ಮೈಸೂರು: ಮೈಸೂರಿನಲ್ಲಿ ಭಾನುವಾರ ಮಹಿಳೆಯರ ಸಂಭ್ರಮ. ಮೈಸೂರು ಲೇಡೀಸ್ ಅಸೋಸಿಯೇಷನ್ ಆಶ್ರಯದಲ್ಲಿ ವಿಜಯನಗರದ ಮೊದಲನೇ ಹಂತದಲ್ಲಿ ಸಪ್ತಪದಿ ಕಲ್ಯಾಣ ಮಂಟಪ ದಲ್ಲಿ ನಡೆದ `ಭಾನುವಾರದ ಬಿಡುವಿನ ಸಂತೆ’ ಹಾಗೂ `ಆಹಾರ ಮೇಳ’ದಲ್ಲಿ ನಂದಿನಿ ಉತ್ಪನ್ನಗಳನ್ನು ಬಳಸಿ ಸಿದ್ಧಪಡಿಸಿದ ಅವರೆ ಕಾಳಿನ ನಾನಾ ರೀತಿಯ ತಿನಿಸುಗಳು ಜನರ ನಾಲಿಗೆ ತಣಿಸಿದವು. ಜನರು ರುಚಿ ಮತ್ತು ಗರಿ ಗರಿಯಾದ ತಿಂಡಿಗಳನ್ನು ಸವಿದರು.
ಆಹಾರ ಮೇಳಕ್ಕೆ ಕಾಲಿಡುತ್ತಿದ್ದಂತೆ 40ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸಿದವು. ಒಂದೆಡೆ ನಂದಿನಿ ತುಪ್ಪ ಬಳಸಿ ಮಾಡಿದ್ದ ಹಾಗೂ ಅವರೆಕಾಳಿನ ತಿನಿಸಿನ ಘಮಲು ಆಕರ್ಷಿಸುತ್ತಿತ್ತು. ನಂದಿನಿ ಉತ್ಪನ್ನಗಳಾದ ನಂದಿನಿ ಹಾಲು, ತುಪ್ಪ, ಮೊಸರು, ಕೋವಾ ಇತ್ಯಾದಿಗಳನ್ನೇ ಬಳಸಿ ತಯಾರಿಸಿದ ಅವರೆ ಕಾಳಿನ ತಿಂಡಿ, ತಿನಿಸು, ಸಿಹಿ ಮತ್ತು ಖಾರದ ತಿಂಡಿಗಳು, ಜಾಮೂನು, ಅವರೆ ಕಾಳಿನ ಅಕ್ಕಿ ರೊಟ್ಟಿ, ಹಾಲುಬಾಯಿ ಸಿಹಿ, ಅವರೆ ಕಾಳಿನ ಸಾಂಬಾರ್, ಹಿತಕವರೆ ಮೇಲೊಗ್ರ, ಅವರೆಕಾಳು ಇಡ್ಲಿ, ಕಡಬು, ಸಾಮೆ ಬಿಸಿ ಬೇಳೆಬಾತ್, ಬಾಸುಂದಿ, ಅವರೆಕಾಯಿ ಎಣ್ಣೆ ಕಾಳು, ಅವರೆಕಾಯಿ ವಡೆ, ಮಿಲ್ಲೆಡ್ ಮಸಾಲ ಇಡ್ಲಿ, ಚಿತಕವರೆ ಕಾಳಿನ ಡ್ರೈ ಜಾಮೂನು, ನವಣೆ ಕಜ್ಜಾಯ, ಅವರೆ ಕಾಳಿನ ನಿಪ್ಪಟ್ಟು, ಅವರೆಕಾಳಿನ ಪಾನಿಪುರಿ, ಚುರುಮುರಿ, ಅವರೆ ಕಾಳಿನ ಬಿಸ್ಕತ್, ಅವರೆ ಕಾಳು ಡ್ರೈ, ಅವರೆ ಕಾಳಿನ ಪಾಯಸ, ವಿವಿಧ ಹೋಳಿಗೆ, ಮೊಟ್ಟೆ ರಹಿತ ಕ್ರೀಮ್ ಕೇಕ್, ಸಿರಿಧಾನ್ಯಗಳ ನಾನಾ ತಿಂಡಿಗಳು, ರಾಗಿ ರವೆ ಇಡ್ಲಿ, ಹೆಸರು ಉಂಡೆ ಇತ್ಯಾದಿ, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿಗಳು ಇಲ್ಲಿದ್ದವು.
