ಜಿಲ್ಲಾಡಳಿತದಿಂದ ಸರಳ ರೀತಿ ಕುವೆಂಪು ಜನ್ಮ ದಿನಾಚರಣೆ: ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ
ಮೈಸೂರು

ಜಿಲ್ಲಾಡಳಿತದಿಂದ ಸರಳ ರೀತಿ ಕುವೆಂಪು ಜನ್ಮ ದಿನಾಚರಣೆ: ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

December 30, 2019

ಮೈಸೂರು, ಡಿ.29(ಆರ್‍ಕೆಬಿ)- ಪೇಜಾ ವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿ ಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾ ಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಉಪ ವಿಭಾಗಾಧಿಕಾರಿ ಡಾ.ಎನ್.ಸಿ. ವೆಂಕಟರಾಜು ನೇತೃತ್ವದಲ್ಲಿ ಕಲಾಮಂದಿರ ದಲ್ಲಿ ಮೊದಲಿಗೆ ಕೃಷ್ಣೈಕ್ಯರಾದ ಪೇಜಾ ವರ ಶ್ರೀಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಉಪಮೇಯರ್ ಶಫೀ ಅಹಮದ್, ಬರಹಗಾರ ಗುಬ್ಬಿಗೂಡು ರಮೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಕುವೆಂಪು ವಿಶ್ವಮಾನವ ವೇದಿಕೆ ಅಧ್ಯಕ್ಷ ಸುರೇಶ್ ಗೌಡ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಸಮಿತಿ ಸದಸ್ಯ ಎಂ.ಬಿ.ವಿಶ್ವ ನಾಥ್, ಕನ್ನಡ ಚಳವಳಿಯ ತಾಯೂರು ವಿಠ್ಠಲಮೂರ್ತಿ, ಮೂಗೂರು ನಂಜುಂಡ ಸ್ವಾಮಿ, ಗಾಯಕಿ ಸುನೀತಾ ಚಂದ್ರ ಶೇಖರ್, ಯಮುನಾ ಇನ್ನಿತರರು ಉಪಸ್ಥಿತರಿದ್ದರು.

Translate »