ಕಬಿನಿ ಹಿನ್ನೀರು ಬಳಿ ಇಂಡಿಯನ್ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿ ಸ್ಥಾಪನೆ
ಮೈಸೂರು

ಕಬಿನಿ ಹಿನ್ನೀರು ಬಳಿ ಇಂಡಿಯನ್ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿ ಸ್ಥಾಪನೆ

June 17, 2019

ಮೈಸೂರು: ಕಬಿನಿ ಹಿನ್ನೀರು ಬಳಿ ಎರಡು ಎಕರೆ ಪ್ರದೇಶದಲ್ಲಿ `ಇಂಡಿಯನ್ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿ’ ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮಾಜಿ ಸಚಿವರೂ ಆದ ಶಾಸಕ ಎ.ಹೆಚ್.ವಿಶ್ವನಾಥ್ ಹೇಳಿದರು.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಐಎಎಸ್ ಅಧಿಕಾರಿ ಡಾ.ಎಂ.ಆರ್.ರವಿ ಅವರ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನನ್ನ ಅನಾರೋಗ್ಯ ಕಾರಣ ದಿಂದ ಉದ್ದೇಶಿತ ಯೋಜನೆ ನೆನೆಗುದಿಗೆ ಬಿದ್ದಿತು. ಕುಲಪತಿಗಳಾಗಿ ಅನುಭವ ಹೊಂದಿ ರುವ ಪ್ರೊ.ಕೆ.ಎಸ್.ರಂಗಪ್ಪ ಈ ಉದ್ದೇ ಶಿತ ಯೋಜನೆ ಅನುಷ್ಠಾನಕ್ಕೆ ನೆರವಾಗ ಬೇಕೆಂದು ಮನವಿ ಮಾಡುತ್ತೇನೆ. ಇಂಗ್ಲೆಂಡ್, ಅಮೆರಿಕ ಸೇರಿದಂತೆ ಇನ್ನಿ ತರೆ ಪ್ರಜಾಪ್ರಭುತ್ವ ಹೊಂದಿದ ದೇಶ ಗಳಲ್ಲಿ ರಾಜಕೀಯ ಶೈಕ್ಷಣಿಕ ಸಂಸ್ಥೆ ಗಳಿವೆ. ಭಾರತದಂತಹ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ಅಧ್ಯಯನಕ್ಕೆ ಸಂಸ್ಥೆ ಇಲ್ಲ. ಭಾರತದ ರಾಜಕಾರಣದ ಬಗ್ಗೆ ಇದುವರೆಗೂ ಯಾರೂ ಡಾಕ್ಟರೇಟ್ ಮಾಡಿದಂತಿಲ್ಲ ಎಂದು ನುಡಿದರು.

ರಾಜಕೀಯದಿಂದ ಹೊರಕ್ಕೆ: ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಪೊಲಿ ಟಿಕಲ್ ಅಕಾಡೆಮಿ ಸ್ಥಾಪನೆಗೆ ಅಗತ್ಯ ಸಹಕಾರ ನೀಡುತ್ತೇನೆ. 2 ವರ್ಷಗಳಿಂದ ರಾಜಕೀಯ ವ್ಯವಸ್ಥೆ ನೋಡಿದ್ದೇನೆ. ಇದೀಗ ರಾಜಕೀಯದಿಂದ ಒಂದು ಮುಕ್ಕಾಲು ಕಾಲು ಹೊರ ಹಾಕಿದ್ದೇನೆ ಎಂದು ತಿಳಿಸಿದರು. ಭಾರತದ ರಾಜಕೀಯ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇಲ್ಲ. ಇಲ್ಲಿ ಕೆಟ್ಟ ರಾಜಕೀಯ ವ್ಯವಸ್ಥೆ ನಿರ್ಮಾಣ ಆಗುತ್ತಿದೆ. 40 ವರ್ಷಗಳ ಕಾಲ ರಾಜಕಾರಣ ಮಾಡಿದ ವಿಶ್ವನಾಥ್‍ರಂತಹ ರಾಜಕಾರಣಿ ಗಳಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಇನ್ನು 2 ವರ್ಷಗಳ ಹಿಂದೆ ರಾಜಕಾರಣಕ್ಕೆ ಹೋದ ನನ್ನಂತಹವರನ್ನು ತುಳಿದೇ ಬಿಡುತ್ತಾರೆ. ಜೊತೆಗೆ ರಾಜಕೀಯದಿಂದ ನನ್ನ ಕ್ಷೇತ್ರ ಮರೆಯುತ್ತಿz್ದÉೀನೆ ಎಂಬ ಭಾವನೆ ಬಂದ ಹಿನ್ನೆಲೆಯಲ್ಲಿ ಮತ್ತೆ ನನ್ನ ಕ್ಷೇತ್ರದತ್ತ ಗಮನ ಹರಿಸುತ್ತಿz್ದÉೀನೆ. 2 ವರ್ಷದ ರಾಜಕಾರಣದಲ್ಲಿ ನನ್ನನ್ನು ನಂಬಿ ಜೊತೆಯಲ್ಲಿ ಬಂದವರಿ ಗಾಗಿ ರಾಜಕೀಯದಲ್ಲಿ ಉಳಿದುಕೊಂಡಿz್ದÉೀನೆ ಎಂದರು.

Translate »