ಮನೆ ಹಾನಿ ವಿವರದ ಪಟ್ಟಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ
ಕೊಡಗು

ಮನೆ ಹಾನಿ ವಿವರದ ಪಟ್ಟಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ

September 29, 2018

ಮಡಿಕೇರಿ: ಜಿಲ್ಲೆಯಲ್ಲಿ ಈ ವರ್ಷ ಬಿದ್ದ ಭಾರೀ ಮಳೆ ಯಿಂದ ಅತಿವೃಷ್ಟಿ ಹಾಗೂ ಭೂಕುಸಿತ ಉಂಟಾಗಿದ್ದು, ಆದ ಕಾರಣ ತೀವ್ರ ಪ್ರಮಾಣದಲ್ಲಿ ಮನೆಗಳು ಹಾನಿಯಾಗಿರುತ್ತದೆ. ಅದರಂತೆ ಹಾನಿಯಾಗಿರುವ ಪ್ರದೇಶಗಳ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಪರಿವೀಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳು ಜಂಟಿ ತಪಾಸಣೆ ನಡೆಸಿ ವಾಸಕ್ಕೆ ಯೋಗ್ಯವಿಲ್ಲದ ಹಾನಿಯಾದ ಮನೆಗಳನ್ನು ಗುರುತಿಸಿದ್ದು, ಈ ಮನೆ ಹಾನಿ ವಿವರದ ಪಟ್ಟಿಯನ್ನು ಸೆ.29 ರಂದು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ, ನಗರಸಭೆ, ಮಡಿಕೇರಿ ಹಾಗೂ ಪಟ್ಟಣ ಪಂಚಾಯಿತಿ, ಕುಶಾಲನಗರ ಕಚೇರಿಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.

ಆದ್ದರಿಂದ ಸಾರ್ವಜನಿಕರು, ಫಲಾನುಭವಿಗಳು ತಮಗೆ ಸಂಬಂಧಪಟ್ಟ ಗ್ರಾಪಂಗಳಲ್ಲಿ, ನಗರಸಭೆ, ಮಡಿಕೇರಿ ಹಾಗೂ ಪಟ್ಟಣ ಪಂಚಾಯಿತಿ, ಕುಶಾಲನಗರ ಕಚೇರಿಗಳಲ್ಲಿ ಪ್ರಕಟಿಸಲಾದ ಮನೆ ಹಾನಿ ವಿವರದ ಪಟ್ಟಿಯನ್ನು ಗಮನಿಸುವಂತೆ ಹಾಗೂ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಅಕ್ಟೋಬರ್, 3ರೊಳಗೆ ತಮ್ಮ ಆಕ್ಷೇಪಣೆಗಳನ್ನು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ, ನಗರಸಭೆ ಮಡಿಕೇರಿ ಹಾಗೂ ಪಟ್ಟಣ ಪಂಚಾಯಿತಿ ಕುಶಾಲನಗರ ಕಚೇರಿಗಳಲ್ಲಿ ಸಲ್ಲಿಸಬಹು ದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Translate »