ಜವಾಬ್ದಾರಿ ಮರೆತ ಪಾಲಿಕೆ ಅಧಿಕಾರಿಗಳು! ಸಾರ್ವಜನಿಕರಿಗೆ ಸ್ಪಂದಿಸಿದ ಪೊಲೀಸರು!!
ಮೈಸೂರು

ಜವಾಬ್ದಾರಿ ಮರೆತ ಪಾಲಿಕೆ ಅಧಿಕಾರಿಗಳು! ಸಾರ್ವಜನಿಕರಿಗೆ ಸ್ಪಂದಿಸಿದ ಪೊಲೀಸರು!!

October 27, 2019

ಮೈಸೂರು,ಅ.26(ಎಸ್‍ಬಿಡಿ)- ಮೈಸೂರು ಗ್ರಾಮಾಂತರ(ಸಬರ್ಬನ್) ಬಸ್ ನಿಲ್ದಾ ಣದ ಬಳಿ ಫುಟ್‍ಪಾತ್ ಅತಿಕ್ರಮಣವನ್ನು ಲಷ್ಕರ್ ಠಾಣೆ ಪೊಲೀಸರು ತೆರವು ಮಾಡಿಸಿ, ಪಾದಚಾರಿಗಳ ಸುಗಮ ಸಂಚಾ ರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇಲ್ಲಿನ ಪ್ರೀ ಪೇಯ್ಡ್ ಆಟೋ ನಿಲ್ದಾ ಣದ ಸಮೀಪ ಫುಟ್‍ಪಾತ್ ಅತಿಕ್ರಮಣ ದಿಂದ ಪಾದಚಾರಿಗಳು ಅನುಭವಿಸುತ್ತಿದ್ದ ನರಕಯಾತನೆ ಬಗ್ಗೆ `ಮೈಸೂರು ಮಿತ್ರ’ ಬೆಳಕು ಚೆಲ್ಲಿತ್ತು. ಅ.25 ಹಾಗೂ 26ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಎಚ್ಚರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಇದನ್ನು ನಗರ ಪಾಲಿಕೆ ಅಧಿಕಾರಿಗಳಾಗಲೀ, ಜನಪ್ರತಿನಿಧಿ ಗಳಾಗಲೀ ಗಂಭೀರವಾಗಿ ಪರಿಗಣಿಸಲಿಲ್ಲ. ಒಬ್ಬರಿಂದ ಒಬ್ಬರಿಗೆ ಆದೇಶ ರವಾನಿಸಿ ದ್ದನ್ನು ಬಿಟ್ಟರೆ ಯಾರೊಬ್ಬರೂ ತುರ್ತು ಕ್ರಮಕ್ಕೆ ಮುಂದಾಗಲಿಲ್ಲ. ಆದರೆ ಸಾಮಾಜಿಕ ಕಳಕಳಿಯುಳ್ಳ ಪೊಲೀಸರು ಕೈಕಟ್ಟಿ ಕೂರದೆ ಫುಟ್‍ಪಾತ್ ಅತಿಕ್ರಮಣವನ್ನು ತೆರವು ಮಾಡಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಮೇಲಧಿಕಾರಿಗಳ ಸೂಚನೆ ಮೇರೆಗೆ ಲಷ್ಕರ್ ಠಾಣೆ ಇನ್‍ಸ್ಪೆಕ್ಟರ್ ಎನ್.ಮುನಿ ಯಪ್ಪ ಅವರು ಸಿಬ್ಬಂದಿಯೊಂದಿಗೆ ಶನಿವಾರ ಬೆಳಿಗ್ಗೆ 6 ಗಂಟೆ ವೇಳೆಗೆ ಫುಟ್‍ಪಾತ್ ರಕ್ಷಣಾ ಕಾರ್ಯ ಆರಂಭಿಸಿದರು. ಫುಟ್ ಪಾತ್ ವ್ಯಾಪಾರಿಗಳಿಂದ ಪಾದಚಾರಿಗಳಿ ಗಾಗುವ ಸಮಸ್ಯೆ ಕಿರಿಕಿರಿ ತಿಳಿಹೇಳಿದರು. ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡುವುದ ರಿಂದ ಸಾರ್ವಜನಿಕರಿಗೆ ತೊಂದರೆಯಾಗು ತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ವಿಶೇಷವೆಂದರೆ ಯಾವೊಬ್ಬ ವ್ಯಾಪಾ ರಿಯೂ ಪೊಲೀಸರಿಗೆ ಎದುರಾಡಲಿಲ್ಲ. ಅಷ್ಟಕ್ಕೆ ವಾಪಸ್ಸಾಗದ ಪೊಲೀಸರು ರಾತ್ರಿವರೆಗೂ ಮೊಕ್ಕಾಂ ಹೂಡಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

