ಮೈಸೂರು

ಮೈಸೂರು ಜಿಲ್ಲಾಡಳಿತದಿಂದ ಕಾರ್ಮಿಕ ಸಮ್ಮಾನ ದಿನಾಚರಣೆ

March 9, 2020

ಅಸಂಘಟಿತ 100 ಕಾರ್ಮಿಕರಿಗೆ `ವಿಶೇಷ ಪುರಸ್ಕಾರ’, 36 ಕಾರ್ಮಿಕರಿಗೆ `ಶ್ರಮ ಸಮ್ಮಾನ ಪ್ರಶಸ್ತಿ’ ಪ್ರದಾನ
ಮೈಸೂರು, ಮಾ.8(ಪಿಎಂ)- ಬಸವಣ್ಣನವರ ನುಡಿಯಂತೆ `ಕಾಯಕವೇ ಕೈಲಾಸ’ ಎಂದು ದುಡಿಯುವ ಅಸಂಘ ಟಿತ ಕಾರ್ಮಿಕರಿಗೆ ಭಾನುವಾರ ಹಮ್ಮಿ ಕೊಂಡಿದ್ದ `ಕಾರ್ಮಿಕ ಸಮ್ಮಾನ ದಿನಾ ಚರಣೆ’ಯಲ್ಲಿ ಮೇಯರ್ ತಸ್ನೀಂ `ಶ್ರಮ ಸಮ್ಮಾನ ಪ್ರಶಸ್ತಿ’ ಪ್ರದಾನ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಂಟಿಯಾಗಿ ಮೈಸೂರಿನ ಶಾರದಾವಿಲಾಸ ಕಾಲೇಜು ಶತಮಾ ನೋತ್ಸವ ಭವನದಲ್ಲಿ ಸಮಾರಂಭ ಹಮ್ಮಿ ಕೊಂಡಿದ್ದವು. ಅಸಂಘಟಿತ ವಲಯದ ಅಗಸರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಹಮಾಲಿಗಳು, ಟೈಲರ್ ಗಳು, ಚಿಂದಿ ಆಯುವವರು, ಮೆಕ್ಯಾನಿಕ್ ಗಳು, ಗೃಹಕೃತ್ಯ ಕೆಲಸಗಾರರು, ಖಾಸಗಿ ವಾಣಿಜ್ಯ ವಾಹನ ಚಾಲಕರು ಸೇರಿದಂತೆ ಅಸಂಘಟಿತ ವಲಯದ ಮಹಿಳಾ ಹಾಗೂ ಪುರುಷ ಕಾರ್ಮಿಕರಲ್ಲಿ 100 ಮಂದಿಗೆ ವಿಶೇಷ ಪರಸ್ಕಾರ ನೀಡಲಾಯಿತು. 36 ಮಂದಿಯನ್ನು ವಿಶಿಷ್ಟ ಸಾಧಕರೆಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉದ್ಘಾಟನೆ ನೆರವೇರಿಸಿದ ಬೆಂಗ ಳೂರಿನ ಕಾರ್ಮಿಕ ಇಲಾಖೆ ಉಪ ಆಯುಕ್ತ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಸಂಘಟಿತ ಕಾರ್ಮಿಕರು ಶೇ.20ರಷ್ಟು ಇದ್ದರೆ, ಅಸಂಘಟಿತರೇ ಶೇ.80ರಷ್ಟಿದ್ದಾರೆ. ಸರ್ಕಾರದ ಯೋಜನೆಗಳು ಶೇ.20 ರಷ್ಟಿರುವ ಸಂಘಟಿತ ಕಾರ್ಮಿಕರಿಗಷ್ಟೇ ದೊರೆಯುತ್ತಿವೆ. ಹೆಚ್ಚಿನ ಕೆಲಸ ಮಾಡುವ ಅಸಂಘಟಿತ ವಲಯದ ಶೇ.80ರಷ್ಟು ಮಂದಿಗೆ ಯಾವುದೇ ಯೋಜನೆ ಇಲ್ಲದೇ ವಂಚಿತರಾಗಿದ್ದರು. ಇತ್ತೀಚೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕ ರಿಗಾಗಿ ಹಲವು ಯೋಜನೆ ಜಾರಿಗೆ ತಂದಿವೆ ಎಂದು ತಿಳಿಸಿದರು.

ಸಂಘಟಿತ ವಲಯದ ಕಾರ್ಮಿಕರು ಮೇ 1ರಂದು ಕಾರ್ಮಿಕ ದಿನಾಚರಣೆ ಆಚರಿಸುವಂತೆ ಅಸಂಘಟಿತ ವಲಯದ ಕಾರ್ಮಿಕರಿಗೂ ದಿನಾಚರಣೆ ನಡೆಸಬೇ ಕೆಂದೇ ಸರ್ಕಾರ `ಕಾರ್ಮಿಕ ಸಮ್ಮಾನ ದಿನಾಚರಣೆ’ ನಡೆಸುತ್ತಿದೆ ಎಂದರು.

ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎ.ಸಿ.ತಮ್ಮಣ್ಣ ಮಾತನಾಡಿ, ಕಾರ್ಮಿಕರಲ್ಲಿ ಅಸಂಘಟಿತ ಕಾರ್ಮಿಕರು ಬಹುಸಂಖ್ಯಾತರು. ಜಿಲ್ಲೆಯ 13 ಕಾರ್ಮಿಕ ವಲಯದಿಂದ 5,468 ಮಂದಿ ಅಸಂಘಟಿತ ಕಾರ್ಮಿಕರಿಂದ ಅರ್ಜಿ ಸ್ವೀಕರಿಸಿ 3,367 ಮಂದಿಗೆ ಅಸಂಘಟಿತ ಕಾರ್ಮಿಕರ ಕಾರ್ಡ್ ನೀಡಲಾಗಿದೆ. ಕೇಂದ್ರ ಸರ್ಕಾರದ `ಪಿಎಂ ಎಸ್‍ವೈಎಂ’ ಪಿಂಚಣಿ ಯೋಜನೆಯಡಿ ಸೌಲಭ್ಯ ಪಡೆಯಲು ಉತ್ತೇಜನ ನೀಡಲಾಗುತ್ತಿದೆ. ಯೋಜನೆಯಡಿ ಕಾರ್ಮಿಕರು ವಯೋ ಮಾನಕ್ಕೆ ಅನುಗುಣವಾಗಿ ಇಂದಿಷ್ಟು ಹಣ ಪಾವತಿ ಮಾಡಬೇಕಿದ್ದು, ಅಷ್ಟೇ ಮೊತ್ತದ ಹಣವನ್ನು ಕೇಂದ್ರ ಸರ್ಕಾರವೂ ಸಂದಾಯ ಮಾಡುವ ಯೋಜನೆ ಇದಾಗಿದೆ ಎಂದು ವಿವರಿಸಿದರು.

ಕಾರ್ಮಿಕ ಅಧಿಕಾರಿ ಎಸ್.ಎಂ. ಮಂಜುಳಾದೇವಿ, ಟ್ಯಾಕ್ಸಿ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಆಯೂಬ್ ಪಾಷಾ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಪ್ರಮೋದ್ ಚಿಕ್ಕಮಗಳೂರು, ಸವಿತಾ ಸಮಾಜದ ಅಧ್ಯಕ್ಷ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »