ಭಿನ್ನ ನೆಲೆ ಚಿಂತನಾ ಕ್ರಮದಿಂದ ಸಂಶೋಧಕರಲ್ಲಿ ಪರಿಪಕ್ವತೆ
ಮೈಸೂರು

ಭಿನ್ನ ನೆಲೆ ಚಿಂತನಾ ಕ್ರಮದಿಂದ ಸಂಶೋಧಕರಲ್ಲಿ ಪರಿಪಕ್ವತೆ

August 15, 2019

ಮೈಸೂರು, ಆ.14(ಪಿಎಂ)- ಸಂಶೋಧಕರು ಹಾಗೂ ಅವರ ಮಾರ್ಗದರ್ಶಕರು ಭಿನ್ನನೆಲೆಯ ಚಿಂತನಾಕ್ರಮ ಹೊಂದಿದ್ದರೆ ಸಂಶೋ ಧಕರು ಅಧ್ಯಯನದಲ್ಲಿ ಹೆಚ್ಚು ಪರಿಪಕ್ವ ವಾಗಲು ಸಾಧ್ಯ ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಅಭಿ ಪ್ರಾಯಪಟ್ಟರು. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿ ಸಂಸ್ಥೆ ಹಾಗೂ ಸಂಶೋಧನಾ ವಿದ್ಯಾರ್ಥಿ ವೇದಿಕೆ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಪ್ರಬಂಧ ಮಂಡನೆ-ಸಂವಾದ ಕಾರ್ಯಕ್ರಮ-11ರಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಇದೇ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಾನೂ ಸಂಶೋಧನಾ ವಿದ್ಯಾರ್ಥಿಯಾಗಿದ್ದೆ. ಆಗ ಟಿ.ವಿ.ವೆಂಕಟಾ ಚಲಶಾಸ್ತ್ರಿ ನನ್ನ ಮಾರ್ಗದರ್ಶಕರು. ನಾನು ಶೂದ್ರ ಹಿನ್ನೆಲೆಯ ಹೆಣ್ಣು ಮಗಳು. ವೆಂಕಟಾಚಲಶಾಸ್ತ್ರಿಗಳು ವೈದಿಕ ಹಿನ್ನೆಲೆ ಯವರು. ನಮ್ಮಿಬ್ಬರ ಚಿಂತನೆಗಳು ಬೇರೆ ಬೇರೆಯಾಗಿದ್ದವು. ಈ ಕಾರಣಕ್ಕೆ ನಾನು ಅಧ್ಯಯನದಲ್ಲಿ ಹೆಚ್ಚು ಗಟ್ಟಿಯಾಗಲು ಸಾಧ್ಯವಾಯಿತು ಎಂದರು. ಇಂದಿನ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳು ಶ್ರಮ ವಹಿಸಲು ಮುಂದಾಗುವುದಿಲ್ಲ. ಆದರೆ ಅಧ್ಯಯನಶೀಲರಾದರೆ ಮಾತ್ರವೇ ಬೌದ್ಧಿಕವಾಗಿ ಸಾಮಥ್ರ್ಯ ವೃದ್ಧಿಯಾಗಲಿದೆ. ಆಳವಾದ ಅಧ್ಯಯನ ನಮಗೆ ಭರವಸೆ ತಂದುಕೊಡಲಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯದ ಸದ್ಬಳಕೆ ಮಾಡಿ ಕೊಳ್ಳಲು ಸಂಶೋಧನಾ ವಿದ್ಯಾರ್ಥಿಗಳು ಮುಂದಾಗಬೇಕು. ಸಂಶೋಧನೆ ಎಂಬುದು ಹಗುರವಾಗಿ ತೆಗೆದುಕೊಳ್ಳುವ ವಿಚಾರವಲ್ಲ. ಹೀಗಾಗಿ ವಿಷಯದ ಆಯ್ಕೆಯೂ ನಮ್ಮ ಬೌದ್ಧಿಕ ಸಾಮಥ್ರ್ಯ ಸೂಚಿಸುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರೊ.ಎ.ಕೆ.ಹಂಪಣ್ಣ ಅವರ ಸಾಹಿತ್ಯ ಕುರಿ ತಂತೆ ವಿಷಯ ಮಂಡನೆ ಮಾಡಿದ ಸಂಶೋಧನಾ ವಿದ್ಯಾರ್ಥಿ ಎಂ.ರಮೇಶ್, ಸಾಹಿತಿಯಾದವನಿಗೆ ಸಾಮಾಜಿಕ ಬದ್ಧತೆ, ಕಳಕಳಿ ಹಾಗೂ ನೈತಿಕ ಹೊಣೆಗಾರಿಕೆ ಇರಬೇಕೆಂಬುದು ಹಂಪಣ್ಣ ಸಾಹಿತ್ಯ ದಲ್ಲಿ ಪ್ರತಿಧ್ವನಿಸಿದೆ. ನಮ್ಮ ನೆಲದ ಶ್ರೇಣೀಕೃತ ವ್ಯವಸ್ಥೆ ವಿರುದ್ಧ ತಮ್ಮ ಸಾಹಿತ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆವರಿನ ಸಂಕೇತ ವಾದ ಶ್ರಮಜೀವಿಗಳು ಅಲಕ್ಷ್ಯಕ್ಕೆ ಒಳಪಟ್ಟಿರುವುದನ್ನು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ ಎಂದರು. `ಮೌನರಾಗಗಳು, ಕಾದಂ ಬರಿಯ ಮನೋವೈಜ್ಞಾನಿಕ ಹಿನ್ನೆಲೆ’ ಕುರಿತಂತೆ ಪ್ರಬಂಧ ಮಂಡಿ ಸಿದ ಸಂಶೋಧನಾ ವಿದ್ಯಾರ್ಥಿನಿ ಎನ್.ಮಹೇಶ್ವರಿ, ಗಂಗಾ ಪಾದೇಕಲ್ ಈ ಕಾದಂಬರಿ ಕರ್ತೃ. ಅನಾರೋಗ್ಯದಿಂದ ಬಳಲುವ ಶಿವರಾಮ ಪಾತ್ರ ಕಾದಂಬರಿಯ ಕಥಾನಾಯಕ. ಕಿರು ಕಾದಂಬರಿ ಯಾದರೂ ಕಾಯಿಲೆಯಿಂದ ನಲುಗುವ ವ್ಯಕ್ತಿಯೊಬ್ಬರ ಅಂತ ರಂಗದ ತಳಮಳವನ್ನು ಪರಿಣಾಮ ಕಾರಿಯಾಗಿ ತೆರೆದಿಟ್ಟಿದೆ. ಪ್ರಯತ್ನವಿಲ್ಲದೆ ಯಾವುದೇ ಸಮಸ್ಯೆಗೆ ಪರಿಹಾರ ದೊರೆಯು ವುದಿಲ್ಲ ಎಂಬ ಸಂದೇಶವನ್ನು ಕಾದಂಬರಿ ರವಾನಿಸುತ್ತದೆ ಎಂದರು.

ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಸಂಸ್ಥೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.

Translate »