ಎರಡು ಮುಡಾ ನಿವೇಶನ ದಕ್ಕಿಸಿಕೊಂಡ ಅದೃಷ್ಟವಂತೆ!
ಮೈಸೂರು

ಎರಡು ಮುಡಾ ನಿವೇಶನ ದಕ್ಕಿಸಿಕೊಂಡ ಅದೃಷ್ಟವಂತೆ!

October 27, 2019

ಮೈಸೂರು,ಅ.26-ಮುಡಾ ನಿವೇಶನ ಕ್ಕಾಗಿ ಅರ್ಜಿ ಹಾಕಿ ದಶಕಗಳಿಂದ ಕಾದು ಕುಳಿತಿರುವವರ ಸಂಖ್ಯೆ ದೊಡ್ಡದಿದೆ. ಆದರೆ ಮಹಿಳೆಯೊಬ್ಬರಿಗೆ 2 ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ಮುಡಾ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ನಿವೇಶನ ಆಕಾಂಕ್ಷಿಗಳಿಗೆ ಮಹಾದ್ರೋಹವೆಸಗಿದೆ. ಮುಡಾದಲ್ಲಿ ಗೋಲ್‍ಮಾಲ್ ನಡೆಯುತ್ತಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಮತ್ತೊಂದು ಪುಷ್ಟಿ ದೊರೆತಂತಾಗಿದೆ.

ಕುವೆಂಪುನಗರದ ನಿವಾಸಿ ರಾಜೇಶ್ವರಿ ಅವರು 2 ಮುಡಾ ನಿವೇಶನಗಳ ಮಾಲೀಕ ರಾಗಿದ್ದಾರೆ. ನೂತನವಾಗಿ ಅಕ್ಕಪಕ್ಕದಲ್ಲೇ ನಿರ್ಮಿಸಿರುವ ಶಾಂತವೇರಿ ಗೋಪಾಲಗೌಡ ನಗರದಲ್ಲಿ 20×30 ಹಾಗೂ ಲಾಲ್ ಬಹ ದ್ದೂರ್ ಶಾಸ್ತ್ರಿ ನಗರದಲ್ಲಿ 30×40 ವಿಸ್ತೀ ರ್ಣದ ನಿವೇಶಗಳ ಫಲಾನುಭವಿಯಾಗಿ ದ್ದಾರೆ. ಮಂಜೂರು ಮಾಡಿರುವ 2 ನಿವೇಶನ ಗಳ ಸ್ವಾಧೀನ ಪತ್ರವನ್ನೂ ರಾಜೇಶ್ವರಿ ಅವರಿಗೆ ನೀಡಲಾಗಿದೆ. ಶಾಂತವೇರಿ ಗೋಪಾಲ ಗೌಡ ನಗರದ ಕ್ರಮ ಸಂಖ್ಯೆ 1572ರ ನಿವೇಶನವನ್ನು ಕೇವಲ 28 ಸಾವಿರ ರೂ. ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಕ್ರಮ ಸಂಖ್ಯೆ 2305ರ ನಿವೇಶನವನ್ನು 75,640 ರೂ.ಗಳಿಗೆ ಕೇವಲ 2 ದಿನಗಳ ಅಂತರದಲ್ಲಿ ಮಂಜೂರು ಮಾಡಲಾಗಿದೆ.

ಮುಡಾದಲ್ಲಿ 13ನೇ ತಿಂಗಳು: ಜನವರಿ ಯಿಂದ ಡಿಸೆಂಬರ್‍ವರೆಗೆ ಇರುವುದು 12 ತಿಂಗಳು ಮಾತ್ರ. ಆದರೆ ಮುಡಾದಲ್ಲಿ ನಿವೇ ಶನಕ್ಕೆ ನೋಂದಣಿ ಆಗಿರುವುದು 13ನೇ ತಿಂಗಳಲ್ಲಿ. ಒಂದು ನಿವೇಶನದ ಅರ್ಜಿ 5 ಮಾರ್ಚ್ 1992ರಲ್ಲಿ ನೋಂದಣಿಯಾಗಿ ದ್ದರೆ ಮತ್ತೊಂದು ಅರ್ಜಿ 5-13-1992ರಲ್ಲಿ ನೋಂದಣಿಯಾಗಿದೆ ಎಂದು ದಾಖಲಿಸಲಾ ಗಿದೆ. ಕ್ಯಾಲೆಂಡರ್‍ನಲ್ಲಿ ಇರುವುದು 12 ತಿಂಗಳು ಮಾತ್ರ ಎಂಬ ಕನಿಷ್ಠ ಜ್ಞಾನವೂ ಮುಡಾ ಸಿಬ್ಬಂದಿಗಿಲ್ಲ. ದಾಖಲೆಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸದೆ ಸಿಬ್ಬಂದಿಗಳು ಮಾಡಿ ರುವ ಎಡವಟ್ಟಿನಿಂದ 2007ರ ಸೆ.1ರಂದು 2 ನಿವೇಶನಗಳು ರಾಜೇಶ್ವರಿ ಅವರಿಗೆ ಮಂಜೂ ರಾಗಿದೆ. 3 ದಿನಗಳ ಅಂತರದಲ್ಲೇ ಎರಡೂ ನಿವೇಶನಗಳ ಸ್ವಾಧೀನ ಪತ್ರವನ್ನೂ ನೀಡಿ ದ್ದಾರೆ. 2 ನಿವೇಶನ ಮಂಜೂರಾಗುವ ವೇಳೆ ರಾಜೇಶ್ವರಿ ಅವರು ನಮಗೆ ಯಾವುದೇ ನಿವೇಶನಗಳು ಇಲ್ಲವೆಂದು ಅಫಿಡವಿಟ್ ಸಲ್ಲಿಸಿದ್ದಾರೆ. ಶಾಂತವೇರಿ ಗೋಪಾಲಗೌಡ ನಗರಕ್ಕೆ ಸಂಬಂಧಿಸಿದಂತೆ ಸೀನಿಯಾರಿಟಿ ಕಳೆದುಕೊಂಡರೂ ರಾಜೇಶ್ವರಿ ಅವರಿಗೆ ನಿವೇ ಶನ ಮಂಜೂರು ಮಾಡಲಾಗಿದೆ. ನಂತರ ಲಾಲ್ ಬಹದ್ದೂರ್‍ಶಾಸ್ತ್ರಿ ನಗರದ ನಿವೇಶನದ ಸೀನಿಯಾರಿಟಿ ಪರಿಶೀಲನಾ ಪಟ್ಟಿಯಲ್ಲಿ ಮೂಲ ಅರ್ಜಿಯೇ ಇಲ್ಲವೆಂದು ನಮೂದಿಸ ಲಾಗಿದೆ. ಯಾವುದೇ ವ್ಯಕ್ತಿಗೆ ನಿವೇಶನ ಹಂಚಿಕೆ ಮಾಡುವಾಗ ಸೀನಿಯಾರಿಟಿ ಪರಿಶೀಲನೆ ನಡೆಸಲಾಗುತ್ತದೆ. ಆದರೆ ಯಾವುದೇ ನಿಯಮಾ ವಳಿಯನ್ನು ಪಾಲಿಸದೆ ಮುಡಾ ಸಿಬ್ಬಂದಿ 2 ನಿವೇಶನ ಮಂಜೂರು ಮಾಡಿದ್ದಾರೆ

Translate »