ಯೋಗ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ
ಮೈಸೂರು

ಯೋಗ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ

July 15, 2019

ಮೈಸೂರು, ಜು.14(ಎಂಟಿವೈ)- ಮೈಸೂ ರಿನ ಪುರಭವನದಲ್ಲಿ ಭಾನುವಾರ ನಡೆದ ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 11ನೇ ಘಟಿಕೋತ್ಸವದಲ್ಲಿ ಯೋಗ ಶಿಕ್ಷಣ ಪೂರೈಸಿದ 13 ಮಂದಿ ಚಿನ್ನದ ಪದಕ ವಿಜೇತರೂ ಸೇರಿದಂತೆ 51 ಮಂದಿಗೆ ಪ್ರದವಿ ಪ್ರದಾನ ಮಾಡಲಾಯಿತು.

ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಯೋಗ ಶಿಕ್ಷಕರಿಗೆ ಯೋಗ ತರಬೇತಿ ನೀಡುತ್ತಿದೆ. ಈ ವರ್ಷದ ಘಟಿ ಕೋತ್ಸವವನ್ನು ವಲ್ರ್ಡ್ ಯೋಗ ಅಲೆಯನ್ಸ್ ಸಹಯೋಗದಲ್ಲಿ ನಡೆಸಿ, ಪೆÇೀಸ್ಟ್ ಗ್ರಾಜ್ಯು ಯೆಟ್ ಇನ್ ಯೋಗ ಥೆರಪಿ, ಪೆÇೀಸ್ಟ್ ಗ್ರಾಜ್ಯುಯೆಟ್ ಇನ್ ಯೋಗ ಎಜುಕೇಷನ್, ಡಿಪೆÇ್ಲೀಮಾ ಯೋಗ ಎಜುಕೇಷನ್ ವಿಭಾಗದ 51 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ನೀಡಲಾಯಿತು.

ಮೇಯರ್ ಪುಷ್ಪಲತಾ ಜಗನ್ನಾಥ್ ದೀಪ ಬೆಳಗಿಸುವ ಮೂಲಕ ಘಟಿಕೋ ತ್ಸವವನ್ನು ಉದ್ಘಾಟಿಸಿ ಮಾತನಾಡಿ, ಪ್ರಪಂ ಚಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಲಭಿಸಿದೆ. ಆದರೆ ವಿದೇಶಗಳಲ್ಲಿ ಹೆಚ್ಚು ಜನಪ್ರಿಯಗೊಂಡ ಯೋಗದ ಬಗ್ಗೆ ನಮ್ಮಲ್ಲಿ ತಾತ್ಸಾರ ಮನೋಭಾವ ಕಂಡು ಬರು ತ್ತಿತ್ತು. ಆದರೆ ಕೆಲ ವರ್ಷಗಳಿಂದೀಚೆಗೆ ಮತ್ತೆ ಯೋಗದ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಇದರಿಂದ ಯೋಗ ಆಚರಣೆ ಹಾಗೂ ಯೋಗ ಕಲಿಯುವುದು ಹೆಚ್ಚಾಗಿದೆ. ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಬ್ಬದಂತೆ ಆಚರಿಸಲಾಗುತ್ತಿದೆ. ಎಲ್ಲಾ ಬಡಾವಣೆಗಳಲ್ಲಿಯೂ ಯೋಗ ಪಟುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಸರ್ಕಾರಿ ಆಯುರ್ವೇದ ಮಹಾವಿದ್ಯಾ ಲಯ ಮತ್ತು ಆಸ್ಪತ್ರೆಯ ಹಿರಿಯ ವೈದ್ಯಾ ಧಿಕಾರಿ ಡಾ.ಹೆಚ್.ಎ.ಶಶಿರೇಖಾ ಅವರು ಬಹಿರಂಗ ಮತ್ತು ಅಂತರ ಯೋಗ ಅಭ್ಯಾಸ ದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳುವುದು, ಅದರ ಪ್ರಯೋ ಜನೆ, ಯೋಗ ವೃತ್ತಿ, ಯೋಗ ಶಿಕ್ಷಣದಲ್ಲಿ ಅವಕಾಶಗಳು ಸೇರಿದಂತೆ ಮುಂತಾದ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಎಸ್‍ಎಸ್ ಯೋಗ ಸಂಸ್ಥೆ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಮೈಸೂರನ್ನು ಯೋಗ ನಗರಿ ಎಂದು ಕರೆಯಲಾಗುತ್ತದೆ. ಅದಕ್ಕೆ ಪೂರಕವಾಗಿ ಮೈಸೂರು ಯೋಗ ಅಲೆ ಯನ್ಸ್ ಅಥವಾ ಮೈಸೂರಿನಲ್ಲಿ ಯೋಗ ಒಕ್ಕೂಟದ ಸಂಸ್ಥೆಯ ಕಟ್ಟಬೇಕಿದೆ. ಈ ಮೂಲಕ ಯೋಗ ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದ ರಾಜು ಮಾತನಾಡಿ, ಪ್ರಧಾನಿ ಮೋದಿ ಅವರು ಯೋಗ ಪ್ರಚಾರದ ಬಗ್ಗೆ ಬಹಳಷ್ಟು ಆಸಕ್ತಿ ವಹಿಸಿದ್ದಾರೆ. ಹಿಂದಿನಿಂದಲೂ ಮೈಸೂ ರಿನಲ್ಲಿ ಯೋಗ ಪ್ರಚಾರ ಮಾಡಲಾಗುತ್ತಿದೆ. ಮೈಸೂರಿನ ರಾಜ ಮನೆÀತನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಿಂದ ಯೋಗಕ್ಕೆ ಮಹತ್ವ ನೀಡಲಾಗಿದೆ. ಮೋದಿ ಅವರು ಯೋಗಕ್ಕೆ ಮಹತ್ವ ತಂದುಕೊಟ್ಟರು. ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ಆಚರಿ ಸಲು ಶ್ರಮ ವಹಿಸಿದ್ದಾರೆ. ಮುಂದಿನ ವರ್ಷ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೋದಿ ಭಾಗವಹಿಸುವಂತೆ ಮನವಿ ಮಾಡುತ್ತೇವೆ ಎಂದರು. ಕಾರ್ಯಕ್ರಮ ದಲ್ಲಿ ಯೋಗ ಸ್ಪೋಟ್ರ್ಸ್ ಫೌಂಡೇಷನ್ ಗೌರವ ಜಿಲ್ಲಾಧ್ಯಕ್ಷ ಡಾ.ಪಿ. ಎನ್.ಗಣೇಶ್ ಕುಮಾರ್, ಕೆಎಸ್‍ಎವೈಎಸ್‍ಎ ಅಧ್ಯಕ್ಷ ಗಂಗಾಧರಪ್ಪ ಇತರರು ಉಪಸ್ಥಿತರಿದ್ದರು.

Translate »