚನ ಸಾಹಿತ್ಯ ಪರಿಷತ್‍ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಗಣ್ಯರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾ ಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಪುರ ಪ್ರಮುಖ ಎಸ್.ಎನ್.ನರಸಿಂಹ ಮೂರ್ತಿ ಮಾತನಾಡಿ, ಪೇಜಾವರ ಶ್ರೀಗಳು ಈ ನಾಡು ಕಂಡ ಮಹಾನ್ ಸಂತರಾಗಿ ದ್ದರು. ತಮ್ಮ ಜೀವಿತಾವಧಿಯ ಉದ್ದಕ್ಕೂ ಸಾಮಾಜಿಕ ಸೇವೆಗೆ ತಮ್ಮನ್ನು ಮುಡಿಪಾಗಿ ಟ್ಟಿದ್ದರು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದರು.

ಹೋಟೆಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಹಾಗೂ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿದರು. ಈ ವೇಳೆ ಕುಶಾಲ ನಗರ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜೇಂದ್ರ, ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ನಾರಾಯಣ, ಉದ್ಯಮಿಗಳಾದ ಎನ್.ಕೆ.ಮೋಹನಕುಮಾರ್, ಸುದೀಶ್, ಉಪನ್ಯಾಸಕ ಮಹೇಶ್, ನಿವೃತ್ತ ಪೆÇಲೀಸ್ ಅಧಿಕಾರಿ ಪ್ರಕಾಶ್, ಅಬಕಾರಿ ಇಲಾಖೆಯ ಕಾಳಪ್ಪ, ಪ್ರಮುಖರಾದ ಕೆಂಚಪ್ಪ, ಪಿ.ಪಿ. ಸತ್ಯನಾರಾಯಣ, ಹೆಚ್.ಎಸ್. ವೆಂಕಟೇಶ್, ನಟರಾಜು, ಯೋಗಾನಂದ, ಅನಿಲ್ ಕುಮಾರ್, ಶ್ರೀಹರ್ಷ ಇದ್ದರು.

Translate »