ದಿನವಿಡೀ ಹೋರಾಟ, ಸಂಜೆ ಮೈಸೂರಲ್ಲಿ ಭಾರತ-ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಿದ ಬಿಎಸ್‍ವೈ
ಮೈಸೂರು

ದಿನವಿಡೀ ಹೋರಾಟ, ಸಂಜೆ ಮೈಸೂರಲ್ಲಿ ಭಾರತ-ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಿದ ಬಿಎಸ್‍ವೈ

June 17, 2019

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನು ವಾರ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ಮೈಸೂರಿನಲ್ಲಿ ವೀಕ್ಷಿಸಿದರು.

ರೈತರ ಸಾಲ ಮನ್ನಾ, ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ 2 ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿ ನೇತೃತ್ವ ವಹಿಸಿದ್ದ ಬಿಎಸ್‍ವೈ, ಇಂದು ಮಧ್ಯಾಹ್ನ ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂ ರಿಗೆ ಆಗಮಿಸಿದ್ದು, ವಾಸ್ತವ್ಯ ಹೂಡಿರುವ ಪ್ರೆಸಿಡೆಂಟ್ ಹೋಟೆಲ್‍ನ ರೂಫ್ ಟಾಪ್ ಗಾರ್ಡನ್‍ನ ಬೃಹತ್ ಪರದೆಯಲ್ಲಿ ಭಾರತ-ಪಾಕ್ ಪಂದ್ಯ ವೀಕ್ಷಿಸಿದರು.

ರಿಲ್ಯಾಕ್ಸ್ ಮೂಡ್‍ನಲ್ಲಿ ಟೀ, ಸ್ನ್ಯಾಕ್ಸ್ ಜೊತೆಗೆ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಭಾರತ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಪ್ರತಿಯೊಬ್ಬರಿಗೂ ಕುತೂಹಲವಿರುತ್ತದೆ. ನನಗೂ ಕ್ರಿಕೆಟ್ ಹುಚ್ಚು ಇದೆ. ಕಬಡ್ಡಿ, ಖೋ-ಖೋ ಹಾಗೂ ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆಗಳು. ಹಾಗಾಗಿ ಮ್ಯಾಚ್ ನೋಡುತ್ತಿದ್ದೇನೆ. ಮೈದಾನಕ್ಕೂ ತೆರಳಿ ಅನೇಕ ಮ್ಯಾಚ್ ಗಳನ್ನು ನೋಡಿದ್ದೇನೆ. ಪಾಕಿಸ್ತಾನ ಯಾವುದೇ ಕಾರಣಕ್ಕೂ ಇಷ್ಟು ರನ್ ಚೇಸ್ ಮಾಡಲು ಸಾಧ್ಯವಿಲ್ಲ. ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕ ರಿಸಿದರು.ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಎಂ.ರಾಜೇಂದ್ರ, ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಪಾಲಿಕೆ ಸದಸ್ಯರಾದ ಮಾ.ವಿ.ರಾಂ ಪ್ರಸಾದ್, ಎಂ. ಸತೀಶ್, ಮುಖಂಡರಾದ ಹೆಚ್.ವಿ. ರಾಜೀವ್, ಯಶಸ್ವಿ ಸೋಮಶೇಖರ್, ಮಹದೇವಸ್ವಾಮಿ, ಕಾ.ಪು.ಸಿದ್ದಲಿಂಗಸ್ವಾಮಿ ಸೇರಿದಂತೆ ಅನೇಕ ಮುಖಂಡರು, ಕಾರ್ಯ ಕರ್ತರು ಬಿಎಸ್‍ವೈಗೆ ಸಾಥ್ ನೀಡಿದರು.

 

 

Translate »