ಕನ್ನಡ ಭಾಷಾ ತಂತ್ರಾಂಶ ಅಭಿವೃದ್ಧಿಯಾಗಲಿ
ಮೈಸೂರು

ಕನ್ನಡ ಭಾಷಾ ತಂತ್ರಾಂಶ ಅಭಿವೃದ್ಧಿಯಾಗಲಿ

August 27, 2019

ಮೈಸೂರು, ಆ.26(ಪಿಎಂ)- ಪ್ರಸ್ತುತ ಇಂಗ್ಲಿಷ್ ಭಾಷೆಯೊಂದಿಗೆ ಪೈಪೋಟಿ ನಡೆಸಿ ಕನ್ನಡ ಭಾಷೆ ಉಳಿದು ಬೆಳೆಯಬೇಕಿದ್ದು, ಅದಕ್ಕಾಗಿ ಕನ್ನಡ ಭಾಷಾ ತಂತ್ರಾಂಶದ (ಸಾಫ್ಟ್‍ವೇರ್) ಅಭಿವೃದ್ಧಿಯಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಅಭಿಪ್ರಾಯಪಟ್ಟರು.

ಹಾವೇರಿಯ ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನ, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಂಟಿ ಆಶ್ರಯದಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2018ರ ಗಳಗ ನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ಜಗತ್ತೇ ಮೊಬೈಲ್, ಕಂಪ್ಯೂಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಡಕವಾಗಿದೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದು, ಈ ವ್ಯವಸ್ಥೆಗಳಿಗೆ ಕನ್ನಡ ಅಳವಡಿಕೆ ಸಮರ್ಥವಾಗಿ ಆಗಬೇಕಿದೆ. ಆ ಮೂಲಕ ಕನ್ನಡ ಓದುಗರ ವರ್ಗ ವಿಸ್ತಾರಗೊಳ್ಳಬೇಕಿದೆ. ಕನ್ನಡ ಭಾಷೆ ಉಳಿದು ಬೆಳೆಯಲು ಅದರ ತಂತ್ರಾಂಶ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ನಾನಿ ದ್ದಾಗ 2010ರಲ್ಲಿ ಡಾ.ಚಿದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ `ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ’ ರಚನೆ ಮಾಡಲಾಗಿತ್ತು. ಬಳಿಕ ಸಮಿತಿ ನೀಡಿದ್ದ ವರದಿಯ ಅಂಶ ಗಳ ಪೈಕಿ ಶೇ.60ರಷ್ಟು ಅನುಷ್ಠಾನಗೊಳಿಸು ವಲ್ಲಿ ಸಫಲತೆ ಕಾಣಲಾಗಿದೆ. ಇದೀಗ ಪರಿಷ್ಕರಣೆ ಮೂಲಕ ಉಳಿದ ಅಂಶಗಳ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ಕುಲಪತಿಗಳ ಸಹಕಾರ ಅಗತ್ಯ: ಕಂಪ್ಯೂ ಟರ್ ತಜ್ಞರಾದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಈಗಾಗಲೇ ತಂತ್ರಾಂಶ ಅಭಿವೃದ್ಧಿಗೆ ಸಂಬಂಧ ವರದಿಯ ಅಧ್ಯಯನ ನಡೆಸುತ್ತಿರುವುದು ಸಂತಸದ ವಿಚಾರ. ತಂತ್ರಾಂಶ ಅಭಿವೃದ್ಧಿ ಸಮಿತಿಯ ವರು ಪ್ರೊ.ಜಿ.ಹೇಮಂತ್‍ಕುಮಾರ್ ಅವರ ಸಹಕಾರ ಪಡೆದುಕೊಳ್ಳಬೇಕು. ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತರನ್ನು ಇಂದು ಸ್ಮರಣೆ ಮಾಡಿಕೊಳ್ಳುತ್ತಿರುವುದು ಅರ್ಥ ಪೂರ್ಣ. ನಾನು ಇಲಾಖೆಯ ಸೇವೆಯಲ್ಲಿದ್ದಾಗ ಒಮ್ಮೆ ನನ್ನ ಕಚೇರಿಗೆ ಎಂ.ಎಂ.ಕಲಬುರ್ಗಿ ಬಂದಿದ್ದರು. ಈ ವೇಳೆ ರಾಜ ಪುರೋಹಿತರ ಬಗ್ಗೆ ಸುದೀರ್ಘವಾಗಿ ತಿಳಿಸಿ ಕೊಟ್ಟಿದ್ದರು. ಕನ್ನಡ ಉಳಿದು ಬೆಳೆಯಲು ಕನ್ನಡ ಓದ ಬೇಕು ಎಂದು ಪ್ರತಿಪಾದಿಸಿದ ಗಳಗನಾಥರು ಸಾಹಿತ್ಯ ಕೃಷಿ ನಡೆಸಿ ಓದುಗರು ಬೆಳೆಯಲು ಅಪಾರ ಕೊಡುಗೆ ನೀಡಿದರು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇ ಶಕಿ ಕೆ.ಎಂ.ಜಾನಕಿ ಮಾತನಾಡಿ, ಗಳಗನಾಥ ಮತ್ತು ನಾ. ಶ್ರೀರಾಜಪುರೋಹಿತ ಇಬ್ಬರು ವೃತ್ತಿಯಲ್ಲಿ ಶಿಕ್ಷಕರು. ಇವರು ಕನ್ನಡ ಕಟ್ಟು ವಲ್ಲಿ ಬದ್ಧತೆ ಮೆರೆದವರು. ಈ ಇಬ್ಬರು ಮಹ ನೀಯರ ಕನ್ನಡ ಸಾಹಿತ್ಯವನ್ನು ಇನ್ನಿತರ ಭಾಷೆಗೂ ಭಾಷಾಂತರ ಮಾಡುವುದೂ ಸೇರಿ ದಂತೆ ಕನ್ನಡ ಕಟ್ಟುವ ಕೆಲಸವನ್ನು ಪ್ರತಿಷ್ಠಾನ ಮಾಡಲಿ. ನಮ್ಮ ಇಲಾಖೆ ಇದಕ್ಕೆ ಸಾಧ್ಯವಿ ರುವ ಎಲ್ಲಾ ಸಹಕಾರ ನೀಡಲಿದೆ ಎಂದರು.

