ವಿದ್ಯಾರಣ್ಯಪುರಂನಲ್ಲಿ 4 ಕೋಟಿ ವೆಚ್ಚದ ಚರಂಡಿ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ವಿದ್ಯಾರಣ್ಯಪುರಂನಲ್ಲಿ 4 ಕೋಟಿ ವೆಚ್ಚದ ಚರಂಡಿ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ

June 17, 2019

ಮೈಸೂರು, ಜೂ.16(ಪಿಎಂ)- ಮೈಸೂರು ಮಹಾನಗರ ಪಾಲಿಕೆ ಒಳ ಚರಂಡಿ ವಿಭಾಗದಿಂದ ಕೈಗೆತ್ತಿಕೊಂಡಿ ರುವ 4 ಕೋಟಿ ರೂ. ವೆಚ್ಚದ ಒಳ ಚರಂಡಿ ಕಾಮಗಾರಿಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಚಾಲನೆ ನೀಡಿದರು.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ರುವ ನಗರಪಾಲಿಕೆ ತ್ಯಾಜ್ಯ ನೀರು ಸಂಸ್ಕ ರಣಾ ಘಟಕದ (ಎಸ್‍ಟಿಪಿ-ಬಿ ಆವ ರಣ) ಆವರಣದಲ್ಲಿ 2017-18ನೇ ಸಾಲಿನ ಎಸ್‍ಎಫ್‍ಸಿ ಅನುದಾನದಲ್ಲಿ ಕೈಗೆತ್ತಿಕೊಳ್ಳು ತ್ತಿರುವ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಮೈಸೂರು ನಗರದ ಹೆಚ್‍ಡಿ ಕೋಟೆ ರಸ್ತೆಯಿಂದ ಶಾರದ ವಿಲಾಸ ಕಾಲೇಜು ವರೆಗೆ ನಡೆಯಲಿರುವ ಒಳಚರಂಡಿ ತ್ಯಾಜ್ಯ ನೀರು ಕೊಳವೆ ಮಾರ್ಗ ಕಾಮ ಗಾರಿ ಇದಾಗಿದೆ. ಇದೇ ವೇಳೆ ಮಾತ ನಾಡಿದ ಎಸ್.ಎ.ರಾಮದಾಸ್, ಈ ಭಾಗ ದಲ್ಲಿ ಮಳೆಗಾಲದ ಸಂದರ್ಭದಲ್ಲಿ ಒಳಚರಂಡಿಗೆ ಮಳೆ ನೀರು ಸೇರಿಕೊಂಡು ಮನೆಗಳಿಗೆ ನುಗ್ಗುವ ಸ್ಥಿತಿ ಇದೆ. ಇದಕ್ಕೆ ಪರಿಹಾರವಾಗಿ ಈ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ ಎಂದು ಹೇಳಿದರು.

