ಭಯವಿಲ್ಲದ ಭಕ್ತಿ ಪ್ರತಿಪಾದಿಸಿದ್ದ ಮಂಟೇಸ್ವಾಮಿ: ಬಂಜಗೆರೆ ಜಯಪ್ರಕಾಶ್
ಮೈಸೂರು

ಭಯವಿಲ್ಲದ ಭಕ್ತಿ ಪ್ರತಿಪಾದಿಸಿದ್ದ ಮಂಟೇಸ್ವಾಮಿ: ಬಂಜಗೆರೆ ಜಯಪ್ರಕಾಶ್

January 19, 2020

ಮೈಸೂರು, ಜ.18(ಎಂಕೆ)- ನಗರದ ಕಲಾಮಂದಿರದಲ್ಲಿ ಹೊನ್ನಾರು ಜನಪದ ಗಾಯಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ಕೃತಿ ಲೋಕಾರ್ಪಣೆ ಸಮಾರಂಭ ದಲ್ಲಿ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜ ಶೇಖರ ಅವರು ಸಂಪಾದಿಸಿರುವ ‘ನೀಲ ಗಾರ ಬೆಟ್ಟದಬೀಡು ಸಿದ್ಧಶೆಟ್ಟರು’ ಹಾಡಿ ರುವ ಹಾಡುಗಳ ಸಂಗ್ರಹವಾದ ‘ಜನಪದ ಮಹಾಕಾವ್ಯ ಧರೆಗೆ ದೊಡ್ಡೋರು ಮಂಟೇ ಸ್ವಾಮಿ’, ‘ಜನಪದ ಗಾಯಕ ರತ್ನ’ ಕೃತಿ ಗಳನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು.

ಬಳಿಕ ಕೃತಿ ಕುರಿತು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಉತ್ತರದಿಂದ ಕತ್ತಲ ರಾಜ್ಯ(ದಕ್ಷಿಣ)ಕ್ಕೆ ಬಂದ ಮಂಟೇಸ್ವಾಮಿ ಅವರು, ಭಯವಿಲ್ಲದ ಭಕ್ತಿಯನ್ನು ಪ್ರತಿಪಾದಿಸಿದ್ದರು. ಮಠ ವಿಲ್ಲದೇ, ಆರಾಧನಾ ಕ್ರಮವಿಲ್ಲದೆ, ದೇವರಿ ಲ್ಲದೆಯೂ ಭಕ್ತಿ ತೋರಿಸಬಹುದು ಎಂದು ತಿಳಿಸಿದ ಅವರು ಅರಿವೇ ಗುರುವು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.

ನಂಬಿದವರ ಬದುಕಲ್ಲಿ ಬೆಳಕು ಮೂಡಿ ಸಿದ ಮಂಟೇಸ್ವಾಮಿ, ಜನರ ಬೈಗುಳ ಗಳನ್ನೇ ತನ್ನ ಬಿರುದನ್ನಾಗಿ ಮಾಡಿಕೊಂಡು ಬೈದವರನ್ನೂ ಭಕ್ತಿಗೆ ಒಲಿಸಿಕೊಂಡವರು. ಕಬ್ಬಿಣದ ಭಿಕ್ಷೆ ಬೇಡಿ ಅದನ್ನು ರೈತಾಪಿ ವರ್ಗಕ್ಕೆ, ಜನಸಾಮಾನ್ಯರಿಗೆ ನೀಡಿದ ರೂಪಕವೇ ಅವರ ಸಮಾಜ ಸುಧಾರಣೆ ಯನ್ನು ತೋರಿಸುತ್ತದೆ. ಮಂಟೇಸ್ವಾಮಿಗೆ ಹಲವಾರು ಹೆಸರುಗಳಿದ್ದರೂ ಮಹಾಂತ ಸ್ವಾಮಿ ಎಂಬ ಹೆಸರಿನಿಂದ ಮಂಟೇ ಸ್ವಾಮಿ ಬಂದಿರಬಹುದೆಂಬ ಪಿ.ಕೆ.ರಾಜ ಶೇಖರ ಅವರ ಅಭಿಪ್ರಾಯಕ್ಕೆ ಮತ್ತಷ್ಟು ಅಧ್ಯಯನ ನಡೆಯಬೇಕಿದೆ ಎಂದರು.

