ಮಹಿಳೆಗೆ ಅಶ್ಲೀಲ ಸಂದೇಶ: ಎಎಸ್‍ಐಗೆ ಧರ್ಮದೇಟು, ದೂರು ದಾಖಲು
ಕೊಡಗು

ಮಹಿಳೆಗೆ ಅಶ್ಲೀಲ ಸಂದೇಶ: ಎಎಸ್‍ಐಗೆ ಧರ್ಮದೇಟು, ದೂರು ದಾಖಲು

March 31, 2019

ಮಡಿಕೇರಿ: ಮಹಿಳೆಯೊಬ್ಬ ರಿಗೆ ಮೊಬೈಲ್‍ನಲ್ಲಿ ಅಸಭ್ಯ ಸಂದೇಶ ಕಳು ಹಿಸಿದ ಎಎಸ್‍ಐಗೆ ಮಹಿಳೆಯ ಪತಿ ಮತ್ತು ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀ ಸರಿಗೆ ಒಪ್ಪಿಸಿದ ಘಟನೆ ಮಡಿಕೇರಿ ಸಮೀ ಪದ ಮಕ್ಕಂದೂರಿನಲ್ಲಿ ನಡೆದಿದೆ.
ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‍ಐ ವಸಂತ ಏಟು ತಿಂದ ಅಧಿ ಕಾರಿ. ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣೆ ಕರ್ತವ್ಯಕ್ಕೆಂದು ಎಎಸ್‍ಐ ವಸಂತ ಮತ್ತು ಸಿಬ್ಬಂದಿಯನ್ನು ಮಕ್ಕಂದೂರು ಭಾಗಕ್ಕೆ ನಿಯೋಜಿಸಲಾಗಿದ್ದು, ಒಂಟಿ ಮನೆಗಳಲ್ಲಿ ವಾಸವಿರುವವರ ವಿವರ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು. ಎಎಸ್‍ಐ ವಸಂತ ಒಂಟಿ ಮನೆಯಲ್ಲಿದ್ದ ಮಹಿಳೆ ಮತ್ತು ಆಕೆ ಪತಿಯ ಮೊಬೈಲ್ ಸಂಖ್ಯೆ ಪಡೆದುಕೊಂಡರು. ಬಳಿಕ ಮಹಿಳೆ ಮೊಬೈಲ್‍ಗೆ ನಿತ್ಯ ಅಸಭ್ಯ ಸಂದೇಶ ಕಳು ಹಿಸಿ ಮಾನಸಿಕ ಕಿರುಕುಳ ನೀಡಿದರು ಎಂದು ಆರೋಪಿಸಲಾಗಿದೆ.

ನೊಂದ ಮಹಿಳೆ ಈ ವಿಚಾರವನ್ನು ಪತಿಗೆ ತಿಳಿಸಿದರು. ಬಳಿಕ ಮಹಿಳೆಯ ಪತಿಯೇ ಎಎಸ್‍ಐ ವಸಂತ ಅವರಿಗೆ `ಪತಿ ಮನೆ ಯಲ್ಲಿ ಇಲ್ಲ’ ಎಂಬ ಸಂದೇಶ ಕಳುಹಿಸಿ ಮನೆಗೆ ಬರುವಂತೆ ಮಾಡಿದರು. ಎಎಸ್‍ಐ ಮನೆಗೆ ಬಂದಾಗ ನೆರೆಹೊರೆಯವರನ್ನು ಸೇರಿಸಿಕೊಂಡು ಥಳಿಸಿದ್ದಾರೆ. ನಂತರ ಮಹಿಳೆ ಮತ್ತು ಆಕೆಯ ಪತಿ ಮಡಿಕೇರಿ ಗ್ರಾಮಾಂತರ ಠಾಣೆಗೆ ತೆರಳಿ ಮೊಬೈಲ್ ಸಂದೇಶಗಳನ್ನು ಹಿರಿಯ ಪೊಲೀಸ್ ಅಧಿ ಕಾರಿಗೆ ತೋರಿಸಿ, ಎಎಸ್‍ಐ ವಸಂತ ವಿರುದ್ಧ ದೂರು ನೀಡಿದ್ದಾರೆ. ಮೇಲಧಿಕಾ ರಿಗಳ ಸೂಚನೆಯಂತೆ ಠಾಣಾಧಿಕಾರಿ ಚೇತನ್ ಎಎಸ್‍ಐ ವಸಂತ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »