ಹಳೆ ಬಸ್ ತಂಗುದಾಣಗಳಿಗೆ ಹೊಸ ರೂಪ
ಮೈಸೂರು

ಹಳೆ ಬಸ್ ತಂಗುದಾಣಗಳಿಗೆ ಹೊಸ ರೂಪ

December 24, 2018

ಮೈಸೂರು: ನಗರ ಪಾಲಿಕೆಯು ಹಳೇ ಬಸ್ ತಂಗುದಾಣ ಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡುವುದರ ಜತೆಗೆ, ಸ್ವಚ್ಛತೆ ಕಾಪಾಡಿ, ನೀರನ್ನು ಮಿತವಾಗಿ ಬಳಸಿ, ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ… ಮತ್ತಿತರ ಬರಹಗಳನ್ನು ಗೋಡೆಗಳ ಮೇಲೆ ಬರೆದು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.

ಮಾನಸ ಗಂಗೋತ್ರಿ ಚದುರಂಗ ರಸ್ತೆಯ ಎಸ್‍ಜೆಸಿಇ ಕ್ಯಾಂಪಸ್‍ನ ಜೆಎಸ್‍ಎಸ್ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ, ಹಿಂದಿನ ಶಾಸಕ ಹೆಚ್.ಎಸ್.ಶಂಕರೇ ಗೌಡರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ್ದ ಬಸ್ ತಂಗುದಾಣದಲ್ಲಿ ನಗರಪಾಲಿಕೆಯು ಸ್ವಚ್ಛತೆ, ಪರಿಸರ ಕಾಳಜಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ಅದರಂತೆ ತಂಗುದಾಣಕ್ಕೆ ಬಣ್ಣ ಬಳಿದು ಹೊಸ ರೂಪ ನೀಡಿದೆ. ಕೆಲವೆಡೆ ಹಸಿರು ಬಣ್ಣ ಬಳಿದು ಹಸಿರು ನಗರ… ಸ್ವಚ್ಛನಗರ ಮೈಸೂರು, ಪ್ಲಾಸ್ಟಿಕ್ ತ್ಯಜಿಸಿರಿ… ಪರಿಸರ ಸಂರಕ್ಷಿಸಿ… ಎಂದು ಬರೆಯಲಾಗಿದೆ. ಜತೆಗೆ ನಿಲ್ದಾಣದ ಒಳ ಭಾಗದ ಗೋಡೆಯ ಮೇಲೆ ಸ್ವಚ್ಛತೆ ಯನ್ನು ಕಾಪಾಡಿ, ಕಡ್ಡಾಯವಾಗಿ ಬಿತ್ತಿ ಪತ್ರಗಳನ್ನು ಅಂಟಿಸಬಾರದು. ನೀರನ್ನು ಮಿತವಾಗಿ ಬಳಸಿ, ಸ್ವಚ್ಛತೆಗೆ ಮೊದಲ ಆದ್ಯತೆ. ಗಿಡ-ಮರಗಳನ್ನು ಬಳಸಿ-ಪರಿ ಸರ ಸಂರಕ್ಷಿಸಿ, ಕಸವನ್ನು ಎಲ್ಲೆಂದರಲ್ಲಿ ಹಾಕದೆ ಸೂಕ್ತ ಸ್ಥಳದಲ್ಲಿ ಹಾಕಬೇಕು. ಹಸಿರು ನಗರ ಸ್ವಚ್ಛ ಮೈಸೂರು ಎಂದು ಬರೆದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

Translate »