ಮೈಸೂರು, ಜು.14(ಪಿಎಂ)- ಮೈಸೂ ರಿನ ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮುಂಭಾಗದ ಎಲೆತೋಟ ವೃತ್ತಕ್ಕೆ ಮೈಸೂರು ಮಹಾನಗರ ಪಾಲಿಕೆಯು `ಶ್ರೀ ಗಣಪತಿ ಸಚ್ಚಿದಾನಂದ ವೃತ್ತ’ ಎಂದು ನಾಮಕಾರಣ ಮಾಡಿದ್ದು, ಭಾನುವಾರ ವೃತ್ತದ ನಾಮ ಫಲಕ ಅನಾವರಣಗೊಳಿಸಲಾಯಿತು.
ನಗರಪಾಲಿಕೆ ವತಿಯಿಂದ ನಿರ್ಮಿಸಿ ರುವ ನಾಮಫಲಕವನ್ನು ಶ್ರೀಗಣಪತಿ ಸಚ್ಚಿ ದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ವಿಜಯಾನಂದತೀರ್ಥ ಸ್ವಾಮೀಜಿ ಹಾಗೂ ಕಾಗಿನೆಲೆ ಮೈಸೂರು ಶಾಖಾ ಮಠದ ಶ್ರೀ ಶಿವನಂದಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮೇಯರ್ ಪುಷ್ಪ ಲತಾ ಜಗನ್ನಾಥ್ ಅನಾವರಣಗೊಳಿಸಿದರು.
ಇದೇ ವೇಳೆ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಶ್ರೀ ಗಣಪತಿ ಸಚ್ಚಿ ದಾನಂದ ಸ್ವಾಮೀಜಿಯವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಲವು ಕೊಡುಗೆ ನೀಡಿದ್ದಾರೆ. ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಿರುವುದು ಸಂತೋ ಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತ ನಾಡಿ, ಎಲ್ಲಾ ದಾನಕ್ಕಿಂತಲೂ ಜ್ಞಾನ ದಾನ ಶ್ರೇಷ್ಠ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ನಿಸ್ವಾರ್ಥವಾಗಿ ಜ್ಞಾನ ದಾನ ಮಾಡುತ್ತಿದ್ದಾರೆ. ದೇಶ-ವಿದೇಶ ಗಳಲ್ಲಿ ಹಾಗೂ ಸ್ಥಳೀಯರಲ್ಲಿ ಜ್ಞಾನ ತುಂಬು ತ್ತಿದ್ದಾರೆ. ಮೈಸೂರು ಭಾಗದಲ್ಲಿ ಮಾತ್ರ ವಲ್ಲದೆ, ಹೊರ ರಾಜ್ಯ ಹಾಗೂ ವಿದೇಶ ದಲ್ಲೂ ಸ್ವಾಮೀಜಿ ಅವರಿಗೆ ಭಕ್ತ ಸಮೂಹ ವಿದೆ. ಅವರ ಹೆಸರನ್ನು ಈ ವೃತ್ತಕ್ಕೆ ನಾಮ ಕರಣ ಮಾಡಿರುವುದು ಅರ್ಥಪೂರ್ಣ ವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಪುಟ್ಟನಿಂಗಮ್ಮ, ಮಾಜಿ ಮೇಯರ್ ಗಳಾದ ನಾರಾಯಣ, ಸಂದೇಶ್ ಸ್ವಾಮಿ, ಪೌರಕಾರ್ಮಿಕ ಮುಖಂಡ ಎನ್.ಮಾರ ಮತ್ತಿತರರು ಹಾಜರಿದ್ದರು.