ಸಾಹಿತ್ಯದ ಸಾಂಗತ್ಯದಿಂದ ಸೃಜನಶೀಲತೆ ವೃದ್ಧಿ: ಅಡ್ಡಂಡ ಕಾರ್ಯಪ್ಪ
ಮೈಸೂರು

ಸಾಹಿತ್ಯದ ಸಾಂಗತ್ಯದಿಂದ ಸೃಜನಶೀಲತೆ ವೃದ್ಧಿ: ಅಡ್ಡಂಡ ಕಾರ್ಯಪ್ಪ

January 19, 2020

ಮೈಸೂರು,ಜ.18(ವೈಡಿಎಸ್)-ಮಕ್ಕಳು ಸಾಹಿತ್ಯ-ಕಥೆ-ಕವನ-ಕಾದಂಬರಿಗಳನ್ನು ಹೆಚ್ಚು ಓದುವುದರಿಂದ ಸೃಜನಶೀಲತೆ ಬೆಳೆಯುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಭಿಪ್ರಾಯಪಟ್ಟರು.

ಕುವೆಂಪುನಗರದ ಶ್ರೀ ಕಾವೇರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋ ಜಿಸಿದ್ದ `ಕಾವೇರಿ ಸಂಭ್ರಮೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್‍ಎಸ್ ಎಲ್‍ಸಿ, ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳು ಅತೀ ಬುದ್ಧಿ ವಂತರೆಂದು ಹೇಳಲಾಗದು. ಹಾಗೆಯೇ ಶೇ.35ರಷ್ಟು ಅಂಕ ಪಡೆದವರು ದಡ್ಡರಲ್ಲ. ಪೇಪರ್ ಹಾಕುತ್ತಿದ್ದ ಅಬ್ದುಲ್‍ಕಲಾಂ ರಾಷ್ಟ್ರ ಪತಿಯಾದರು. ಟೀ ಮಾರುತ್ತಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಹಾಗಾಗಿ ಎಲ್ಲರಲ್ಲೂ ಪ್ರತಿಭೆ, ಸೃಜನಶೀಲತೆ ಇರುತ್ತದೆ. ಸೃಜನಶೀಲತೆ ಹೆಚ್ಚಿಸಿಕೊಂ ಡಾಗ ಮಾತ್ರ ಏನು ಬೇಕಾದರೂ ಸಾಧಿಸ ಬಹುದು ಎಂದು ಸಲಹೆ ನೀಡಿದರು.

ಪೋಷಕರು, ಶಿಕ್ಷಕರು ಮಹಾತ್ಮಗಾಂಧಿ ಅವರ ಜೀವನ ಚರಿತ್ರೆ, ತತ್ವಗಳನ್ನು ಮಕ್ಕ ಳಿಗೆ ಹೇಳಿಕೊಡಬೇಕು. ನಾನು ಪೊನ್ನಂ ಪೇಟೆಯ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಓದಿ ಮುಂದೆ ಏನಾಗಬೇಕು ಎಂದು ಅಂದುಕೊಂಡಿದ್ದೀ ಎಂದು ಪ್ರಶ್ನಿಸಿದರು. ಎಲ್ಲರೂ ಇಂಜಿನಿ ಯರ್, ಡಾಕ್ಟರ್ ಆಗುತ್ತೇನೆಂದರೆ, ಮಹ ದೇವ ಎಂಬುವನು ನಾನು ಎತ್ತಿನಗಾಡಿ ಓಡಿಸುತ್ತೇನೆಂದು ಉತ್ತರಿಸಿದರು.

ಆಗ ಕಾರ್ಯಪ್ಪರವರು ನೀನು ಚೆನ್ನಾಗಿ ಓದಬೇಕೆಂದು ಹೇಳಿದರು. ಇಂದಿಗೆ 30 ವರ್ಷ ಕಳೆದಿದೆ. ನಾನು 2 ವರ್ಷದ ಹಿಂದೆ ಗುಲ್ಬರ್ಗದ ಸೇಡಂಗೆ ಹೋಗಿದ್ದಾಗ ಅಲ್ಲಿದ್ದ ಮಹದೇವ ಬಂದು ಮಾತನಾಡಿಸಿದರು. ಇಲ್ಲಿ ಏನ್ಮಾಡ್ತಿದ್ದೀಯಾ ಎಂದಾಗ, ವೈದ್ಯ ನಾಗಿದ್ದೇನೆ ಎಂದ. ಕಾರ್ಯಪ್ಪ ಅವರ ಸ್ಫೂರ್ತಿಭರಿತ ಮಾತಿನಿಂದ ಆತ ವೈದ್ಯ ನಾದ. ಹಾಗಾಗಿ ಮಕ್ಕಳು ಸಾಧನೆಗೈದ ವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂ ಕರಿಸಬೇಕು. ಸಾಧನೆಗೈಯ್ಯುವಾಗ ಸತ್ಪ್ರಜೆ ಗಳಾಗಿರಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯ ಎಂ.ಸಿ.ರಮೇಶ್ ಮಾತ ನಾಡಿ, ಮಾನವೀಯತೆ, ಹೃದಯವಂತಿಕೆ ಮತ್ತು ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿ ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದವರು ಮತ್ತು ಎಸ್‍ಎಸ್ ಎಲ್‍ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಲಾಯಿತು.

ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್ (ಎಸ್‍ಸಿಇಐ) ಅಧ್ಯಕ್ಷ ಎಂ.ಕೆ.ಕುಟ್ಟಪ್ಪ, ಕೊಡವ ಸಮಾಜದ ಅಧ್ಯಕ್ಷ ಕೆ.ಎಂ.ಬೆಳ್ಳಿಯಪ್ಪ, ಉಪಾಧ್ಯಕ್ಷ ಎಂ.ಎಂ.ಪೊನ್ನಪ್ಪ, ಕಾವೇರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಪಿ.ಸುಬ್ಬಯ್ಯ, ಖಜಾಂಚಿ ಎಂ.ಬಿ.ಅಯ್ಯಪ್ಪ, ಪ್ರಾಂಶುಪಾಲ ರಾದ ಕೃಪಾಲಿನಿ ಎಸ್.ರಾಜ್, ಕೆ.ಎಂ. ಪದ್ಮಾವತಿ, ರಶ್ಮಿ ಉಪಸ್ಥಿತರಿದ್ದರು.

ಮನತಣಿಸಿದ ನೃತ್ಯ: ಮೊದಲಿಗೆ ವೇದಿಕೆಗೆ ಆಗಮಿಸಿದ ವಿದ್ಯಾರ್ಥಿನಿಯರು `ಮೂಷಿಕ ವಾಹನ ಮೋದಕ ಹಸ್ತ’, `ಹರ ಹರ ಮಹ ದೇವ್’, `ಅಡವಿ ದೇವಿಯ ಕಾಡು ಜನಗಳ ಈ ಹಾಡು’ ಗೀತೆಗೆ ನೃತ್ಯ ಪ್ರದರ್ಶಿಸಿದರು. ಜತೆಗೆ ಹೊಸ, ಹಳೆಯ ಚಿತ್ರ ಗೀತೆಗಳ ಗಾಯನ ಪ್ರೇಕ್ಷಕರ ಮನ ತಣಿಸಿದವು.

Translate »