ಶಿಕ್ಷಕರು-ಪೋಷಕರ ನಡುವೆ ಮಧುರ ಬಾಂಧವ್ಯವಿರಬೇಕು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಭಿಮತ
ಮೈಸೂರು

ಶಿಕ್ಷಕರು-ಪೋಷಕರ ನಡುವೆ ಮಧುರ ಬಾಂಧವ್ಯವಿರಬೇಕು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಭಿಮತ

October 27, 2019

ಮೈಸೂರು, ಅ. 26- ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುವ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಹಾಗೂ ಸಮನ್ವಯತೆ ಸಾಧಿಸು ವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ಉತ್ತಮ ಸೇತುವೆ ನಿರ್ಮಿಸ ಬಹುದು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಶ್ರೀಮತಿ ರತ್ನಪ್ರಭಾ ಅವರು ಕರೆ ನೀಡಿದರು.

ಶುಕ್ರವಾರ ನಗರದ ಕಲಾಮಂದಿರದಲ್ಲಿ ಕೌಟಿಲ್ಯ ವಿದ್ಯಾಲಯದ ವತಿಯಿಂದ ಏರ್ಪ ಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಅವರು ಮಾತನಾಡಿದರು.

ವ್ಯಾಸಂಗಕ್ಕಾಗಿ ಶಾಲೆಗೆ ಬರುವ ಮಕ್ಕಳು ದಿನದಲ್ಲಿ 6ರಿಂದ 8 ಗಂಟೆಗಳ ಕಾಲ ಶಿಕ್ಷಕ ರೊಂದಿಗೆ ಕಳೆಯುತ್ತಾರೆ. ಪೋಷಕರನ್ನು ಬಿಟ್ಟರೆ, ಶಿಕ್ಷಕರೊಂದಿಗೇ ಅತಿ ಹೆಚ್ಚು ಕಾಲ ಕಳೆಯುತ್ತಾರೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಲು ಅವರಲ್ಲಿನ ಪ್ರತಿಭೆಯನ್ನು ಹೊರ ತರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರು ಶಾಲಾ ದಿನಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ರೀತಿ ಬಹಳ ಮುಖ್ಯ. ನಾನು ನರ್ಸರಿ ಓದುವ ವೇಳೆ ಚಿಟ್ಟೆಯ ಮಾದರಿಯ ವಸ್ತುವನ್ನು ತೆಗೆದುಕೊಂಡು ಹೋಗಿದ್ದೆ. ಆದರೆ, ಶಿಕ್ಷಕಿಯೊಬ್ಬರು ಅದನ್ನು ನನ್ನಿಂದ ಕಸಿದುಕೊಂಡರು. ಮತ್ತೆ ವಾಪಸ್ ಕೊಡಲಿಲ್ಲ. ಈಗಲೂ ಕೂಡ ಆ ಘಟನೆ ಯನ್ನು ನಾನು ಮರೆತಿಲ್ಲ. ಹೀಗಾಗಿ ಮಕ್ಕಳ ಅಭಿರುಚಿಗೆ ಪೂರಕವಾಗಿ ಶಿಕ್ಷಕರು ನಡೆದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಮ್ಮ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಬದ್ಧತೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕಲಿ ತಲ್ಲಿ ಮುಂದಿನ ಭವಿಷ್ಯ ಉತ್ತಮವಾಗಿರು ತ್ತದೆ. ಕುಡಿಯುವ ನೀರು, ತಿನ್ನುವ ಆಹಾರ ಪೋಲು ಮಾಡದಂತೆ ಎಚ್ಚರ ವಹಿಸಬೇಕು. ಸ್ವಚ್ಚತೆಗೆ ಸಾಕಷ್ಟು ಗಮನ ಕೊಡಬೇಕು. ನೀವು ಸತ್ಪ್ರಜೆಗಳಾದಲ್ಲಿ ನೀವು ಕಲಿತ ಶಾಲೆ, ಪೋಷಕರಿಗೆ ಗೌರವ ತಂದಂತಾಗುತ್ತದೆ ಎಂದು ಹೇಳಿದರು.

ಇಂದಿನ ಕೌಟಿಲ್ಯ ವಿದ್ಯಾಲಯದ ಕಾರ್ಯ ಕ್ರಮವು ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಟ್ಟಿದೆ. ಇದರಿಂದ ನಾನು ಭಾವುಕ ಳಾಗಿದ್ದೇನೆ. ಅಜ್ಜನೊಂದಿಗೆ ಹೆಜ್ಜೆ, ಅಜ್ಜಿ ಯೊಂದಿಗೆ ಗೆಜ್ಜೆ ಕಾರ್ಯಕ್ರಮ ವೀಕ್ಷಿಸಿದ ಮೇಲೆ ನನಗೂ ಕೂಡ ನನ್ನ ಅಜ್ಜ, ಅಜ್ಜಿ ಯರು ನೆನಪಿಗೆ ಬಂದರು. ಹೀಗಾಗಿ ಕೌಟಿಲ್ಯ ಶಾಲೆಯ ಆಡಳಿತ ಮಂಡಳಿಗೆ ನಾನು ಕೃತಜ್ಞತೆ ಸಲ್ಲಿಸ ಬಯಸುತ್ತೇನೆ ಎಂದರು.

ಜೆಎಸ್‍ಎಸ್ ಕಾನೂನು ಕಾಲೇಜಿನ, ಮುಖ್ಯ ಕಾರ್ಯನಿರ್ವಾಹಕ ಕೆ.ಎಸ್. ಸುರೇಶ್, ‘ಕೌಟಿಲ್ಯ ವಿದ್ಯಾರತ್ನ’ ಪ್ರಶಸ್ತಿ ಯನ್ನು ಸಂಸ್ಥೆಯ ಶಿಕ್ಷಕರಾದ ಶ್ರೀಮತಿ ಹೆಚ್.ಮಧುಶ್ರೀ ಹಾಗೂ ಸಿ.ಎಸ್.ಗಣೇಶ್ ಅವರಿಗೆ ಪ್ರದಾನ ಮಾಡಿದರು. ಕಾರ್ಯ ಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ರಘು, ಮ್ಯಾನೆಜಿಂಗ್ ಟ್ರಸ್ಟಿ ಶ್ರೀಮತಿ ನಿರ್ಮಲ, ಶಾಲೆಯ ಪ್ರಾಂಶುಪಾಲರಾದ ಡಾ.ಎಲ್. ಸವಿತಾ, ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರೂ ವಿದ್ಯಾರ್ಥಿಗಳೂ ಹಾಗೂ ಪೋಷಕರೂ ಭಾಗವಹಿಸಿದ್ದರು.

Translate »