ಆಹಾರ ಮೇಳದ ಅಂಗವಾಗಿ ಏರ್ಪಡಿ ಸಿದ್ದ ಸ್ಪರ್ಧೆಯಲ್ಲಿ ನಂದಿನಿ ಉತ್ಪನ್ನಗಳನ್ನೇ ಉಪಯೋಗಿಸಿ ತಯಾರಿಸಿದ ತಿನಿಸು ಗಳು, ಅವರೆಕಾಳು ಬಳಸಿ ತಯಾರಿಸಿದ ತಿನಿಸುಗಳು, ಸಿರಿಧಾನ್ಯಗಳಿಂದ ತಯಾರಿ ಸಿದ ತಿನಿಸುಗಳನ್ನು ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಹೆಚ್ಚು ಎಂಬಂತೆ ರುಚಿ ರುಚಿಯಾಗಿ ತಯಾರಿಸಿ ತಂದಿದ್ದು ಗಮನ ಸೆಳೆಯಿತು.
ಮೈಸೂರಿನ ವಿಜಯನಗರ, ಸಿದ್ದಾರ್ಥ ನಗರ, ವಿದ್ಯಾನಗರ, ಸರಸ್ವತಿಪುರಂ, ವಿದ್ಯಾ ರಣ್ಯಪುರಂ, ಜೆ.ಪಿ.ನಗರ, ಒಂಟಿಕೊಪ್ಪಲ್, ಯಾದವಗಿರಿ, ಹಿನಕಲ್ ಇನ್ನಿತರ ಕಡೆ ಗಳಿಂದ ಬಂದಿದ್ದ ಸ್ಪರ್ಧಿಗಳು ಭಾರೀ ಉತ್ಸಾಹ ದಿಂದ ಬಗೆ ಬಗೆಯ ತಿನಿಸುಗಳೊಡನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಎಲ್ಲರ ಗಮನ ಸೆಳೆದ ಸೂಪರ್ ಮಿನಿಟ್ ಸ್ಪರ್ಧೆಯಲ್ಲಿ ಗಾಲ್ಫ್ ಬಾಲ್, ಫಿಷಿಂಗ್, ನಟ್ ಗೇಮ್ ಇನ್ನಿತರ ಗೇಮ್‍ಗಳಲ್ಲಿ ಆಸಕ್ತರು ಪಾಲ್ಗೊಂಡು ಸಂತಸಪಟ್ಟರು. ಖ್ಯಾತ ಡ್ಯಾನ್ಸರ್ ಡಾ.ಯದುಗಿರಿ ಅವರೂ ಅವರೆಕಾಳು ನಿಪ್ಪಿಟ್ಟು, ನಂದಿನಿ ಕೋವಾದಲ್ಲಿ ತಯಾರಿ ಸಿದ ಜಾಮೂನುಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೇಯರ್ ಪುಷ್ಪಲತಾ ಜಗನ್ನಾಥ್ ಭಾನುವಾರದ ಬಿಡುವಿನ ಸಂತೆಗೆ ಚಾಲನೆ ನೀಡಿದರು. ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ತೀರ್ಪುಗಾರರಾಗಿ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸಹೋದರಿ ಪ್ರೇಮಾ ಚಂದ್ರಚೂಡ್ ಮತ್ತು ರಶ್ಮಿ ಕೋಟಿ ಕಾರ್ಯನಿರ್ವಹಿಸಿದರು. ಮೈಸೂರು ಲೇಡೀಸ್ ಅಸೋಸಿ ಯೇಷನ್ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಉಪಾಧ್ಯಕ್ಷೆ ಪವಿತ್ರಾ ಮಲ್ಲಿಕಾರ್ಜುನ, ಕಾರ್ಯದರ್ಶಿ ವಿದ್ಯಾ ಆನಂದ್, ಸಹ ಕಾರ್ಯದರ್ಶಿ ಪ್ರಭಾವತಿ ಎಸ್.ಕುಮಾರ್, ನಿರ್ದೇಶಕರಾದ ಲತಾ ಜಗದೀಶ್, ಅನು ರಾಧಾ ನಾಗಕುಮಾರ್, ಪ್ರೇಮಾ ರಂಗೇಶ್, ಲತಾ ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.