ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ
ಮೈಸೂರು

ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ

June 17, 2019

ಮೈಸೂರು,ಜೂ.16(ವೈಡಿಎಸ್)-ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಘಟಕ ವತಿಯಿಂದ ಆಚಾ ರ್ಯತ್ರಯರ ಜಯಂತಿ ಅಂಗವಾಗಿ ಭಾನುವಾರ ಮೈಸೂರಿನ ಪ್ರಮುಖ ರಸ್ತೆ ಗಳಲ್ಲಿ ಆಚಾರ್ಯತ್ರಯರಾದ ಶಂಕರಾ ಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ಪ್ರತಿಮೆಗಳ ಶೋಭಾ ಯಾತ್ರೆ ನಡೆಯಿತು.

ಮೈಸೂರಿನ ಚಾಮುಂಡಿಪುರಂ ವೃತ್ತ ದಿಂದ ಆರಂಭವಾದ ಶೋಭಾಯಾತ್ರೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಂಜುಮಳಿಗೆ ಮಾರ್ಗವಾಗಿ ತೆರಳಿ ಲಕ್ಷ್ಮೀಪುರಂ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬ ರಾಯರ ಕಲ್ಯಾಣ ಮಂಟಪ ತಲುಪಿತು.

ಬಳಿಕ ಅಲ್ಲಿ ನಡೆದ ಕಾರ್ಯಕ್ರಮವನ್ನು ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಶಂಕರಾಚಾ ರ್ಯರು, ಮದ್ವಾಚಾರ್ಯರು ಮತ್ತು ರಾಮಾನುಜಚಾರ್ಯರ ತತ್ವಗಳು ಬೇರೆ ಯಾಗಿದ್ದರೂ ಸಂಸ್ಕøತಿಯಿಂದ ಸಾಮಾಜ ವನ್ನು ತಿದ್ದಲು ಸಾಧ್ಯ ಎಂಬುದಾಗಿತ್ತು. ಹಾಗಾಗಿ ನಾವು ತ್ರಿಮತಸ್ಥರು(3 ಪಂಗಡ ಗಳು) ತತ್ವಗಳನ್ನು ಬಿಟ್ಟು ಅವರ ಆಲೋಚನೆಗಳಿಗೆ ಬದ್ದರಾಗಿ ನಾವೆಲ್ಲಾ ಬದಲಾಗಬೇಕಿದೆ ಎಂದರು.
ಇಂದು ವಿದ್ಯಾವಂತ ವಿಪ್ರ ಯುವಕ-ಯುವತಿಯರು ಕೆಲಸವಿಲ್ಲದೆ ನಿರುದ್ಯೋ ಗಿಗಳಾಗಿದ್ದು, ಅವರಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸವನ್ನು ಸಮಾಜ ಮಾಡಬೇಕಿದೆ. ಯಾರಿಗೆ ಪೌರೋಹಿತ್ಯ, ವೇದಾಧ್ಯಯನ ಮಾಡಬೇಕೆನ್ನುವವರು ನಮ್ಮ ಆಶ್ರಮಕ್ಕೆ ಬಂದರೆ ಕಲಿಸಿಕೊಡು ತ್ತೇವೆ. ಆ ಮೂಲಕವೂ ನಿರುದ್ಯೋಗ ನಿರ್ಮೂಲನೆ ಮಾಡಬಹುದು. ಹಾಗಾಗಿ ದೇಶ, ಸಮಾಜ, ಸನಾತನ ಧರ್ಮ ಉಳಿ ಸಲು ನಾವೆಲ್ಲರೂ ಒಂದಾಗೋಣ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಮಾತನಾಡಿ, ಸರ್ಕಾರ ಈಗಾಗಲೇ ಶಂಕ ರಾಚಾರ್ಯರ ಜಯಂತಿಯನ್ನು ಅಚ ರಣೆ ಮಾಡುತ್ತಿದೆ. ಮದ್ವಾ ಚಾರ್ಯರು ಮತ್ತು ರಾಮಾನುಜ ಚಾರ್ಯರ ಜಯಂತಿ ಆಚರಣೆಗೆ ಸರ್ಕಾರ ಸೂಚಿಸಿದರೆ ಆಚರಿ ಸಬಹುದು. ಮೂವರು ಆಚಾರ್ಯತ್ರ ಯರು ದ್ವೈತ, ಅಧ್ವೈತ, ವಿಶಿಷ್ಠಾ ಧೈತ ಸಿದ್ದಾಂತಗಳನ್ನು ಪ್ರತಿಪಾದಿಸಿದ್ದರು. ಆದರೆ, ಇವುಗಳ ಉದ್ದೇಶ ಒಂದೇ ಆಗಿದ್ದು, ಲೋಕಕಲ್ಯಾಣಕ್ಕಾಗಿ ಮನುಕುಲ ಸಂಸ್ಕøತಿ ನೆಲೆಗಟ್ಟಿನಲ್ಲಿ ಬದುಕುವುದನ್ನು ತಿಳಿಸಿದ್ದಾರೆ ಎಂದರು. ಶಾಸಕ ಎಸ್.ಎ.ರಾಮದಾಸ್, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಜಿಲ್ಲಾ ಸಹಕಾರ ಯೂನಿ ಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ರಮೇಶ್, ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್ ಇನ್ನಿತರರು ಉಪಸ್ಥಿತರಿದ್ದರು.

Translate »