ಗ್ರಾಮ ಪಂಚಾಯಿತಿ ಉಪಚುನಾವಣೆ ಫೆ.11ರವರೆಗೆ ಮದ್ಯದ ಅಂಗಡಿ ಬಂದ್
ಮೈಸೂರು

ಗ್ರಾಮ ಪಂಚಾಯಿತಿ ಉಪಚುನಾವಣೆ ಫೆ.11ರವರೆಗೆ ಮದ್ಯದ ಅಂಗಡಿ ಬಂದ್

February 4, 2020

ಮೈಸೂರು, ಫೆ.3-ಮೈಸೂರು ಜಿಲ್ಲೆಯ 24 ಗ್ರಾಮ ಪಂಚಾಯಿತಿಯಲ್ಲಿ ತೆರ ವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಸಂಬಂಧ ಜನವರಿ 25ರಿಂದ ಫೆಬ್ರವರಿ 11ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಮೈಸೂರು ತಾಲೂಕಿನಲ್ಲಿ ಯಡಕೊಳ, ಸಿದ್ದಲಿಂಗಪುರ, ದೂರ, ಶ್ರೀರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಉಪಚುನಾವಣೆ ನಡೆಯಲಿದೆ. ನಂಜನಗೂಡು ತಾಲೂಕಿನ ಕೂಡ್ಲಾಪುರ, ಸಿಂಧುವಳ್ಳಿ, ಹುಣಸೂರು ತಾಲೂಕಿನ ಜಾಬಗೆರೆ, ಬೋಳನಹಳ್ಳಿ, ಬನ್ನಿಕುಪ್ಪೆ, ಮರದೂರು, ಬೀಜಗನಹಳ್ಳಿ, ಕಡೇಮನುಗನಹಳ್ಳಿ, ನೇರಳಕುಪ್ಪೆ, ಕೆ.ಆರ್.ನಗರ ತಾಲೂಕಿನ ಹೆಬ್ಬಾಳ, ಹಳೆಯೂರು, ಹಂಪಾಪುರ, ಚಂದಗಾಲು, ಅಡಗೂರು, ನರಚ ಹಳ್ಳಿ, ಹೊಸಕೋಟೆ, ಹನಸೋಗೆ, ಕರ್ಪೂರವಳ್ಳಿ ಹಾಗೂ ಪಿರಿಯಾಪಟ್ಟಣ ತಾಲೂ ಕಿನ ಹಲಗನಹಳ್ಳಿ ಹಾಗೂ ರಾವಂದೂರುಗಳಲ್ಲಿ ಉಪ ಚುನಾವಣೆ ನಡೆಯಲಿದೆ.

ಗ್ರಾಮ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಳಪಡುವ ಗ್ರಾಮಗಳೂ ಸೇರಿದಂತೆ ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿ ಮತ್ತು ಮದ್ಯ ಮಾರಾಟ ತಯಾರಿಕಾ ಘಟಕಗಳನ್ನು ವ್ಯವಸ್ಥಾಪಕರು ಮುಚ್ಚುವಂತೆ ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ವ್ಯಾಪ್ತಿಯುಳ್ಳ ಕಾರ್ಯನಿರ್ವಾ ಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Translate »