ವಿಶ್ವಕ್ಕೆ ಜ್ಞಾನಕೊಟ್ಟ ಬ್ರಾಹ್ಮಣ ಪರಂಪರೆ
ಮೈಸೂರು

ವಿಶ್ವಕ್ಕೆ ಜ್ಞಾನಕೊಟ್ಟ ಬ್ರಾಹ್ಮಣ ಪರಂಪರೆ

June 17, 2019

ಮೈಸೂರು,ಜೂ.16(ಆರ್‍ಕೆಬಿ)-ವಿಶ್ವಾದ್ಯಂತ ಅಧ್ಯಾತ್ಮದಿಂದ ಗುರ್ತಿಸಿಕೊಂಡು, ಇಡೀ ವಿಶ್ವಕ್ಕೆ ಜ್ಞಾನಕೊಟ್ಟ ಪರಂಪರೆ ನಮ್ಮದು ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪ ನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ ತಿಳಿಸಿದರು.

ಬ್ರಾಹ್ಮಣ ಧರ್ಮ ಸಹಾಯ ಸಭಾವತಿ ಯಿಂದ ಶತಮಾನೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ಮೈಸೂರಿನ ಕಲ್ಯಾಣ ಭವನದಲ್ಲಿ ಭಾನುವಾರ ಏರ್ಪ ಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ `ಗುರುವಂದನೆ’ ಕುರಿತು ಅವರು ಉಪ ನ್ಯಾಸ ನೀಡಿದರು. ಬ್ರಾಹ್ಮಣ ಸಮು ದಾಯವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಾ ಬಂದಿದೆ. ಬ್ರಹ್ಮ ಎಂಬ ಪದದಿಂದ ಸೃಷ್ಟಿಯಾದ ಬ್ರಾಹ್ಮ ಣರು ತಮ್ಮ ಜ್ಞಾನವನ್ನು ಎಲ್ಲರಿಗೂ ಹಂಚುತ್ತಾ, ಗತಿಸಿರುವ ದೇಹಕ್ಕೆ ಸಂಸ್ಕಾರ ಮಾಡುವ, ಮುಕ್ತಿ ನೀಡುವ ಬಹು ದೊಡ್ಡ ಕಾರ್ಯ ಮಾಡುತ್ತಾ ಬಂದಿದ್ದಾರೆ. ತ್ಯಾಗದ ಮೂಲಕ ಸರ್ವಸ್ವವನ್ನು ಅರ್ಪಿಸು ವವರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಒಂದು ಕಾಲದಲ್ಲಿ ಗುರುವಿಲ್ಲದೆ ಜ್ಞಾನ ಕಲಿಯಲು ಸಾಧ್ಯವೇ ಇರಲಿಲ್ಲ. ಪ್ರಾಮಾಣಿಕ ಶಿಷ್ಯರನ್ನು ತಯಾರಿಸುವುದೇ ನಿಜವಾದ ಗುರುವಿನ ಕಾರ್ಯವಾಗಿದೆ. ಆದರೆ ಇಂದು ಗುರುವಿಲ್ಲದ ಕಲಿಕೆಗೆ ಅವಕಾಶ ಎಂದರು.

ಭಾರತದ ಮೇಲೆ ಅನೇಕ ಬಾರಿ ಆಕ್ರ ಮಣ ನಡೆದಿದ್ದರೂ ನಮ್ಮ ಸಂಸ್ಕøತಿ, ಧರ್ಮಕ್ಕೆ ಧಕ್ಕೆಯಾಗಿಲ್ಲ. ಸಂಸ್ಕøತ ಪ್ರಾಚೀನ ಭಾಷೆ, ವೇದ ಶಾಸ್ತ್ರಗಳೇ ನಮ್ಮ ಸಂಪತ್ತು ಎಂದÀರು.

ಕಾರ್ಯನಿರ್ವಾಹಕ ಮಂಡಳಿ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, 1918ರಲ್ಲಿ ಆರಂಭವಾದ ಬ್ರಾಹ್ಮಣ ಧರ್ಮ ಸಹಾಯ ಸಭಾಕ್ಕೆ 101 ವರ್ಷ ತುಂಬಿದೆ. ತ್ರಿಮತಸ್ಥ ಬ್ರಾಹ್ಮಣರ ಸಂಸ್ಥೆ ಇಷ್ಟು ವರ್ಷದ ಇತಿಹಾಸ ಹೊಂದಿರುವುದು ಸಂತಸ ಪಡುವ ವಿಚಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೋಸಲೆ ವ್ಯಾಸ ರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಶ್ರೀಶತೀರ್ಥ ಸ್ವಾಮೀಜಿ, ಮೈಸೂರು ಶ್ರೀಪೀಠಂ ದಕ್ಷಿಣಾಮೂರ್ತಿ ಶ್ರೀ ಚಿನ್ಮಯಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆಯ ಗೌರೀಗದ್ದೆ ಶ್ರೀ ವಿನಯ ