ಬ್ರೇಕ್ ವಿಫಲವಾಗಿ ೫೦ ಅಡಿ ಪ್ರಪಾತಕ್ಕೆ ಇಳಿದ ಕೆಎಸ್‌ಆರ್‌ಟಿಸಿ ಬಸ್
ಮೈಸೂರು

ಬ್ರೇಕ್ ವಿಫಲವಾಗಿ ೫೦ ಅಡಿ ಪ್ರಪಾತಕ್ಕೆ ಇಳಿದ ಕೆಎಸ್‌ಆರ್‌ಟಿಸಿ ಬಸ್

November 3, 2019

ಮಡಿಕೇರಿ, ನ.೨- ಬ್ರೇಕ್ ವಿಫಲವಾದ ಕೆಎಸ್ ಆರ್‌ಟಿಸಿ ಬಸ್ ಚವರ್ಲೆಟ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು ೫೦ ಅಡಿ ಆಳದ ಪ್ರಪಾತಕ್ಕೆ ಇಳಿದ ಘಟನೆ ಮಡಿಕೇರಿ ಹೊರವಲಯದ ಸ್ಯಾಂಡಲ್‌ಕಾಡ್ ಬಳಿ ನಡೆದಿದೆ. ಈ ಘಟನೆಯಲ್ಲಿ ಬಸ್‌ನಲ್ಲಿ ಪ್ರಯಾ ಣಿಸುತ್ತಿದ್ದ ೧೦ ಮಂದಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ. ಬಸ್ ಇಳಿದ ಕಾಫಿ ತೋಟದಲ್ಲಿ ಸಂಪೂರ್ಣ ನೀರಿ ನಿಂದ ಭರ್ತಿಯಾಗಿದ್ದ ದೊಡ್ಡ ಕೆರೆಯೂ ಇದ್ದು, ಬಸ್ ಬ್ರೇಕ್ ಫೇಲ್ ಆದ ಸಮಯದಲ್ಲೂ ಬಸ್ ಅನ್ನು ಕೆರೆಗೆ ಬೀಳದಂತೆ ಅದರ ಚಾಲಕ ನಿಯಂ ತ್ರಿಸಿದ್ದಾನೆ. ಬಸ್ ಚಾಲಕನ ಪ್ರಜ್ಞೆಯಿಂದಾಗಿ ಮುಂದಾಗ ಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾ ಗಿದೆ. ಬಸ್ ಡಿಕ್ಕಿಯಿಂದಾಗಿ ಚವರ್ಲೆಟ್ ಕಾರಿನ ಹಿಂಭಾಗ ಜಖಂ ಆಗಿದ್ದು, ಈ ವಾಹನದಲ್ಲಿದ್ದವರೂ ಅಪಾಯ ದಿಂದ ಪಾರಾಗಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Translate »