ನಜರ್‍ಬಾದ್‍ನಲ್ಲಿ ಶಾಸಕ ನಾಗೇಂದ್ರ ಬಿರುಸಿನ ಪ್ರಚಾರ
ಮೈಸೂರು

ನಜರ್‍ಬಾದ್‍ನಲ್ಲಿ ಶಾಸಕ ನಾಗೇಂದ್ರ ಬಿರುಸಿನ ಪ್ರಚಾರ

April 14, 2019

ಮೈಸೂರು: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಶಾಸಕ ಎಲ್.ನಾಗೇಂದ್ರ ಮೈಸೂರಿನ ನಜರ್‍ಬಾದ್ ನಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿ ದರು. ಚಾಮರಾಜ ಕ್ಷೇತ್ರದ ವಾರ್ಡ್ ನಂ.40ರಲ್ಲಿ ಬಿಜೆಪಿ ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಪ್ರತಾಪ್ ಸಿಂಹ ಅವರಿಗೆ ತಪ್ಪದೆ ಮತ ನೀಡಬೇಕು ಎಂದು ಮನವಿ ಮಾಡಿದರು.

ನಜರ್‍ಬಾದ್ ಮೈಸೂರಿನ ಕೇಂದ್ರ ಭಾಗ ವಾಗಿದ್ದು, ಇಲ್ಲಿನ ಮತದಾರರು ಮೊದ ಲಿನಿಂದಲೂ ಬಿಜೆಪಿಯನ್ನೇ ಬೆಂಬಲಿ ಸುತ್ತಾ ಬಂದಿದ್ದಾರೆ. ಈಗಲೂ ಬಿಜೆಪಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಇಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡಲು ಹಿಂದೆ ಇದ್ದ ಶಾಸಕರಿಂದ ಸಾಧ್ಯವಾಗಿರಲಿಲ್ಲ. ನಾನು ಶಾಸಕನಾದ ನಂತರ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇನ್ನಷ್ಟು ಕೆಲಸಗಳು ಬಾಕಿಯಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ದೇಶದಲ್ಲಿ ಮೋದಿ ಅಲೆಯಿದೆ. ಪ್ರಚಾರಕ್ಕೆ ತೆರೆಳಿದಾಗ ಜನರು, ನೀವು ಬರದಿದ್ದರೂ ಮೋದಿಯವರಿಗೆ ಮತ ನೀಡುತ್ತೇವೆ ಎನ್ನುತ್ತಿದ್ದಾರೆ. ಇಂದಿರಾ ಗಾಂಧಿಯವರ ಅವಧಿಯಲ್ಲಿ ಕಾಂಗ್ರೆಸ್ ನಿಂದ ಯಾರೇ ಸ್ಫರ್ಧಿಸಿದರೂ ಗೆಲ್ಲುತ್ತಿದ್ದ ಪರಿಸ್ಥಿತಿ ಇಂದು ಬಿಜೆಪಿಯಲ್ಲಿದೆ ಎಂದರು. ಪಾಲಿಕೆ ಸದಸ್ಯ ಸತೀಶ್, ಮುಖಂಡ ರಾದ ವಾಣೀಶ್ ಕುಮಾರ್ ಪರಮೇಶ್, ರಾಜು, ರವಿ, ಅಶೋಕ್, ಮೋಹನ್, ಪ್ರಕಾಶ್, ಕಾಂತರಾಜು, ಮಂಜುನಾಥ್ ಇತರರಿದ್ದರು.

ಶಾಸಕ ರಾಮದಾಸರೊಂದಿಗೆ ಪ್ರತಾಪ ಸಿಂಹ ಮತಯಾಚನೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರು ಶಾಸಕ ಎಸ್.ಎ.ರಾಮದಾಸ್ ಅವರೊಡಗೂಡಿ ಕೆ.ಆರ್.ಕ್ಷೇತ್ರ ವ್ಯಾಪ್ತಿಯಲ್ಲಿ ರ್ಯಾಲಿ ಮೂಲಕ ಬಿರುಸಿನ ಪ್ರಚಾರ ನಡೆಸಿದರು.

ಶನಿವಾರ ಮಧ್ಯಾಹ್ನ ವಿದ್ಯಾರಣ್ಯಪುರಂನ ಅಂದಾನಿ ವೃತ್ತದಿಂದ ಹೊರಟ ಪ್ರಚಾರ ರ್ಯಾಲಿ, ಚಾಮುಂಡಿಪುರಂ ವೃತ್ತಕ್ಕೆ ಬರುತ್ತಿದ್ದಂತೆ ನೆರೆದಿದ್ದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಅಭ್ಯರ್ಥಿ ಪ್ರತಾಪ ಸಿಂಹ ಮತ್ತು ಶಾಸಕ ಎಸ್.ಎ.ರಾಮದಾಸ್ ಅವರಿಗೆ ಹೂವಿನಹಾರ ಹಾಕಿ ಸ್ವಾಗತಿಸಿದರು. ಈ ವೇಳೆ ಮೋದಿ ಮತ್ತೊಮ್ಮೆ, ಮೋದಿ ಮತ್ತೊಮ್ಮೆ ಘೊಷಣೆ ಕೂಗಿದರು.

ಅಲ್ಲಿಂದ ಹೊರಟ ರ್ಯಾಲಿ, ಚಾಮುಂಡಿ ವನ, ಬಿಂದು ಬೇಕರಿ, ಧರ್ಮಸಿಂಗ್ ಕಾಲೋನಿ, ಸೇಂಟ್‍ಮೇರಿಸ್ ವೃತ್ತ, 16ನೇಕ್ರಾಸ್(ಬಿಜೆಪಿ ಕಚೇರಿ), ಬಸವೇಶ್ವರ ರಸ್ತೆ, ಅಗ್ರಹಾರ ವೃತ್ತ, ನೂರೊಂದು ಗಣಪತಿ ದೇವಸ್ಥಾನ, ಮಹದೇಶ್ವರ ದೇವಸ್ಥಾನ ವೃತ್ತ, ಹುಲ್ಲಿನ ಬೀದಿ, ಸುಣ್ಣದಕೇರಿ ಮಾರ್ಕೆಟ್, ಕೊಲ್ಲಪುರದಮ್ಮ ದೇವಸ್ಥಾನ, ಶ್ರೀರಾಮ ಬೀದಿ ಸೇರಿದಂತೆ ಸುತ್ತಮುತ್ತ ಪ್ರಚಾರ ನಡೆಸಿ ಮತ ಯಾಚಿಸಿದರು.

ಈ ವೇಳೆ ಪ್ರತಾಪಸಿಂಹ ಅವರು ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು, ಬೆಂಬಲಿಸುವಂತೆ ಮನವಿ ಮಾಡಿದರು. ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು ಮತ್ತಿತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Translate »