ಪತ್ರಕರ್ತರ ಕ್ರೀಡಾಕೂಟಕ್ಕೆ ತೆರೆ ವಿಜೇತರಿಗೆ ಬಹುಮಾನ
ಮೈಸೂರು

ಪತ್ರಕರ್ತರ ಕ್ರೀಡಾಕೂಟಕ್ಕೆ ತೆರೆ ವಿಜೇತರಿಗೆ ಬಹುಮಾನ

June 17, 2019

ಮೈಸೂರು,ಜೂ.16(ವೈಡಿಎಸ್)- ಮೈಸೂರು ವಿವಿ ಹಾಕಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಬಹು ಮಾನ ವಿತರಿಸಿದರು. ನಂತರ ಮಾತನಾಡಿದ ಅವರು, ವರ್ಷದ 365 ದಿನಗಳು ಪೊಲೀ ಸರಂತೆ ಹಗಲು-ರಾತ್ರಿ ಕಾರ್ಯನಿರ್ವಹಿ ಸುವ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ವಿವಿಧ ಕ್ರೀಡೆ ಆಯೋ ಜಿಸಿರುವುದು ಸಂತಸ ತಂದಿದೆ ಎಂದರು.

ಮಕ್ಕಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಪೋಷಕರು ಪ್ರೋತ್ಸಾ ಹಿಸಬೇಕು. ನಾನು ಮುಡಾ ಅಧ್ಯಕ್ಷನಾಗಿ ದ್ದಾಗ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 100 ಕ್ರೀಡಾಪಟುಗಳಿಗೆ ನಿವೇಶನ ನೀಡಿದ್ದು ಸಂತೋಷದ ವಿಷಯ ಎಂದು ಹೇಳಿದರು.

ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ ಅಂಜಲಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಗೌರವ ಕಾರ್ಯದರ್ಶಿ ಲೋಕೇಶ್‍ಬಾಬು, ಉಪಾಧ್ಯಕ್ಷ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜೇತರ ಪಟ್ಟಿ ಇಂತಿದೆ: ಪುರುಷರ ಕ್ರಿಕೆಟ್: ಸುರೇಶ್ ಮತ್ತು ತಂಡ(ಪ್ರ), ರವಿ ಪಾಂಡವಪುರ ಮತ್ತು ತಂಡ (ದ್ವಿ), 5 ವರ್ಷದೊಳಗಿನ ಬಾಲಕರ 50ಮೀ. ಓಟ: ಯುವರಾಜ್ ಕಿರಣ(ಪ್ರ), ಘನಲಿಂಗೇಶ್ (ದ್ವಿ), ಎ.ಎಸ್.ತನಲ್(ತೃ). ಬಾಲಕಿಯರು: ಎನ್.ಎಸ್.ಮೋಕ್ಷಿತಾ(ಪ್ರ), ರೀತು ಹರಿ ಶ್ಚಂದ್ರ(ದ್ವಿ), ಸಿಪಿಎನ್ ಲಕ್ಷ್ಮಿ(ತೃ). 8 ವರ್ಷದ ಬಾಲಕರ 50 ಮೀ.ಓಟ: ಧನ್ವಿತ್ ಸತೀಶ್‍ಕುಮಾರ್(ಪ್ರ), ಇಶಾನ್ ಗೌಡ(ದ್ವಿ), ಎ.ಎಸ್.ಜತಿನ್(ತೃ). ಬಾಲಕಿ ಯರು: ರಿಯಾ ಹರಿಶ್ಚಂದ್ರ(ಪ್ರ), ಸಂಹಿತಾ ಕೂಡ್ಲಿ(ದ್ವಿ), ಎನ್.ಎಸ್.ಮೈತ್ರಿಯ(ತೃ).

8 ವರ್ಷ ಮೇಲ್ಪಟ್ಟ ಬಾಲಕಿಯರು: ದಿಶಾ(ಪ್ರ), ಪ್ರತೀಕ್ಷಾ ಶಿವಕುಮಾರ್(ದ್ವಿ), ಭುವಿತ ಕೃಷ್ಣ(ತೃ). ಬಾಲಕರು: ಮನವ್ ಸಮರ್ಥ(ಪ್ರ), ರಜತ್ ಹರೀಂದ್ರ(ದ್ವಿ), ಸುಮನ್ ಎ.ಅರುಣ್‍ಕುಮಾರ್(ತೃ). 8 ವರ್ಷದೊಳಗಿನ ಬಾಲಕಿಯರ ಮ್ಯೂಸಿ ಕಲ್ ಚೇರ್ ಸ್ಪರ್ಧೆ: ಸಾರಿಯಾ(ಪ್ರ), ಆರ್.ಲಕ್ಷ್ಮಿ(ದ್ವಿ), ರಕ್ಷಾ (ತೃ). ಬಾಲಕರು: ಕಾರ್ತಿಕ್(ಪ್ರ), ಗಗನ್ ಬಸವರಾಜು(ದ್ವಿ), ಧನ್ವಿತ್(ತೃ). 8 ವರ್ಷ ಮೇಲ್ಪಟ್ಟ ಬಾಲಕರು: ಥಾಮಸ್ ಎಸ್.ಶಿವಕುಮಾರ್(ಪ್ರ), ರಜತ್ ಹರಿಶ್ಚಂದ್ರ(ದ್ವಿ), ಎಂ.ಆರ್.ಪ್ರೀತಂ(ತೃ). ಬಾಲಕಿಯರು: ಪ್ರತೀಕ್ಷಾ ಶಿವಕುಮಾರ್(ಪ್ರ), ಗ್ರೀಷ್ಮಾ ಮಹದೇವ್(ದ್ವಿ), ದಿಶಾ(ತೃ).

