ಪಿ.ಚಿದಂಬರಂ ಮತ್ತೆ  4 ದಿನ ಸಿಬಿಐ ವಶಕ್ಕೆ
ಮೈಸೂರು

ಪಿ.ಚಿದಂಬರಂ ಮತ್ತೆ  4 ದಿನ ಸಿಬಿಐ ವಶಕ್ಕೆ

August 27, 2019

ನವದೆಹಲಿ,ಆ.26-ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಸಚಿವ ಪಿ.ಚಿದಂ ಬರಂ ಅವರ ಸಂಕಷ್ಟ ಮುಂದುವರಿದಿದೆ. ಸುಪ್ರೀಂಕೋರ್ಟ್ ನಿಂದ ಜಾಮೀನು ದೊರೆತು ಬಂಧನದಿಂದ ಹೊರಬರ ಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಆಘಾತ ಎದು ರಾಗಿದೆ. ಅತ್ತ ಸಿಬಿಐ ವಿಶೇಷ ನ್ಯಾಯಾಲಯವು ಅವರನ್ನು ಮತ್ತೆ 4 ದಿನ ಸಿಬಿಐ ವಶಕ್ಕೆ ಒಪ್ಪಿಸಿದೆ. ಇದರಿಂದ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿಬಿಐ ವಿಶೇಷ ನ್ಯಾಯಾಲಯವು ಚಿದಂಬರಂ ಅವರ ಸಿಬಿಐ ವಶದ ಅವಧಿಯನ್ನು ಆ.30ರವರೆಗೂ ವಿಸ್ತರಿಸಿದೆ.

ಸುಪ್ರೀಂಕೋರ್ಟ್ ಮುಂದೆ ಚಿದಂಬರಂ ಅವರ ಮೂರು ಅರ್ಜಿಗಳು ವಿಚಾ ರಣೆಗೆ ಬಂದಿದ್ದವು. ಅವುಗಳಲ್ಲಿ ಒಂದೂ ಅವರ ಸಹಾಯಕ್ಕೆ ಬರಲಿಲ್ಲ. ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಮಾತ್ರ ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಆದರೆ, ಮಂಗಳವಾರ ದವರೆಗೆ ಮಾತ್ರ ಈ ರಕ್ಷಣೆ ನೀಡಲಾಗಿದೆ. ಈಗಾಗಲೇ ಸಿಬಿಐ ವಶದಲ್ಲಿರುವುದರಿಂದ ಅವರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ. ಜಾರಿ ನಿರ್ದೇಶನಾಲಯವು ದಾಖಲಿಸಿರುವ ಐಎನ್‍ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಅವರನ್ನು ಬಂಧಿಸಲು ಉದ್ದೇಶಿಸಿದೆ. ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ದೆಹಲಿ ಹೈಕೋರ್ಟ್‍ನ ಆದೇಶದ ವಿರುದ್ಧದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಂದುವರಿಸುವುದಾಗಿ ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಎಎಸ್ ಬೋಪಣ್ಣ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ.

Translate »