ಸಾಯಿ ಬಾಬಾ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ವಿವಾದ: ಇಂದು ‘ಶಿರಡಿ ಬಂದ್’
ಮೈಸೂರು

ಸಾಯಿ ಬಾಬಾ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ವಿವಾದ: ಇಂದು ‘ಶಿರಡಿ ಬಂದ್’

January 19, 2020

ಮುಂಬೈ, ಜ. 18- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನೀಡಿರುವ ಹೇಳಿಕೆಯಿಂದಾಗಿ ಸಾಯಿ ಬಾಬಾ ಜನ್ಮ ಸ್ಥಳದ ಬಗ್ಗೆ ವಾದ-ವಿವಾದಗಳು ಭುಗಿ ಲೆದ್ದಿದ್ದು ಈ ವಿವಾದದ ಹಿನ್ನೆಲೆಯಲ್ಲಿ ಭಾನುವಾರ ಶಿರಡಿ ಬಂದ್ ಆಚರಿಸಲು ಬಾಬಾ ಭಕ್ತರು ನಿರ್ಧರಿಸಿದ್ದಾರೆ.

ಕಳೆದ ವಾರ ಔರಂಗಜೇಬ್‍ನ ಸಭೆ ಯೊಂದರಲ್ಲಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಪರ್ಭಣಿ ಜಿಲ್ಲೆಯ ಪಾತ್ರಿ ಗ್ರಾಮವೇ ಸಾಯಿ ಬಾಬಾ ಜನ್ಮಸ್ಥಳವಾಗಿದ್ದು, ಅವರ ಜನ್ಮಸ್ಥಳ ಅಭಿವೃದ್ಧಿಗಾಗಿ ಸರ್ಕಾರ 100 ಕೋಟಿ ರೂ. ಯೋಜನೆ ರೂಪಿಸಿದೆ ಎಂದು ಘೋಷಿಸಿದ್ದರು.

ಆದರೆ, ಸಾಯಿ ಬಾಬಾ ಮಂದಿರ ಇರುವುದು ಅಹಮದಾಬಾದ್ ಜಿಲ್ಲೆಯ ಶಿರಡಿಯಲ್ಲಿ. ಸಾಯಿ ಬಾಬಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿಯಲ್ಲಿರುವ ಮಂದಿರಕ್ಕೆ ತೆರಳುತ್ತಿ ದ್ದಾರೆ. ಶಿರಡಿಯೇ ಸಾಯಿ ಬಾಬಾ ಅವರ ಜನ್ಮಸ್ಥಳ, ಕರ್ಮಸ್ಥಾನ ಹಾಗೂ ಅವರು ನಿಧನ ಹೊಂದಿದ್ದ ಸ್ಥಳ ಎಂದು ನಂಬಿದ್ದಾರೆ. ಹೀಗಾಗಿ ಶಿರಡಿ ನಿವಾಸಿಗಳು ಉದ್ಧವ್ ಠಾಕ್ರೆ ಅವರ ಹೇಳಿಕೆ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಪಾತ್ರಿ ಗ್ರಾಮದ ಅಭಿವೃದ್ಧಿಗೆ ನಮ್ಮ ವಿರೋಧ ಇಲ್ಲ. ಆದರೆ, ಪಾತ್ರಿ ಗ್ರಾಮವೇ ಸಾಯಿ ಬಾಬಾ ಅವರ ಜನ್ಮಸ್ಥಳ ಎಂಬ ಹೇಳಿಕೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆ ವಿರೋಧಿಸಿ ಭಾನುವಾರ ಶಿರಡಿ ಬಂದ್‍ಗೆ ಕರೆ ನೀಡಲಾಗಿದೆ. ಅದೇ ವೇಳೆ ಶಿರಡಿಗೆ ಬರುವ ಭಕ್ತರಿಗೆ ಬಾಬಾ ದರ್ಶನ ಸಿಗುತ್ತದೆ ಆದರೆ, ಶಿರಡಿಯಲ್ಲಿ ಹೋಟೆಲ್, ವಸತಿ ನಿಲಯಗಳು ಮುಚ್ಚಿ ರುತ್ತವೆ. ಆಟೋಗಳು, ಕ್ಯಾಬ್‍ಗಳು ಸಂಚರಿಸುವುದಿಲ್ಲ. ಶಾಲಾ-ಕಾಲೇಜುಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಶಿರಡಿ ಸಾಯಿ ಬಾಬಾ ಭಕ್ತರ ಸಂಘಟನೆಗಳು ಘೋಷಿಸಿವೆ.

ಶಿರಡಿ ದೇವಸ್ಥಾನ ಮತ್ತು ಭಕ್ತಿ ನಿವಾಸ್‍ನಲ್ಲಿ ಎಂದಿನಂತೆ ಸೇವೆಗಳು ಮುಂದು ವರೆಯಲಿವೆ. ಈ ಕುರಿತು ಭಕ್ತರಲ್ಲಿ ಗೊಂದಲ ಬೇಡ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ಪಿಆರ್‍ಓ ಮೋಹನ್ ಯಾದವ್ ಅವರು ತಿಳಿಸಿದ್ದಾರೆ.

 

Translate »