ಮಹಿಳೆಯರ 100 ಮಿ.ಓಟ: ಲತಾ ಶಶಿಧರ್(ಪ್ರ), ದಿವ್ಯಶಿವಕುಮಾರ್(ದ್ವಿ), ರಮ್ಯಪವನ್(ತೃ). ಬಾಲಕಿಯರು: ದಿಶಾ ಶಿವಕುಮಾರ್(ಪ್ರ), ಭುವಿತಾ ಕೃಷ್ಣ(ದ್ವಿ), ಪ್ರತೀಕ್ಷಾ ಎಸ್.ಶಿವಕುಮಾರ್(ತೃ). ಸೈಕಲ್ ರೇಸ್: ಪುರುಷರು: ಗೌತಮ್ (ಪ್ರ), ಬ್ರಿಜೇಶ್(ದ್ವಿ), ಹೆಚ್.ಎಸ್. ಗಜೇಂದ್ರ(ತೃ). ಮಹಿಳೆಯರು: ಸಂಜನಾಜೈನ್(ಪ್ರ), ದಿವ್ಯಶಿವ ಕುಮಾರ್(ದ್ವಿ), ಉಷಾ ಮೋಹನ್(ತೃ). ಬಾಲಕಿಯರು: ಹಂಸಿನಿ ಲೋಕೇಶ್ ಬಾಬು(ಪ್ರ), ಭುವಿಕ ಆರ್.ಕೃಷ್ಣ(ದ್ವಿ), ಹೊನ್ನಿಧಿ ತಾರಾನಾಥ್(ತೃ). ಬಾಲಕರು: ರಜತ್ ಹರೀಂದ್ರ(ಪ್ರ), ಶ್ರೇಷ್ಠ ಜುಪ್ತಿಮಠ್(ದ್ವಿ), ಸುಮನ್ ಎ.ಅರುಣ್‍ಕುಮಾರ್(ತೃ).

ಲೆಮನ್ ಅಂಡ್ ಸ್ಪೂನ್: ಬಾಲಕರು: ಶ್ರೇಷ್ಠ ಜುಪ್ತಿಮಠ್(ಪ್ರ), ಕೆ.ಹೆಚ್.ರಜತ್ (ದ್ವಿ), ಸಮರ್ಥ್ ಗೋಪಿನಾಥ್(ತೃ). ಬಾಲಕಿಯರು: ಎಸ್.ಎ.ನಿಶ್ವಿತ(ಪ್ರ), ಎನ್.ಎಸ್.ಮೈತ್ರೀಯ(ದ್ವಿ), ಡಿ.ರಿಯಾ (ತೃ). ಗುಂಡು ಎಸೆತ: ಮಹಿಳೆಯ: ದಿವ್ಯಾ(ಪ್ರ), ನಂದಿನಿ(ದ್ವಿ), ಎಸ್.ಉಷಾ (ತೃ). 30 ವರ್ಷದೊಳಗಿನವರ 100 ಮೀ. ಓಟ: ಸಾಗರ್(ಪ್ರ), ದಿವ್ಯೇಶ್(ದ್ವಿ), ಚಂದ್ರು(ತೃ). 30 ವರ್ಷ ಮೇಲ್ಪಟ್ಟವರು: ಹರಿಶ್ಚಂದ್ರ(ಪ್ರ), ಸೋಮಪ್ಪ(ದ್ವಿ), ಪಿ.ಎ.ನಂದೀಶ್(ತೃ).
40 ವರ್ಷದೊಳಗಿನವರ ಗುಂಡು ಎಸೆತ: ಚಂದ್ರು(ಪ್ರ), ರಂಜಿತ್(ದ್ವಿ), ರವಿಬೂದಿತಿಟ್ಟು(ತೃ). 40 ವರ್ಷ ಮೇಲ್ಪಟ್ಟವರು: ಹರಿಶ್ಚಂದ್ರ ದೇವರ ಮಾರು(ಪ್ರ), ಹೆಚ್.ಎಸ್.ಗಜೇಂದ್ರ ಹುಣಸೂರು(ದ್ವಿ), ಪಿ.ಎ.ನಂದೀಶ್(ತೃ). ಶಾಟ್ ಪುಟ್: ಬಾಲಕರು: ನಾಗಾರ್ಜುನ ಲೋಕೇಶ್‍ಬಾಬು(ಪ್ರ), ನಿತಿನ್ ಸುರೇಶ್(ದ್ವಿ), ಮನವ್‍ಸಮರ್ಥ(ತೃ). ಬಾಲಕಿಯರು: ಹೊನ್ನಿಧಿ ತಾರಾನಾಥ್ (ಪ್ರ), ದೀಕ್ಷಿತಾ ಅಶೋಕರಾವ್(ದ್ವಿ), ಪ್ರತೀಕಾ ಶಿವಕುಮಾರ್(ತೃ) ಬಹುಮಾನ ಪಡೆದುಕೊಂಡರು.

Translate »