ಭಾಷೆಯೇ ಭವಿಷ್ಯಕ್ಕೆ ದಾರಿ ಎಂಬುದನ್ನು ಸರ್ಕಾರ ಅರಿಯಲಿ
ಮೈಸೂರು

ಭಾಷೆಯೇ ಭವಿಷ್ಯಕ್ಕೆ ದಾರಿ ಎಂಬುದನ್ನು ಸರ್ಕಾರ ಅರಿಯಲಿ

February 15, 2020

ಮೈಸೂರು,ಫೆ.14(ಆರ್‍ಕೆಬಿ)- ಶಿಕ್ಷಣದಲ್ಲಿ ಭಾಷೆಯೇ ಭವಿಷ್ಯಕ್ಕೆ ದಾರಿ ಎಂಬು ದನ್ನು ಸರ್ಕಾರಗಳು ಅರಿತುಕೊಳ್ಳಬೇಕು ಎಂದು ರಂಗಭೂಮಿ ಮತ್ತು ಚಲನಚಿತ್ರ ನಟ `ಮುಖ್ಯಮಂತ್ರಿ’ ಚಂದ್ರು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋ ಜಿಸಿದ್ದ ಸಂವಾದದಲ್ಲಿ ಮನದಾಳದ ಮಾತು ಗಳನ್ನಾಡಿದ ಅವರು, ಭಾಷೆ ಬೆಳವಣಿಗೆ ಯಲ್ಲಿ ಸರ್ಕಾರಗಳು ಬೇಜವಾಬ್ದಾರಿತನ ದಿಂದ ನಡೆದುಕೊಂಡಿವೆ. ನಿರ್ದಿಷ್ಟ ಮತ್ತು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳು ತ್ತಿಲ್ಲ. ಭಾಷೆ ಬಗೆಗೆ ಅಧಿಕಾರಿಗಳದ್ದು ನಿರ್ಲಕ್ಷ್ಯ ಧೋರಣೆ ಎಂದು ಬೇಸರದಿಂದ ನುಡಿದರು.

ಸರೋಜಿನಿ ಮಹಿಷಿ ವರದಿ ಜಾರಿಯಾಗ ಬೇಕು. ಆದರೆ `ಆದ್ಯತೆ’ ಪ್ರಕಾರ ಕೆಲಸ ಕೊಡು ವುದರಿಂದ ಏನೂ ಪ್ರಯೋಜನವಿಲ್ಲ. `ಕನ್ನ ಡಿಗರಿಗೆ ಉದ್ಯೋಗ ಕಡ್ಡಾಯ’ ಮಾಡ ಬೇಕೇ ಹೊರತು ಆದ್ಯತೆಯಾಗಿ ಅಲ್ಲ ಎಂದರು.ಸರ್ಕಾರಗಳು ರಂಗಭೂಮಿಯನ್ನು ಹತ್ತಿಕ್ಕಿವೆ. ಇಂದು ರಂಗಭೂಮಿ ಹೋರಾ ಟಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ನೋವಿನಿಂದ ನುಡಿದರು.