ಜನರಿಗೆ ಭಕ್ತಿ-ಭುಕ್ತಿ ಬೇರೆ ಬೇರೆಯಲ್ಲ. ತಾವು ತಿನ್ನುವ ಅನ್ನವೇ ಪ್ರಸಾದ, ಪ್ರಸಾ ದವೇ ಅನ್ನವೆಂಬ ಏಕಭಾವ ಸಾಮಾನ್ಯ ರಲ್ಲಿದೆ. ಮಂಟೇಸ್ವಾಮಿಯ ಇಂತಹ ಸುಧಾ ರಣೆಯು ಈ ಕೃತಿಯಲ್ಲಿ ಅಡಕವಾಗಿವೆ. ಹತ್ತಾರು ಸಂಶೋಧನೆಗಳು ಈ ಕೃತಿಯ ಆಧಾರದಲ್ಲಿ ನಡೆಯಬಹುದಾದ ಮಹತ್ವ ವುಳ್ಳದ್ದಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾವ್ಯಗಳಲ್ಲಿ ಇತಿಹಾಸವಿದೆ. ಆದರೆ ಇತಿ ಹಾಸವನ್ನು ಪುರಾಣಿಕರಿಸುತ್ತಿರುವ ಹೊತ್ತಿ ನಲ್ಲಿ ಇತಿಹಾಸವನ್ನು ಇತಿಹಾಸದಂತೆ ತಿಳಿ ಸುವ ನಿಟ್ಟಿನಲ್ಲಿ ಡಾ.ಪಿ.ಕೆ.ರಾಜಶೇಖರ ಈ ಕೃತಿ ರಚಿಸಿದ್ದಾರೆ. ಮಂಟೇಸ್ವಾಮಿಯವ ರನ್ನು ಸೂಫಿಶೈವ ಎಂಬುದಾಗಿ ಕರೆದು, ಆತ ಬಡ ಜನರಿಗಾಗಿ ಮಾಡಿದ ಪವಾಡ, ಕೆಲಸ, ಸೇವೆ ಎಲ್ಲವನ್ನೂ ಹಾಡಿನ ಮುಖಾಂ ತರ ಕಟ್ಟಿಕೊಟ್ಟಿದ್ದಾರೆ ಎಂದರು.

ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತ ನಾಡಿ, ಭಕ್ತಿ ಎಂಬುದೇ ರೋಚಕ. ಭಕ್ತಿ ಎಂಬುದು ಜಗತ್ತಿನಲ್ಲಿ ಏನೆಲ್ಲಾ ಮಾಡಿದೆ ಎಂಬುದಕ್ಕೆ ಮಂಟೇಸ್ವಾಮಿಯವರ ಮಹಾ ಕಾವ್ಯವೇ ಸಾಕ್ಷಿಯಾಗಿದೆ. ಜನರನ್ನು ಒಂದುಗೂಡಿಸುವ ಶಕ್ತಿ, ನಿಷ್ಠೆ ಭಕ್ತಿಗೆ ಇದೆ. ಜನಪದದಲ್ಲಿ ಭಕ್ತಿ ಹೊಂದಿದವರು, ಮಂಟೇಸ್ವಾಮಿಯವರ ಮೇಲೂ ಭಕ್ತಿ ಹೊಂದಿದಂತೆ. ಯಾವುದೇ ವಿಷಯದ ಕುರಿತು ವಾದ ಮಂಡಿಸುವವರು ತಮ್ಮ ಅಭಿಪ್ರಾಯವನ್ನು ಮಾತ್ರ ಮಂಡಿಸಿದರೆ ಸತ್ಯಶೋಧನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೃತಿ ಕತೃ ಡಾ.ಪಿ.ಕೆ.ರಾಜಶೇಖರ ಮಾತ ನಾಡಿ, ಈಗ ಬಿಡುಗಡೆಯಾಗುತ್ತಿರುವ `ಧರೆಗೆ ದೊಡ್ಡೋರು ಮಂಟೇಸ್ವಾಮಿ’ ಕೃತಿ ರಚಿಸಿ ಸುಮಾರು 30ರಿಂದ 40 ವರ್ಷ ಗಳಾಗಿತ್ತು. ಆರ್ಥಿಕ ಸಂಕಷ್ಟದಿಂದ ಪ್ರಕಟಿ ಸಲು ಸಾಧ್ಯವಾಗಿರಲಿಲ್ಲ. ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಬೇಕು ಎಂದು ಕೃತಿ ಸಿದ್ಧಪಡಿಸಲು ಆರಂಭಿಸಿದಾಗ 5 ವರ್ಷವಾಯಿತು. ಅಷ್ಟರಲ್ಲಿ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಅಧಿಕಾರ ಕಳೆದುಕೊಂಡಿದ್ದರು ಎಂದು ಹೇಳಿದರು.

