ಕಾಶಿ ಸಮಸ್ಯೆ ಬಗ್ಗೆ ಗಮನ ಸೆಳೆದ ಮೈಸೂರು ಯುವಕನಿಗೆ ಪ್ರಧಾನಿ ಕಚೇರಿಯಿಂದ ಪ್ರಶಂಸೆ
ಮೈಸೂರು

ಕಾಶಿ ಸಮಸ್ಯೆ ಬಗ್ಗೆ ಗಮನ ಸೆಳೆದ ಮೈಸೂರು ಯುವಕನಿಗೆ ಪ್ರಧಾನಿ ಕಚೇರಿಯಿಂದ ಪ್ರಶಂಸೆ

April 14, 2019

ಮೈಸೂರು: ಕಾಶಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ನೀರಿನ ಪೈಪ್‍ಲೈನ್ ಸರಿಪಡಿಸುವಂತೆ ಮೈಸೂರಿನ ಯುವಕ ನೀಡಿದ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ.

ಮೈಸೂರಿನಲ್ಲಿ ಏ.9ರಂದು ಬಿಜೆಪಿ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ಮನವಿ ನೀಡಿದ್ದ ನಮೋ ಭಾರತ್ ಮೈಸೂರು ತಂಡದ ಸ್ವಯಂ ಸೇವಕ ಬಿ.ಎಂ.ಸಂತೋಷ್‍ಗೆ, ಏ.10ರಂದು ಬೆಳಿಗ್ಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಕರೆ ಮಾಡಿ, ಧನ್ಯವಾದ ತಿಳಿಸಿದ್ದಾರೆ.

ಇತ್ತೀಚೆಗೆ ಸ್ನೇಹಿತರೊಂದಿಗೆ ಸಂತೋಷ್, ಉತ್ತರದ ಪ್ರಯಾಗ್‍ರಾಜ್ ನಲ್ಲಿ ನೆರವೇರಿದ ಕುಂಭಮೇಳದಲ್ಲಿ ಭಾಗ ವಹಿಸಿ, ಕಾಶಿಗೆ ಪ್ರಯಾಣ ಬೆಳೆಸುವಾಗ ರಸ್ತೆ ವಿಭಜಕದ ಬಳಿ ಅಳವಡಿಸಿದ್ದ ನೀರಿನ ಪೈಪ್‍ಲೈನ್ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿದ್ದರು. ಅಲ್ಲದೆ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿ ಯಾಗಿದ್ದ ಆ ಪೈಪ್‍ನ ಫೋಟೋ ತೆಗೆದಿದ್ದರು. ಈ ಸಮಸ್ಯೆಯನ್ನು ಪತ್ರದಲ್ಲಿ ನಮೂದಿಸಿ, ಫೋಟೋ ಸಹಿತ ಏ.9 ರಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ನೀಡಿದ್ದರು. ಇದೊಂದು ಸಣ್ಣ ಸಮಸ್ಯೆ ಯಾಗಿರುವುದರಿಂದ ನಿರ್ಲಕ್ಷ್ಯಿಸಬಹು ದೆಂದು ಭಾವಿಸಿದ್ದ ಸಂತೋಷ್‍ಗೆ ಆಶ್ಚರ್ಯ ಕಾದಿತ್ತು. ಮನವಿ ನೀಡಿದ್ದ ಮರುದಿನವೇ ಪ್ರಧಾನ ಮಂತ್ರಿಗಳ ಕಚೇರಿಯಿಂದ ಸಂತೋಷ್‍ಗೆ ಕರೆ ಬಂದಿತ್ತು. ವಾರಣಾಸಿ -ಕಾಶಿ ಮಾರ್ಗದಲ್ಲಿ ನೀರಿನ ಪೈಪ್ ಸಂಚಾ ರಕ್ಕೆ ಅಡ್ಡಿಯಾಗಿರುವ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳ ಲಾಗುವುದು. ಕಳೆದ 5 ವರ್ಷಗಳಲ್ಲಿ ಕಾಶಿಯಲ್ಲಾಗಿರುವ ಬದಲಾವಣೆಯನ್ನು ನೀವು ಕಂಡಿದ್ದೀರಿ. ಪ್ರಧಾನಿ ಮೋದಿ ಅವರ ಪರಿಶ್ರಮವೂ ನಿಮಗೆ ತಿಳಿದಿದೆ. ತಾವು ಕಂಡ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಶ್ಲಾಘಿಸಿ ದರೆಂದು ಸಂತೋಷ್ `ಮೈಸೂರು ಮಿತ್ರ’ನೊಂದಿಗೆ ಸಂತಸ ಹಂಚಿಕೊಂಡರು.

ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಮನವಿ ನೀಡುವುದು ಸಾಮಾನ್ಯ. ಅದನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತಾರೆಂಬುದು ಎಲ್ಲರಿಗೂ ತಿಳಿದಿದೆ. ಮ್ಯಾನ್ ಹೋಲ್ ದುರಸ್ಥಿಗೆ ನಾಲ್ಕೈದು ಬಾರಿ ನಗರಪಾಲಿಕೆಯನ್ನು ಒತ್ತಾಯಿಸಬೇಕು. ಹೀಗಿರುವಾಗ ಪ್ರಧಾನಿ ಮೋದಿ ಅವರು ಸಾಮಾನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸ್ಪಂದಿಸಿರುವುದು ಖುಷಿ ತಂದಿದೆ ಎನ್ನುತ್ತಾರೆ ಸಂತೋಷ್.

Translate »