ಮೈಸೂರು,ಮಾ.8(ಎಂಟಿವೈ)- ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನಿಗದಿತ ದಿನವೇ ಗಲ್ಲಿಗೇರಿಸುವಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಭಾನುವಾರ ಮೈಸೂರಿನಲ್ಲಿ ಪ್ರತಿಭಟಿಸಿದರು. ಅಂತಾ ರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ, ಗನ್‍ಹೌಸ್ ಬಳಿ ನೇಣಿಗೇರಿಸುವ ಅಣಕು ಪ್ರದರ್ಶನ ನಡೆಸಿದರು.
ನಿಗದಿತ ದಿನದಂದೇ ಗಲ್ಲುಶಿಕ್ಷೆ ಜಾರಿಗೊಳಿಸಿ ನ್ಯಾಯಾಂಗದ ಮೌಲ್ಯ ಎತ್ತಿ ಹಿಡಿಯಬೇಕು ಎಂದು ವೇದಿಕೆ ಅಧÀ್ಯಕ್ಷ ಎಸ್.ಬಾಲಕೃಷ್ಣ ಒತ್ತಾಯಿಸಿದರು. ಪದಾಧಿಕಾರಿಗಳಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ, ಪ್ಯಾಲೇಸ್ ಬಾಬು, ಮಹದೇವಸ್ವಾಮಿ, ಬೀಡಾಬಾಬು, ಅರವಿಂದ, ಸ್ವಾಮಿ ಗೈಡ್, ಪರಿಸರ ಚಂದ್ರು, ಸುನೀಲ್ ಕುಮಾರ್, ಬಸವಣ್ಣ, ಬಸವರಾಜು, ಮಾಲಿನಿ, ಕಾವೇರಿಯಮ್ಮ, ರವಿ, ಮಹದೇವಪ್ಪ, ಪ್ರಸನ್ನಕುಮಾರ್, ಮದನ್, ಗಿರೀಶ್, ಶ್ರೀನಿವಾಸ್, ಕೇಬಲ್‍ರವಿ, ಮಂಜು, ಸೋಮು, ಭೈರಪ್ಪ ಪ್ರತಿಭಟನೆಯಲ್ಲಿದ್ದರು.