ನನ್ನ ಬಳಿ ಇನ್ನೂ ಒಂದು ಮಹಾಕಾವ್ಯ ವಿದೆ. ಅಲ್ಲದೆ ನನ್ನ ಬಳಿ 20 ಕೃತಿ ರಚಿ ಸುವಷ್ಟು ಸರಕಿದೆ. ಅಲ್ಲಿಯ ತನಕವೂ ಬದು ಕಿರುತ್ತೇನೆ. ನಾನು ಬದುಕಲಾರೆ ಎಂದು ಕೊಂಡಾಗ ಹೊನ್ನಾರು ಜನಪದ ಗಾಯ ಕರು ಮತ್ತು ಅಭಿಮಾನಿಗಳು ನನ್ನ ನೆರವಿಗೆ ಬಂದದ್ದನ್ನು ಬದುಕಿರುವವರೆಗೂ ಮರೆ ಯುವುದಿಲ್ಲ ಎಂದು ಕೃತಜ್ಞತೆ ಅರ್ಪಿಸಿದರು.

ಹಿಂದೆ ಬಿಡುಗಡೆಯಾಗಿದ್ದ `ಜಾನಪದ ಮಹಾಭಾರತ’ ಕೃತಿ ತರಲು ಇದ್ದ ಒಂದು ಸೈಟನ್ನು ಮಾರಿಕೊಂಡೆ. ಈ ಕೃತಿಗೆ ಬರೋ ಬ್ಬರಿ ನಾಲ್ಕೂವರೆ ಲಕ್ಷ ವೆಚ್ಚವಾಯಿತು. ಹಲವರು ಆರ್ಥಿಕ ನೆರವು ನೀಡಿದ್ದರಿಂದ ಈ ಕೃತಿ ಪ್ರಕಟವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಗಣ್ಯರಿಗೆ ಸನ್ಮಾನ : ವಿದ್ವಾಂಸ ಪೆÇ್ರ. ರಾಮೇಗೌಡ(ರಾಗೌ), ಜಾನಪದ ತಜ್ಞ ಪೆÇ್ರ. ಹನೂರು ಕೃಷ್ಣಮೂರ್ತಿ, ಸಾಹಿತಿ ಪೆÇ್ರ. ಎನ್.ಎಸ್.ತಾರಾನಾಥ್, ಬರಹ ಗಾರ ಪ್ರೊ. ಸಿ.ನಾಗಣ್ಣ, ಮಹಾರಾಣಿ ಕಾಲೇ ಜಿನ ಪ್ರಾಧ್ಯಾಪಕ ಪೆÇ್ರ. ಮೈಸೂರು ಕೃಷ್ಣ ಮೂರ್ತಿ, ಅಂತರರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕ ಗುರುರಾಜ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೊನ್ನನಾಯಕನ ಹಳ್ಳಿ ಮಠಾಧಿಪತಿ ಶ್ರೀ ಎಂ.ಎಲ್. ವರ್ಚಸ್ವೀ ಶ್ರೀಕಂಠಸಿದ್ಧಲಿಂಗ ರಾಜೇ ಅರಸ್, ಶಾಸಕ ಸಿ.ಎಸ್.ಪುಟ್ಟರಾಜು, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »