ಕೆರೆಗೆ ಬಿದ್ದ ಮರಿಯಾನೆ ರಕ್ಷಣೆ
ಕೊಡಗು

ಕೆರೆಗೆ ಬಿದ್ದ ಮರಿಯಾನೆ ರಕ್ಷಣೆ

March 31, 2019

ವಿರಾಜಪೇಟೆ: ಸಮೀಪದ ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ ಪಾಲಂಗಾಲ ಗ್ರಾಮದ ನೆಲ್ಲಮಕ್ಕಡ ಲಲಿತ ಅವರ ತೋಟದ ಕೆರೆಯಲ್ಲಿ ನೀರು ಕುಡಿ ಯಲು ಹೋದ 6 ವರ್ಷದ ಮರಿ ಆನೆಯೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ರಕ್ಷಿಸಲಾಯಿತು.

ಶನಿವಾರ ಬೆಳಿಗ್ಗೆ 8.30ರ ವೇಳೆ ತೋಟದ ಕೆಲಸಕ್ಕೆ ಹೋದ ಕಾರ್ಮಿಕರಿಗೆ ಕೆರೆಯ ಕೆಸರಲ್ಲಿ ಸಿಲುಕಿ ಪರಿತಪಿಸುತ್ತಿದ್ದ ಮರಿ ಆನೆ ಕಂಡಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ವಿರಾಜಪೇಟೆ ವಿಭಾಗದ ಅರಣ್ಯ ಇಲಾಖೆ ಅಧಿಕಾರಿ ಗೋಪಾಲ್ ಹಾಗೂ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಸಹ ಕಾರದೊಂದಿಗೆ ಮರಿ ಆನೆಯನ್ನು ರಕ್ಷಿಸಿದ್ದಾರೆ. ನಂತರ ಆನೆ ಮರಿಯನ್ನು ಕಾಡಿಗೆ ಬಿಡಲಾಗಿದೆ.

Translate »