ವಿಜಯನಗರ ಕಾಲದ ಬತೇರಿ ವಿನಾಶದತ್ತ
ಮೈಸೂರು

ವಿಜಯನಗರ ಕಾಲದ ಬತೇರಿ ವಿನಾಶದತ್ತ

August 15, 2019

ಶ್ರೀರಂಗಪಟ್ಟಣ, ಆ.14- ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ (15ನೇ ಶತಮಾನ) ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾದ ಐತಿಹಾಸಿಕ ಬತೇರಿಯು ಸರಿಯಾದ ನಿರ್ವ ಹಣೆಯಿಲ್ಲದೆ ವಿನಾಶದತ್ತ ಸಾಗುತ್ತಿದೆ.

ಸಾವಿರಾರು ವರ್ಷಗಳಿಂದ ಪ್ರಕೃತಿಯ ವೈಪ ರೀತ್ಯಗಳಿಗೆ ಜಗ್ಗದ ಐತಿಹಾಸಿಕ ನಿರ್ಮಾಣಗಳು ಮನುಷ್ಯನ ಸ್ವಾರ್ಥಕ್ಕೆ ಹೇಗೆ ಬಲಿಯಾಗುತ್ತಿವೆ ಎಂಬುದಕ್ಕೆ ಪಟ್ಟಣದ ಬತೇರಿ ನಿದರ್ಶನವಾಗಿದೆ.

ಹಲವು ಧ್ವಜಗಳ ಹಾರಾಟ: ವಿಜಯನಗರ ಸಾಮ್ರಾಜ್ಯದ ಅಂದಿನ ಅರಸ ಪ್ರೌಢÀದೇವರಾಯ (ಎರಡನೇ ದೇವರಾಯ) ತನ್ನ ಸಾಮ್ರಾಜ್ಯದ ರಾಜ ಲಾಂಛನ ವರಾಹ ಧ್ವಜ ಹಾರಿಸುವುದಕ್ಕೆ ಈ ಬತೇರಿ ಯನ್ನು ಶ್ರೀರಂಗಪಟ್ಟಣದಲ್ಲಿ ನಿರ್ಮಾಣ ಮಾಡಿಸಿ ದನು. ಬಳಿಕ ಒಡೆಯರ್ ವಂಶಸ್ಥರು ಸ್ವತಂತ್ರರಾದ ನಂತರ ಗಂಡಭೇರುಂಡ ರಾಜಲಾಂಛನವನ್ನು ಬತೇರಿಯಲ್ಲಿ ಹಾರಿಸುತ್ತಿದ್ದರು. ಆ ನಂತರ ಆಳ್ವಿಕೆಗೆ ಬಂದ ಹೈದರ್ ಹಾಗೂ ಟಿಪ್ಪುಸುಲ್ತಾನ್ ಸೂರ್ಯನ ಲಾಂಛನವನ್ನು ಹಾರಿಸುತ್ತಿದ್ದರು.

1799 ಮೇ 4ರಂದು ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಟಿಪ್ಪುಸುಲ್ತಾನ್ ಸೋತು ಮರಣ ಹೊಂದಿದನು. ಅಂದಿನ ಬ್ರಿಟಿಷ್ ಅಧಿಕಾರಿ ಕರ್ನಲ್ ಗ್ರಹಾಂ ಮೊದಲ ಬಾರಿಗೆ ಬ್ರಿಟಿಷರ ಧÀ್ವಜವನ್ನು ಈ ಬತೇರಿಯಲ್ಲಿ ಹಾರಿಸಿದ್ದ. 1947ರ ಆ.15ರಂದು ಭಾರತ ಸ್ವಾತಂತ್ರ್ಯಗೊಂಡ ಬಳಿಕ ಪ್ರತಿವರ್ಷ ಇಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡ ಲಾಗುತ್ತಿದ್ದು, ತಾಲೂಕಿನ ದಂಡಾಧಿಕಾರಿ ಧ್ವಜಾ ರೋಹಣ ನೆರವೇರಿಸುತ್ತಿದ್ದಾರೆ.

ಕಾವಲು ಗೋಪುರ: ಬತೇರಿಯು ಚೌಕಾಕಾರ ದಲ್ಲಿದ್ದು, 70 ಅಡಿ ಎತ್ತರವಿದೆ. ಮುಂಭಾಗದಲ್ಲಿ ವೀರಾಂಜನೇಯ ವಿಗ್ರಹವಿದೆ. ಬತೇರಿ ಮೇಲೆ ನಿಂತು ನೋಡಿದರೆ ಶ್ರೀರಂಗಪಟ್ಟಣದ ವಿಹಂಗಮ ನೋಟ ಕಾಣಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ಕಾಲದಿಂ ದಲೂ ಬತೇರಿ ಕೇವಲ ಧ್ವಜಾರೋಹಣ ಕೇಂದ್ರ ವಾಗಿರದೆ, ಕಾವಲು ಗೋಪುರವೂ ಆಗಿತ್ತು.

ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ: ಇಂಥ ಐತಿಹಾಸಿಕ ಬತೇರಿಯು ಇಂದು ನಿರ್ಲಕ್ಷ್ಯದಿಂದ ಶಿಥಿಲಗೊಳ್ಳು ತ್ತಿದೆ. ಬತೇರಿಯ ಮಹತ್ವ ತಿಳಿಯದ ಸ್ಥಳೀಯರು, ಕಟ್ಟಡದ ಕೆಲವು ಭಾಗಗಳಲ್ಲಿ ಬೆರಣಿ ತಟ್ಟುತ್ತಿದ್ದಾರೆ. ಇನ್ನು ಕೆಲವರು ಬತೇರಿ ಸ್ಥಳವನ್ನು ಆಕ್ರಮಿಸಿ ಕೊಂಡಿದ್ದಾರೆ. ಇದರಿಂದ ಬತೇರಿಯ ನೈಜ ಸ್ವರೂ ಪವೇ ಬದಲಾಗಿದೆ. ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಬತೇರಿಯ ಪ್ರವೇಶ ದ್ವಾರದಲ್ಲಿ ಯಾವುದೇ ನಿರ್ಬಂಧÀ ಇಲ್ಲದೇ ಇರುವುದರಿಂದ ಯಾರು ಬೇಕಾದರೂ ಒಳಗಡೆ ಬರಬಹುದಾಗಿದೆ. ಹಲವು ಬಾರಿ ಪುಟ್ಟ ಮಕ್ಕಳು ಪೋಷಕರಿಗೆ ತಿಳಿಸದೇ ಇಲ್ಲಿಗೆ ಬಂದು ಕಟ್ಟಡವೇರಿದ್ದುಂಟು. ಇದೆಲ್ಲದರಿಂದ ಅವಘಡ ಸಂಭವಿಸುವ ಸಾಧ್ಯತೆಯೂ ಇದೆ. ಕಾವಲು ಇಲ್ಲದ ಕಾರಣ ರಾತ್ರಿ ವೇಳೆ ಅನೈತಿಕ ಚಟುವಟಿಕೆ ನಡೆಯುತ್ತವೆ ಎಂದು ಸ್ಥಳೀಯರು ದೂರುತ್ತಾರೆ.

ಬತೇರಿಯ ನಿರ್ವಹಣೆ ಯಾರದ್ದು ಎಂಬ ಬಗ್ಗೆ ಸ್ಥಳೀಯರಿಗೆ ಮಾಹಿತಿಯಿಲ್ಲ. ಈ ಸಂಬಂಧ ಸ್ಥಳೀ ಯರು ಪುರಸಭೆಗೆ ಹಲವು ಬಾರಿ ಮನವಿ ಮಾಡಿ ದರೂ ಪ್ರಯೋಜನವಾಗಿಲ್ಲ. ಆದರೆ, ಪುರಸಭೆಗೆ ಇದು ಒಳಪಡುವುದಿಲ್ಲ ಎನ್ನುವುದು ಅಧಿಕಾರಿಗಳ ವಾದ.

ಪ್ರಸ್ತುತ ಬತೇರಿಯಲ್ಲಿ ಕಾವಲು ವ್ಯವಸ್ಥೆ ಇಲ್ಲದಿರು ವುದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಇದರಿಂದ ಅಕ್ಕಪಕ್ಕದ ಮನೆಗಳವರು ಹಾಗೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಕೂಡಲೇ, ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖೆÉಗಳು ಇಲ್ಲಿ ಸೂಕ್ತ ಬಂದೋಬಸ್ತ್ ಮಾಡಬೇಕು. ಮುಂದಿನ ಪೀಳಿಗೆಗೆ ಈ ಬತೇರಿಯನ್ನು ಉಳಿಸಿಕೊಡಬೇಕು. ವರ್ಷದಲ್ಲಿ ಒಂದು ಬಾರಿ ಬತೇರಿಯನ್ನು ನೆನಪಿಸಿ ಕೊಂಡು ಕಾಟಾಚಾರಕ್ಕೆ ಇಲ್ಲಿ ಧÀ್ವಜಾರೋಹಣ ಮಾಡಿ ಹೋಗುವ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇದರ ಅಭಿವೃದ್ಧಿ ಕಡೆ ಗಮನಹರಿಸ ಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಐತಿಹಾಸಿಕ ಸ್ಮಾರಕಗಳನ್ನು ಸರ್ಕಾರಗಳು ಉಳಿ ಸುವ ಕೆಲಸ ಮಾಡುತ್ತಿಲ್ಲ. ಬತೇರಿಯ ರಕ್ಷಣೆ ಕೆಲಸ ವಾಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡಬೇಕಾಗುತ್ತೆ ಎಂದು ತಾಲೂಕು ಕರವೇ ಅಧÀ್ಯಕ್ಷ ಚಂದಗಾಲು ಶಂಕರ್ ಎಚ್ಚರಿಸಿದ್ದಾರೆ.

ಬತೇರಿಯನ್ನು ಪುರಸಭೆ ವ್ಯಾಪ್ತಿಗೆ ನೀಡಬೇಕು. ಬತೇರಿಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಇದಕ್ಕೆ ತಾಲೂಕು ಹಾಗೂ ಜಿಲ್ಲಾಡಳಿತವೇ ನೇರ ಹೊಣೆ. ಆಡಳಿತಾತ್ಮಕವಾಗಿ ಸರ್ಕಾರದ ಒಂದು ಅಂಗವಾಗಿ ರುವ ಪುರಸಭೆ, ಇನ್ನೊಂದು ಅಂಗವಾಗಿರುವ ತಾಲೂಕು ಆಡಳಿತದ ವಿರುದ್ಧ ಪ್ರತಿಭಟಿಸಲು ಇಷ್ಟ ಪಡುವುದಿಲ್ಲ ಎಂದು ಪುರಸಭೆ ಸದಸ್ಯ ಎಸ್. ನಂದೀಶ್ ಹೇಳಿದ್ದಾರೆ.

ವಿನಯ್ ಕಾರೇಕುರ

Translate »