“ಸಾರ್ವಜನಿಕರು ತಿರುಗಾಡುವ ಫುಟ್ ಪಾತ್‍ನಲ್ಲಿ ಕಾನೂನುಬಾಹಿರವಾಗಿ ಯಾವುದೇ ವ್ಯಾಪಾರ ವಹಿವಾಟು ನಡೆಸ ದಂತೆ ಸೂಚಿಸಲಾಗಿದೆ. ಕಾನೂನು ಬಾಹಿರ ವಾಗಿ ಇಲ್ಲಿ ವಹಿವಾಟು ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗು ವುದು” ಎಂಬ ಪೊಲೀಸ್ ಪ್ರಕಟಣೆ ಫಲಕಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಸಹಕಾರ ದಿಂದ ಎಲ್ಲಾ ವ್ಯಾಪಾರಿಗಳಿಗೂ ತಿಳಿಹೇಳಿ ವಾಪಸ್ಸು ಕಳುಹಿಸಿದ್ದೇವೆ. ಇನ್ನು ಮುಂದೆಯೂ ಫುಟ್‍ಪಾತ್ ಅತಿಕ್ರಮಣವಾಗದಂತೆ ಎಚ್ಚ ರಿಕೆ ವಹಿಸುತ್ತೇವೆ ಎಂದು ಇನ್‍ಸ್ಪೆಕ್ಟರ್ ಎನ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಪಾಲಿಕೆ ಪರಿಹರಿಸಲಾಗದ ಸಮಸ್ಯೆಯನ್ನು ಪೊಲೀಸರು ಪರಿಹರಿಸಿ ರುವ ಬಗ್ಗೆ ಕೊಂಡಾಡುತ್ತಿದ್ದಾರೆ. `ಸಾರ್ವ ಜನಿಕರಿಗೆ ಏನೇ ತೊಂದರೆಯಾದರೂ ಮೊದಲು ಪೊಲೀಸರನ್ನು ದೂರುತ್ತೇವೆ. ಅವರ ಕಾರ್ಯ ವ್ಯಾಪ್ತಿಯನ್ನು ತಿಳಿದು ಕೊಳ್ಳುವ ಪ್ರಯತ್ನವನ್ನೂ ಮಾಡದೆ ನಿಂದಿ ಸುತ್ತೇವೆ. ಆದರೆ ಸಾರ್ವಜನಿಕರು ಸಹ ಕಾರ ನೀಡಿದರೆ ಪೊಲೀಸರಿಗೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದಕ್ಕೆ ಇದು ಸಾಕ್ಷಿ. ಫುಟ್‍ಪಾತ್ ಸಮಸ್ಯೆ ಬಗ್ಗೆ `ಮೈಸೂರು ಮಿತ್ರ’ ಮೂಲಕ ಹಾಗೂ ನೇರವಾಗಿ ಅನೇಕ ಸಾರ್ವಜನಿಕರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಇಂದು ಪೊಲೀಸರು ಫುಟ್ ಪಾತ್ ಅತಿಕ್ರಮಣವನ್ನು ತೆರವು ಮಾಡಿ ಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಮೈಸೂ ರಿನಲ್ಲಿ ಫುಟ್‍ಪಾತ್ ಸಮಸ್ಯೆ ಗಂಭೀರ ಸ್ವರೂಪ ತಾಳುತ್ತಿದ್ದರೂ ಕೈಕಟ್ಟಿ ಕುಳಿತಿ ರುವ ನಗರ ಪಾಲಿಕೆಗೆ ನಮ್ಮ ಪೊಲೀಸರು ಮಾದರಿಯಾಗಿದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ.

Translate »