ಮುಂದುವರಿದು ಮಾತನಾಡಿದ ಅವರು, ಮುಖ್ಯಮಂತ್ರಿ ನಾಟಕ ನೋಡಿದ ಹಲವಾರು ಚಿತ್ರ ನಿರ್ದೇಶಕರು ನನ್ನ ಅಭಿನಯ, ಮಾತಿನ ದಾಟಿ, ದೇಹ ಭಾಷೆ ಗಮನಿಸಿ ಸಿನೆಮಾಕ್ಕೆ ಆಹ್ವಾನಿಸಿದರು. ಚಕ್ರವ್ಯೂಹ ಚಿತ್ರದಲ್ಲಿನ ರಾಜ ಕಾರಣಿ ಪಾತ್ರ ಯಶಸ್ವಿಯಾಯಿತು. ಅಂದಿ ನಿಂದ `ಮುಖ್ಯಮಂತ್ರಿ ಚಂದ್ರು’ ಆಗಿ ಬೆಳ್ಳಿ ತೆರೆ ಮೇಲೆ ಮಿಂಚಲು ಕಾರಣವಾಯಿತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ನಂತರ 1985ರಿಂದ ಆರಂಭವಾದ ರಾಜ ಕೀಯ ಪಯಣದಲ್ಲಿ ಶಾಸಕ, ಎಂಎಲ್‍ಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕನ್ನಡಪರ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ರಂಗದ ಜೊತೆಗೆ ಸಂಬಂಧ ಇಟ್ಟುಕೊಂಡೇ ಮುಂದುವರೆದೆ. ಪ್ರತಿ ವರ್ಷ ಮುಖ್ಯಮಂತ್ರಿ ನಾಟಕ ಪ್ರದರ್ಶನ ಗಳು ನಡೆಯುತ್ತಲೇ ಬಂದಿದೆ ಎಂದರು.

ಮುಖ್ಯಮಂತ್ರಿ ನಾಟಕ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳಲ್ಲಿ ಸುತ್ತಾಡಿದೆ. ಅಮೆರಿಕ ಮತ್ತಿತರ ದೇಶಗಳಲ್ಲಿ 8-10 ಪ್ರದರ್ಶನಗಳನ್ನು ನೀಡಿದ್ದೇವೆ. ಸದ್ಯದಲ್ಲೇ ಲಂಡನ್‍ನಲ್ಲಿ ಪ್ರದÀರ್ಶನಕ್ಕೆ ಹೋಗುತ್ತಿ ದ್ದೇವೆ. ಇಂದಿಗೂ ಮುಖ್ಯಮಂತ್ರಿ ನಾಟಕ ಹೌಸ್‍ಫುಲ್ ಪ್ರದರ್ಶನಗಳನ್ನೇ ಕಾಣು ತ್ತಿದೆ ಎಂದರು. ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಸಹ ಒಮ್ಮೆ ನಾಟಕ ನೋಡಿ ದರು. ಬಳಿಕ ನಾಟಕವನ್ನು ಎಲ್ಲಿ ನಿಲ್ಲಿಸಿ ಬಿಡುತ್ತಾರೋ ಎಂಬ ಆತಂಕ ನಮ್ಮದಾಗಿತ್ತು. ಆದರೆ ಅವರು ನನ್ನನ್ನು ಭೇಟಿ ಮಾಡಿ, ನನ್ನನ್ನು ಕೇಳಿದ್ದರೆ ಇನ್ನಷ್ಟು ಮಾಹಿತಿ ನೀಡುತ್ತಿದ್ದೆ ಎಂದು ಗುಂಡೂರಾವ್ ಹೇಳಿ ದ್ದನ್ನು ಚಂದ್ರು ಸ್ಮರಿಸಿದರು.

ಆತ್ಮತೃಪ್ತಿ: ರಾಜಕಾರಣವನ್ನು ತೆವಲಿಗಾಗಿ ಪ್ರವೃತ್ತಿ ಮಾಡಿಕೊಂಡೆ. ನನಗೆ ನಾಟಕದಲ್ಲಿ ಹಣ ಸಿಗಲ್ಲ. ಆದರೆ ಆತ್ಮತೃಪ್ತಿ ಸಿಗುತ್ತದೆ. ಪರಿ ಸ್ಥಿತಿಗೆ ಅನುಗುಣವಾಗಿ ನನ್ನ ತನವನ್ನು ಉಳಿಸಿ ಕೊಂಡು ಬಂದಿದ್ದೇನೆ ಎಂದರು. ಸಂವಾದದಲ್ಲಿ ರಂಗಾಯಣ ಮಾಜಿ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾಧ್ಯಕ್ಷ ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರು.

Translate »