ಮೈಸೂರಲ್ಲಿ 5 ಸಾವಿರ ಯೋಗಪಟುಗಳಿಂದ ಅಂತಿಮ ಯೋಗ ತಾಲೀಮು
ಮೈಸೂರು

ಮೈಸೂರಲ್ಲಿ 5 ಸಾವಿರ ಯೋಗಪಟುಗಳಿಂದ ಅಂತಿಮ ಯೋಗ ತಾಲೀಮು

June 17, 2019

ಮೈಸೂರು:  ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂತಿಮ ತಾಲೀಮು ಭಾನುವಾರ ಮೈಸೂ ರಿನ ರೇಸ್ ಕೋರ್ಸ್‍ನಲ್ಲಿ (ಎಂಆರ್‍ಸಿ) ನಡೆಯಿತು. ಐದು ಸಾವಿರಕ್ಕೂ ಹೆಚ್ಚಿನ ಯೋಗ ಪಟುಗಳು ಸಾಮೂಹಿಕವಾಗಿ ಈ ತಾಲೀಮಿನಲ್ಲಿ ಭಾಗವಹಿಸಿ, ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಜಿಲ್ಲಾಡಳಿತ, ಯೋಗ ಫೆಡರೇಷನ್ ಆಫ್ ಮೈಸೂರು ಆಶ್ರಯದಲ್ಲಿ ಮೈಸೂರಿನ ವಿವಿಧ ಯೋಗ ಸಂಘಟನೆಗಳ ಸಹಯೋಗ ದಲ್ಲಿ ನಡೆದ ಅಂತಿಮ ತಾಲೀಮಿಗೆ ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ವೇಳೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಎಸ್.ಎ.ರಾಮದಾಸ್, ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಯೋಗ ಫೆಡರೇಷನ್ ಆಫ್ ಮೈಸೂರು ಮುಖ್ಯಸ್ಥ ಶ್ರೀಹರಿ, ಅಂತಾರಾಷ್ಟ್ರೀಯ ಯೋಗ ಪಟು ಖುಷಿ ಇನ್ನಿತರರು ಭಾಗವಹಿಸಿದ್ದರು.

ಮೊದಲಿಗೆ ತಾಡಾಸನದಿಂದ ಶವಾಸನ ದವರೆಗೆ ವಿವಿಧ ಆಸನಗಳು, ಪ್ರಾಣಾ ಯಾಮ, ಧ್ಯಾನ, ಸಂಕಲ್ಪ, ಶಾಂತಿಮಂತ್ರ ದೊಂದಿಗೆ ಒಂದು ಗಂಟೆ ಕಾಲ ಯೋಗ ತಾಲೀಮು ನಡೆಯಿತು.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ರೇಸ್ ಕೋರ್ಸ್ ಮೈದಾನದಲ್ಲಿ 1.5 ಲಕ್ಷ ಯೋಗ ಪಟುಗಳನ್ನು ಸೇರಿಸುವ ಪ್ರಯತ್ನ ನಡೆ ದಿದ್ದು, ಇದಕ್ಕಾಗಿ ಎಲ್ಲಾ ಯೋಗಪಟು ಗಳು ತಲಾ 10 ಮಂದಿ ಯೋಗಾಸಕ್ತ ರನ್ನು ಕರೆ ತರುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು. ಜಿಎಸ್‍ಎಸ್ ಯೋಗ ಫೌಂಡೇಷನ್‍ನ ಶ್ರೀಹರಿ, ವಿವಿಧ ಯೋಗ ಸಂಘಟನೆಗಳ ಮುಖ್ಯಸ್ಥರಾದ ಶಶಿಕುಮಾರ್, ಸತ್ಯನಾರಾಯಣ, ಡಾ. ಬಿ.ಪಿ.ಮೂರ್ತಿ, ನಾಗಭೂಷಣ್, ಯೋಗ ಅನಂತ್, ರಂಗನಾಥ್ ಇನ್ನಿತರರು ಈ ಸಂದರ್ಭದಲ್ಲಿ ಯೋಗಾಭ್ಯಾಸ ನಡೆಸಿ ಕೊಟ್ಟರು. ರೇಸ್‍ಕೋರ್ಸ್ ಮೈದಾನದಲ್ಲಿ ಅಂತಿಮ ಯೋಗ ತಾಲೀಮಿನಲ್ಲಿ ಸಾವಿ ರಾರು ಯೋಗ ಪಟುಗಳು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ರೇಸ್‍ಕೋರ್ಸ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡ ಲಾಗಿತ್ತು. ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಸಂಚಾರ ಮಾರ್ಗ ಬದ ಲಾವಣೆ ಕೂಡ ಮಾಡಲಾಗಿತ್ತು.

Translate »