ಎಕ್ಸೆಲ್ ಪ್ಲಾಂಟ್‍ನಲ್ಲಿ ಬಿದ್ದಿರುವ 7 ಲಕ್ಷ ಟನ್ ಕಸದ ಮೇಲೆ ಮಣ್ಣು ಹಾಕಿ ಗಿಡ ನೆಡುವ ಕಾರ್ಯ ಈಗಾಗಲೇ ಪ್ರಾರಂಭ ವಾಗಿದೆ. ಇದರ ಜೊತೆಗೆ ಮೈಸೂರು ನಗರದ ತ್ಯಾಜ್ಯ ಸಂಗ್ರಹಕ್ಕೆ ಈಗಾಗಲೇ ನಗರದ 8 ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಎಕ್ಸೆಲ್ ಪ್ಲಾಂಟ್‍ಗೆ ಪರ್ಯಾಯವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಯನಕೆರೆಯ 110 ಎಕರೆ ಪ್ರದೇಶದಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆಯ ಘಟಕ ಸ್ಥಾಪನೆಗೆ ಮುಂದಾ ಗಿದ್ದು, ಈಗಾಗಲೇ ಈ ಸಂಬಂಧ ಡಿಪಿಆರ್ ಸಹ ಸಿದ್ಧಗೊಂಡಿದೆ. ಟೆಂಡರ್ ಕರೆದು ಕೆಲಸ ಆರಂಭಿಸಿದರೆ ಒಂದೂವರೆ ವರ್ಷ ದಲ್ಲಿ ಪೂರ್ಣಗೊಳ್ಳಲಿದೆ ಎಂದು ವಿವರಿ ಸಿದರು. ಈ ವೇಳೆ ನಗರಪಾಲಿಕೆ ಸದಸ್ಯ ಶಾಂತಮ್ಮ ವಡಿವೇಲು, ಕಾಮಗಾರಿಯ ಗುತ್ತಿಗೆದಾರರ ಸಿದ್ದಪ್ಪ, ಬಿಜೆಪಿ ಮುಖಂಡ ರಾದ ನಾಗೇಂದ್ರ, ದೇವರಾಜೇಗೌಡ, ಸುರೇಶ್, ಬಿಜೆಪಿ ವಾರ್ಡ್ ಅಧ್ಯಕ್ಷ ಕಲಿಯ ಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ.ಮುರು ಗೇಶ್, ಕಾರ್ಯಕರ್ತರಾದ ಕೇಶವ, ಹರಿ ಯಪ್ಪ, ಚಂದ್ರಶೇಖರ್, ರಾಜಣ್ಣ, ರುದ್ರೇಶ್ ಮತ್ತಿತರರು ಹಾಜರಿದ್ದರು.

47ನೇ ವಾರ್ಡ್‍ನಲ್ಲಿ ಇಂದು ಶಾಸಕ ರಾಮದಾಸ್ `ಜನ ಸ್ಪಂದನಾ ಯಾತ್ರೆ’ಮೈಸೂರು

ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಜೂನ್17ರ ಸೋಮವಾರ 47ನೇ ವಾರ್ಡ್‍ನಲ್ಲಿ ಜನಸ್ಪಂದನಾ ಯಾತ್ರೆ ಹಮ್ಮಿಕೊಂಡಿದ್ದಾರೆ.ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಯಾತ್ರೆ ಕೈಗೊಂಡು ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ. ಬೆಳಿಗ್ಗೆ 6.30 ಗಂಟೆಗೆ ಸುಮ ಸೋಪಾನ ಉದ್ಯಾನವನ, 7.15ಕ್ಕೆ ಪೂರ್ಣದೃಷ್ಟಿ ರಸ್ತೆಯ ಜಗದಾಂಬ ಪೆಟ್ರೋಲ್ ಬಂಕ್ ಹಿಂಭಾಗ, 7.30ಕ್ಕೆ ಹುಡ್ಕೋ ಗಣಪತಿ ದೇವಸ್ಥಾನ, 8 ಗಂಟೆಗೆ ಅನಿಕೇತನ ರಸ್ತೆ 7ನೇ ಕ್ರಾಸ್ ಕುಮಾರ್ ಮೆಡಿಕಲ್ ಎದುರು, 8.30ಕ್ಕೆ ಸರಸ್ವತಿಪುರಂ 12ನೇ ಮುಖ್ಯ ರಸ್ತೆಯ ಕುವೆಂಪು ಶಾಲೆಯ ಬಳಿ, 9 ಗಂಟೆಗೆ ರಾಘವೇಂದ್ರ ಕಲ್ಯಾಣ ಮಂಟಪದ ಪಕ್ಕ ಖಾಲಿ ನಿವೇಶನಗಳ ಸ್ವಚ್ಛತೆ, 9.30 ಗಂಟೆಗೆ ದಿನೇಶ್ ಕೋಚಿಂಗ್ ಬಳಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾಗರಿಕರು ತಮ್ಮ ಕುಂದು ಕೊರತೆಗಳನ್ನು ಶಾಸಕರ ಗಮನಕ್ಕೆ ತರಬಹುದಾಗಿದೆ.

Translate »