ಮೈಸೂರು ಪಾಲಿಕೆ ವತಿಯಿಂದ ರಾತ್ರಿ ವಸತಿ ರಹಿತರ ಸಮೀಕ್ಷೆ
ಮೈಸೂರು

ಮೈಸೂರು ಪಾಲಿಕೆ ವತಿಯಿಂದ ರಾತ್ರಿ ವಸತಿ ರಹಿತರ ಸಮೀಕ್ಷೆ

January 19, 2020

ಮೈಸೂರು,ಜ.18(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ವತಿಯಿಂದ ಶನಿವಾರ `ರಾತ್ರಿ ವಸತಿ ರಹಿತರ ಸಮೀಕ್ಷೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು.

`ನಗರ ವಸತಿ ರಹಿತರಿಗೆ ಆಶ್ರಯ’ ಕಾರ್ಯಕ್ರಮ ದಡಿ ಪ್ರತೀ ತಿಂಗಳಿಗೊಮ್ಮೆ ಕ್ಷಿಪ್ರ ಸಮೀಕ್ಷೆ ನಡೆಸಬೇ ಕೆಂಬ ನಿರ್ದೇಶನವಿರುವ ಹಿನ್ನೆಲೆಯಲ್ಲಿ ಮೈಸೂರಲ್ಲಿ ನಿರ್ಗತಿಕ ನಾಗರಿಕರು ಹೆಚ್ಚು ಆಶ್ರಯ ಪಡೆದಿರುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ನಿರಾಶ್ರಿತರ ಕೇಂದ್ರ’ದ ವ್ಯವಸ್ಥಾಪಕ ರೇತನ್, ಕಿರಣ್ ಸೇರಿದಂತೆ ಮೂವರು ಕೇರ್ ಟೇಕರ್‍ಗಳು, ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಾಲ್ವರು, ಪಾಲಿಕೆಯ ನಾಲ್ವರು ಸಿಬ್ಬಂದಿ ಹಾಗೂ ಎನ್‍ಜಿಓ ಸದಸ್ಯರನ್ನೊಳಗೊಂಡ ತಂಡ, ಶುಕ್ರವಾರ ರಾತ್ರಿ 11ರಿಂದ ಸಮೀಕ್ಷೆ ಆರಂಭಿಸಿ, ಅಗ್ರಹಾರದ 101 ಗಣಪತಿ ದೇವಾಲಯ ಸಮೀಪ, ಧನ್ವಂತ್ರಿ ರಸ್ತೆ, ಕೆ.ಆರ್.ಆಸ್ಪತ್ರೆ, ಸಂತೆಪೇಟೆ, ರೈಲ್ವೆ ನಿಲ್ದಾಣ, ಲ್ಯಾನ್ಸ್‍ಡೌನ್ ಬಿಲ್ಡಿಂಗ್, ಚಿಕ್ಕ ಮಾರ್ಕೆಟ್, ಸಬರ್ಬನ್ ಬಸ್ ನಿಲ್ದಾಣ, ಅಶೋಕ ರಸ್ತೆ ಮಿಲಾದ್ ಪಾರ್ಕ್ ಸಮೀಪ, ಸಯ್ಯಾಜಿರಾವ್ ರಸ್ತೆ ಹಳೇ ಆರ್‍ಎಂಸಿ, ನಗರ ಬಸ್ ನಿಲ್ದಾಣ, ವಾಣಿವಿಲಾಸ ಮಾರು ಕಟ್ಟೆ ಸೇರಿದಂತೆ ಸಾಮಾನ್ಯವಾಗಿ ನಿರಾಶ್ರಿತರು ಬೀಡು ಬಿಟ್ಟಿರುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿತು.

`ಹೀಗೆ ಎಲ್ಲೆಂದರಲ್ಲಿ ಮಲಗುವುದು ಸುರಕ್ಷಿತವಲ್ಲ. ನಿಮಗೆ ಯಾವುದಾದರೂ ಪ್ರಾಣಿ ಅಥವಾ ದುಷ್ಕರ್ಮಿ ಗಳಿಂದ ತೊಂದರೆಯಾಗಬಹುದು. ಅಲ್ಲದೆ ಚಳಿಗಾಲ ವಾದ್ದರಿಂದ ಆರೋಗ್ಯವೂ ಹಾಳಾಗುತ್ತದೆ. ಪಾಲಿಕೆ ವತಿಯಿಂದ ನಿಮಗೆ ಉಚಿತ ಆಶ್ರಯ ವ್ಯವಸ್ಥೆ ಮಾಡ ಲಾಗಿದೆ. ರಾತ್ರಿ ವೇಳೆ ಅಲ್ಲಿ ಸುರಕ್ಷಿತವಾಗಿ ನಿದ್ದೆ ಮಾಡಿ, ಹಗಲಲ್ಲಿ ನಿಮ್ಮ ಎಂದಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು’ ಎಂದು ಮನವರಿಕೆ ಮಾಡಿಕೊಟ್ಟು, ಅವರನ್ನು ವಾಹನದಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಕಾರ್ಯಾಚರಣೆ ವೇಳೆ ಪತ್ತೆಯಾದ ನಿರಾಶ್ರಿತರಲ್ಲಿ ಆರೋಗ್ಯವಾಗಿದ್ದವರಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ. ಒಂದು ವೇಳೆ ಅನಾರೋಗ್ಯಕ್ಕೀ ಡಾಗಿ ಚಿಕಿತ್ಸೆ ಅಗತ್ಯವಿದ್ದವರನ್ನು ಆಸ್ಪತ್ರೆಗೆ ದಾಖ ಲಿಸಲಾಗುವುದು. ವಯೋವೃದ್ಧರಾಗಿದ್ದರೆ ವೃದ್ಧಾಶ್ರಮ ಗಳಿಗೆ ಸೇರಿಸಲಾಗುತ್ತದೆ ಎಂದು ನಿರಾಶ್ರಿತರ ಕೇಂದ್ರದ ವ್ಯವಸ್ಥಾಪಕ ರೇತನ್ ತಿಳಿಸಿದರು.

