ಮೈಸೂರು: ಪ್ರಸ್ತುತ ನಾನು ಮುಖ್ಯ ಮಂತ್ರಿಯಾಗುವುದು ಮುಖ್ಯವಲ್ಲ. ಬದಲಾಗಿ ದೇಶದಲ್ಲಿ ಕಾಂಗ್ರೆಸ್‍ನ ನೀತಿ-ನಿಯಮಗಳು ಉಳಿಯುವುದು ಮುಖ್ಯ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಎನ್.ಆರ್.ಕ್ಷೇತ್ರದ ವ್ಯಾಪ್ತಿಯ ಗಾಂಧಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್‍ಸೇಠ್ ಪರ ಮತಯಾಚನೆ ಮಾಡಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಅಶೋಕಪುರಂನಲ್ಲಿ ನಾನು ಚುನಾವಣಾ ಪ್ರಚಾರದಲ್ಲಿದ್ದಾಗ ಕೆಲ ನನ್ನ ಅಭಿಮಾನಿಗಳು ನೀವು ಮುಖ್ಯಮಂತ್ರಿಯಾಗಬೇಕು. ಬೇರೆ ಯಾರನ್ನೋ ಮುಖ್ಯಮಂತ್ರಿ ಮಾಡುವುದಾದರೆ, ಕಾಂಗ್ರೆಸ್‍ಗೆ ಮತ ಹಾಕುವುದಿಲ್ಲ ಎಂದು ಉದ್ವೇಗದಲ್ಲಿ ಮಾತನಾಡಿದ್ದಾರೆ. ಇದು ಅವರ ತಪ್ಪು ಕಲ್ಪನೆ. ಮೊದಲು ದಲಿತರು, ಶೋಷಿತರು ಹಾಗೂ ಅಲ್ಪಸಂಖ್ಯಾತರ ಪರವಾಗಿರುವ ಕಾಂಗ್ರೆಸ್ ಸಂಸ್ಕøತಿ ಯನ್ನು ಉಳಿಸಿಕೊಂಡು ನಂತರ ನಾನು ಮುಖ್ಯಮಂತ್ರಿ ಯಾಗುವ ಬಗ್ಗೆ ಪಕ್ಷದ ವೇದಿಕೆಗಳಲ್ಲಿ ಮಾತನಾಡಬೇಕು ಎಂದು ಹೇಳಿದರು. ಇದು ನನ್ನೊಬ್ಬನ ಅಳಿವು-ಉಳಿವಿನ ಪ್ರಶ್ನೆಯಲ್ಲ. ಬದಲಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆ. ಆದ್ದರಿಂದ ಕಾಂಗ್ರೆಸ್ ನೀತಿ-ನಿಯಮಗಳನ್ನು ಒಪ್ಪಿರುವ ಯಾರೇ ಅಭ್ಯರ್ಥಿ ಯಾಗಿದ್ದರೂ ಅವರ ಪರ ಮತ ಹಾಕಬೇಕು. ಎನ್.ಆರ್.ಕ್ಷೇತ್ರದಲ್ಲಿ ಎಸ್‍ಡಿಪಿಐ ಮತ್ತು ಬಿಜೆಪಿ ಪಕ್ಷಗಳು ದಿನೇದಿನೆ ಬಲಾಢ್ಯವಾಗುತ್ತಿವೆ. ಅದರಲ್ಲೂ ಎಸ್‍ಡಿಪಿಐ ಅಭ್ಯರ್ಥಿ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ಬಳಸಿಕೊಂಡು ನಮ್ಮ ಅಭ್ಯರ್ಥಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದನ್ನು ಮತದಾರರು ನಂಬದೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರನ್ನು ಬೆಂಬಲಿಸಬೇಕು ಎಂದು ಮತದಾರ ರಲ್ಲಿ ಮನವಿ ಮಾಡಿದರು.
ಸಚಿವ ತನ್ವೀರ್ ಸೇಠ್ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರಿಗೂ ಸಿಗುವುದಿಲ್ಲ ಎಂಬ ಆರೋಪವಿದೆ. ಇದನ್ನು ಸರಿಪಡಿಸಬಹುದು. ಆ ಹೊಣೆ ನಾನು ಹೊರು ತ್ತೇನೆ. ಆದರೆ, ಕಾಂಗ್ರೆಸ್ ಪಕ್ಷವನ್ನು ಉಳಿಸುವ ಹೊಣೆ ಮತದಾರ ರದ್ದು. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ ಮುಂದು ವರೆದರೆ, ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದರು.
ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರ ವನ್ನು ಮತ್ತೆ ಉಳಿಸಿಕೊಂಡರೇ ದೇಶದ ರಾಜಕಾರಣಕ್ಕೆ ಮತ್ತೊಂದು ರೀತಿಯ ರಾಜಕೀಯ ಸಂದೇಶ ರವಾನೆಯಾಗು ತ್ತದೆ. ಆದ್ದರಿಂದ ಈ ಚುನಾವಣೆ ಕಾಂಗ್ರೆಸ್ ಪಕ್ಷದ ಉಳಿವು ಹಾಗೂ ಸಂವಿಧಾನ ರಕ್ಷಣೆ ಪ್ರಶ್ನೆಯಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದರ ಅಸ್ತಿತ್ವ ಉಳಿಯುತ್ತದೆ. ಅದರ ಬದಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ಸಂವಿಧಾನ ಉಳಿವಿಗೆ ಶ್ರಮಿಸುತ್ತದೆ. ವಿರೋಧಿಗಳ ಮಾತಿಗೆ ಕಿವಿಗೊಡದೇ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದಕ್ಕೂ ಮೈಸೂರು-ಬೆಂಗಳೂರು ರಸ್ತೆ ಯಲ್ಲಿರುವ ಎಫ್‍ಟಿಎಸ್ ವೃತ್ತದಲ್ಲಿರುವ ಡಾ.ಅಂಬೇ ಡ್ಕರ್ ಪ್ರತಿಮೆಗೆ ಮಲ್ಲಿಕಾರ್ಜುನ ಖರ್ಗೆ ಮಾಲಾರ್ಪಣೆ ಮಾಡಿ, ಚುನಾವಣಾ ಪ್ರಚಾರ ಕೈಗೊಂಡರು.