2 ಕೋಟಿ ಅನುದಾನ ನೀಡಿ: ಪ್ರಾಸ್ತಾ ವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ, ಕನ್ನಡ ಸಾಹಿತ್ಯ ಕಾವ್ಯ ಪ್ರಕಾರದಲ್ಲೇ ಹೆಚ್ಚಿದ್ದ ಸಂದರ್ಭ ದಲ್ಲಿ ಗದ್ಯ ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡಿ ಕನ್ನಡದ ಅಭಿಮಾನ ಮೂಡಿಸಿ ದವರು ಗಳಗನಾಥರು. ಇವರನ್ನು `ಆಧು ನಿಕ ಕನ್ನಡ ಸಾಹಿತ್ಯದ ಆದ್ಯ ಕರ್ತೃ’ ಎಂದೇ ವಿಮರ್ಶಕರು ಕರೆಯುತ್ತಾರೆ. 24ಕ್ಕೂ ಹೆಚ್ಚು ಕಾದಂಬರಿಗಳನ್ನು ಗಳಗನಾಥರು ಬರೆದಿ ದ್ದಾರೆ. ರಾಜಪುರೋಹಿತರು ಕನ್ನಡ ಪ್ರಚಂಡ ಅಭಿಮಾನ ಮೂಡಿಸಲು ಶ್ರೇಷ್ಠ ಸಂಶೋ ಧನೆ ನಡೆಸಿದವರು. ಹಾವೇರಿಯಲ್ಲಿ ಪ್ರತಿ ಷ್ಠಾನದ ಭವನ ನಿರ್ಮಾಣಕ್ಕೆ ನಿವೇಶನ ದೊರೆ ತಿದ್ದು, ಭವನ ನಿರ್ಮಿಸಲು ಸರ್ಕಾರ 2 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಿದರು. ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಉದ್ಘಾ ಟನೆ ನೆರವೇರಿಸಿದರು. ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕ ಟೇಶ್, ಹಿರಿಯ ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಎನ್.ಎಂ.ತಳವಾರ, ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಮತ್ತಿತರರು ಹಾಜರಿದ್ದರು.

 

Translate »