ಮತ್ತೊಂದು ಕೇಂದ್ರದ ಅಗತ್ಯವಿದೆ: ನಗರದ ಶೇಷಾದ್ರಿ ಅಯ್ಯರ್ ರಸ್ತೆ, ವಿದ್ಯಾವರ್ಧಕ ಕಾಲೇಜಿನ ಎದುರಿ ರುವ `ನಿರಾಶ್ರಿತರ ಕೇಂದ್ರ’ದಲ್ಲಿ ಸದ್ಯ 50ಕ್ಕೂ ಹೆಚ್ಚು ಮಂದಿ ಪುರುಷರು ಆಶ್ರಯ ಪಡೆದಿದ್ದಾರೆ. ವಾಸ್ತವ್ಯಕ್ಕೆ ಅಗತ್ಯವಾದ ಮೂಲ ಸೌಲ ಭ್ಯದ ಜೊತೆಗೆ ರಾತ್ರಿ ಊಟದ ವ್ಯವಸ್ಥೆಯೂ ಇದೆ. ಆಧಾರ್, ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಸಹ ಮಾಡಿಸಿಕೊಡ ಲಾಗುತ್ತದೆ. ಆದರೆ ಇಲ್ಲಿ 70 ಮಂದಿಗೆ ಆಶ್ರಯ ಕಲ್ಪಿಸು ವಷ್ಟು ಸ್ಥಳಾವಕಾಶವಿದೆ ಯಷ್ಟೇ. ಇನ್ನು ದೇವರಾಜ ಮೊಹಲ್ಲಾ ಗಾಡಿಚೌಕದ ಬಳಿಯಿರುವ ನಿರಾಶ್ರಿತರ ಕೇಂದ್ರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವುದ ರಿಂದ ಮಹಿಳೆಯರಿಗೆ ಆಶ್ರಯ ಕಲ್ಪಿಸಲು ಸಾಧ್ಯವಾಗು ತ್ತಿಲ್ಲ. ನಗರ ಪ್ರದೇಶದಲ್ಲಿ 1 ಲಕ್ಷ ಜನಸಂಖ್ಯೆಗೆ ಒಂದರಂತೆ ನಿರಾಶ್ರಿತರ ಕೇಂದ್ರವಿರಬೇಕೆಂಬ ನಿಯಮವಿದೆ. ಆದರೆ 10 ಲಕ್ಷ ಜನಸಂಖ್ಯೆ ಹೊಂದಿ ರುವ ಮೈಸೂರಿನಲ್ಲಿರುವುದು ಒಂದೇ ಕೇಂದ್ರ. ವಸತಿ ರಹಿತರು ರೈಲ್ವೆ ನಿಲ್ದಾಣದ ಬಳಿ ಸೇರಿದಂತೆ ಕಂಡ ಕಂಡಲ್ಲಿ, ಚಳಿಯಲ್ಲಿ ನಡುಗುತ್ತಾ ಮಲಗಿರುತ್ತಾರೆ. ಸುರಕ್ಷತೆ ದೃಷ್ಟಿಯಿಂದ ಅವರನ್ನು ಆಗಾಗ್ಗೆ ಪೊಲೀ ಸರು ಎಚ್ಚರಗೊಳಿಸುತ್ತಿರುತ್ತಾರೆ. ಖದೀಮರಿಂದ ತೊಂದರೆ ಅನುಭವಿಸುವುದೂ ಸಾಮಾನ್ಯ. ಹಾಗಾಗಿ ಡೇ-ನಲ್ಮ್ ಯೋಜನೆಯಡಿ ಮತ್ತೊಂದು ನಿರಾಶ್ರಿ ತರ ಕೇಂದ್ರ ಆರಂಭಿಸಬೇಕೆಂದು ಪ್ರಸ್ತಾವನೆ ಸಲ್ಲಿಸ ಲಾಗಿದೆ ಎಂದು ಹೇಳಲಾಗಿದೆ.

Translate »