ಆಟೋ ಚಾಲಕರು ಉತ್ತಮ ಸಮಾಜ ಸೇವಕರಾಗಬೇಕು
ಕೊಡಗು

ಆಟೋ ಚಾಲಕರು ಉತ್ತಮ ಸಮಾಜ ಸೇವಕರಾಗಬೇಕು

September 29, 2018

ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ
ವಿರಾಜಪೇಟೆ: ಆಟೋ ಚಾಲಕರ ಕೆಲಸ ಪವಿತ್ರವಾದ ಸೇವೆ ಎಂದು ತಿಳಿದು ಕೊಂಡು ಸಾರ್ವಜನಿಕರೊಂದಿಗೆ ವಿಶ್ವಾಸದಿಂದ ತಮ್ಮ ಕರ್ತವ್ಯ ಮಾಡುವುದರೊಂದಿಗೆ ಉತ್ತಮ ಸಮಾಜ ಸೇವಕರಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಲಕ್ಷ್ಮಣ ಅಂಚಿ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ ಹಾಗೂ ನಗರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಆಟೋ ಚಾಲಕರಿಗಾಗಿ ಸ್ಥಳೀಯ ಪುರಭವನ ದಲ್ಲಿ ಆಯೋಜಿಸಲಾಗಿದ್ದ ”ಪೊಲೀಸ್ ದೂರು ಪ್ರಾಧಿಕಾರ- ಸಂತ್ರಸ್ತರ ಪರಿಹಾರ ಯೋಜನೆಯ ಬಗ್ಗೆ ಮತ್ತು ಆಟೋ ಚಾಲಕರಿಗೆ ಪರವಾನಿಗೆಯ ಮಾಹಿತಿ ಫಲಕ ವಿತರಣಾ ಕಾರ್ಯಕ್ರಮ”ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ದೀಪ ಬೆಳಗಿಸಿದ ಬಳಿಕ ಮಾತನಾಡುತ್ತಾ ಆಟೋ ಚಾಲಕ ರಿಗೆ ಸರಕಾರದಿಂದ ಅನೇಕ ಸೌಲಭ್ಯಗಳಿದ್ದು ಅದನ್ನು ಪಡೆದುಕೊಳ್ಳುವ ಮೂಲಕ ಸಾರ್ವಜನಿ ಕರೊಂದಿಗೆ ನಂಬಿಕೆಯಿಂದ ಕೆಲಸ ಮಾಡಬೇಕು. ಕರ್ತವ್ಯದ ಸಂದರ್ಭ ಅಪಘಾತಗಳು ನಡೆಯ ದಂತೆ ಎಚ್ಚರ ವಹಿಸಬೇಕು. ತಾಲೂಕು ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನಿನ ಅರಿವು ನೀಡಲಾಗುವುದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ನ್ಯಾಯಾಧೀಶರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‍ಪಿ ನಾಗಪ್ಪ ಮಾತನಾಡಿ, ಪ್ರತಿಯೊಬ್ಬರು ಕಾನೂನು ಪಾಲಿ ಸಲೇಬೇಕು ಕಾನೂನು ಉಲ್ಲಂಘನೆಯಾದಲ್ಲಿ ಕ್ರಮ ತೆಗೆದುಕೊಳ್ಳುವ ಕೆಲಸ ಪೊಲೀಸರದು. ಜನರು ಆಟೋ ಚಾಲಕರನ್ನು ಉತ್ತಮ ರೀತಿ ಕಾಣುತ್ತಾರೆ ಚಾಲಕರು ಸಮಾಜ ಸೇವಕರಾಗಿರ ಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆ ಮಾಡುವಾಗ ಮದ್ಯಪಾನ ಸೇವಿಸಬಾರದು. ನಿರ್ಲಕ್ಷತೆ ಮತ್ತು ಅಜಾಗರೂಕತೆಯಿಂದ ವಾಹನಗಳನ್ನು ಓಡಿಸಬಾರದು. ಪೊಲೀಸ್ ಇಲಾಖೆ ಸಮಾಜದ ಕಟ್ಟಕಡೆಯ ಜನರಿಗೂ ನ್ಯಾಯ ಕೊಡುವಂತ ಕೆಲಸ ಮಾಡುತ್ತಿದೆ. ದಿನದ 24 ಗಂಟೆಗಳು ಪೊಲೀಸ್ ಠಾಣೆ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ.ನಂಜಪ್ಪ ಅವರು ಮಾತನಾಡಿ, ಚಾಲಕರ ವೃತ್ತಿ ಸಮಾಜ ಸೇವೆ ಮಾಡುವಂತಿರಬೇಕು. ಸಾರ್ವಜನಿಕರೊಂದಿಗೆ ಉತ್ತಮ ಬಾಂದವ್ಯ ಹೊಂದಿರಬೇಕು ಎಂದರು. ವಕೀಲರಾದ ಬಿ.ಅನುಪಮ ಕಿಶೋರ್ ಸಂತ್ರಸ್ತರ ಪರಿಹಾರ ಯೋಜನೆಯ ಬಗ್ಗೆ ಮಾಹಿತಿ ನೀಡಿ ದರು. ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸರ್ಕಲ್ ಇನ್ಸ್‍ಪ್ಯೆಕ್ಟರ್ ಕುಮಾರ್ ಆರಾದ್ಯ, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಭೋಪಣ್ಣ ಮುಂತಾದವರು ಉಪಸ್ಥಿತರಿದಸ್ದರು.

ಸಭೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ.ಶಶಿಧರನ್ ಮಾತನಾಡಿ, ಆಟೋ ಚಾಲ ಕರು ಹಿಂದಿನಿಂದಲೂ ಜನರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು, ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನಿಂದ ವಿರಾಜಪೇಟೆಗೆ ಬಂದಂತ ವ್ಯಕ್ತಿ ಆಟೋ ಚಾಲಕನೆಂದು ಹೇಳಿ ಬೇಡದ ಕೆಲಸ ಮಾಡಿ ಈಗ ಇತರೆ ಆಟೋ ಚಾಲಕರಿಗೂ ಕಪ್ಪು ಚುಕ್ಕಿ ಬಂದಂತಾಗಿದೆ. ಪೊಲೀಸರು ಆತನನ್ನು ಬಂದಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

Translate »