ತಿಂಗಳಲ್ಲಿ ಮುಡಾ, ಖಾಸಗಿ ಬಡಾವಣೆ ನಿವೇಶನಗಳಿಗೆ ಖಾತೆ ಮಾಡಿ: ನಗರಪಾಲಿಕೆ ಆಯುಕ್ತರಿಗೆ ಸಚಿವ ವಿ.ಸೋಮಣ್ಣ ತಾಕೀತು
ಮೈಸೂರು

ತಿಂಗಳಲ್ಲಿ ಮುಡಾ, ಖಾಸಗಿ ಬಡಾವಣೆ ನಿವೇಶನಗಳಿಗೆ ಖಾತೆ ಮಾಡಿ: ನಗರಪಾಲಿಕೆ ಆಯುಕ್ತರಿಗೆ ಸಚಿವ ವಿ.ಸೋಮಣ್ಣ ತಾಕೀತು

November 3, 2019

ಮೈಸೂರು ನ.೨(ಎಸ್‌ಪಿಎನ್)- ಮೈಸೂರು ನಗರದ ರಿಂಗ್ ರೋಡ್(೪೨ ಕಿಮೀ) ವ್ಯಾಪ್ತಿಗೆ ಬರುವ ಮುಡಾ ಮತ್ತು ಖಾಸಗಿ ಬಡಾವಣೆಯ ನಿವೇಶನಗಳಿಗೆ ಇನ್ನೊಂದು ತಿಂಗಳಲ್ಲಿ ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಖಾತೆ ಮಾಡಿಕೊಡಬೇಕು ಎಂದು ವಸತಿ, ರೇಷ್ಮೆ, ತೋಟ ಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಅಧಿಕಾರಿ ಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಮೈಸೂರು ಪ್ರವಾಸೋದ್ಯಮದಲ್ಲಿ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿದೆ.ಅದರAತೆ, ಮೈಸೂರು ನಗರ ದಿನೇ ದಿನೆ ಬೆಳವಣಿಗೆಯಾಗುತ್ತಿದ್ದು, ೪೨ ಕಿಮೀ ವ್ಯಾಪ್ತಿಯ ರಿಂಗ್‌ರೋಡ್ ಆಚೆಗೂ ಬಡಾವಣೆಗಳು ತಲೆಯೆತ್ತಿವೆ. ಇದರಿಂದ ಮಹಾನಗರ ಪಾಲಿಕೆಗೆ ಬರಬೇಕಾದ ರಾಜಸ್ವ ಕಡಿಮೆಯಾಗಿದ್ದು, ಇದನ್ನು ಸರಿದೂಗಿಸಲು ರಿಂಗ್ ರೋಡ್ ವ್ಯಾಪ್ತಿಯೊಳಗೆ ಬರುವ ಮುಡಾ ಬಡಾವಣೆ, ಖಾಸಗಿ ಬಡಾವಣೆಗಳ ನಿವೇಶನಗಳಿಗೆ ಪಾಲಿಕೆ ವತಿ ಯಿಂದ ಕಂದಾಯ ವಸೂಲಿ ಮಾಡಬೇಕು ಎಂದರು.

ರಿAಗ್ ರೋಡ್ ವ್ಯಾಪ್ತಿ ಬಡಾವಣೆಗಳ ಖಾತೆ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತಂದಾಗ ಪಾಲಿಕೆ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ದಬ್ಬಾಳಿಕೆ ನಡೆಸದೇ ಮಾನವೀಯತೆಯಿಂದ ಖಾತೆ ಹಂಚಿಕೆ ಮಾಡಬೇಕು. ಸರ್ಕಾರ ಆದೇಶ ನೀಡುವವರೆಗೆ ರಿಂಗ್ ರಸ್ತೆ ಬೀದಿ ದೀಪ ಗಳ ಉಸ್ತುವಾರಿಯನ್ನು ಮುಡಾ ನೋಡಿಕೊಳ್ಳಬೇಕು. ಪಾಲಿಕೆ ಸಹಾ ತನ್ನ ವ್ಯಾಪ್ತಿಯ ಬೀದಿ ದೀಪಗಳನ್ನು ನೋಡಿ ಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು. ಎಂದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಡಿಸಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಓ ಕೆ.ಜ್ಯೋತಿ, ಎಡಿಸಿ ಪೂರ್ಣಿಮಾ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತ ಕಾಂತರಾಜು ಇದ್ದರು.

Translate »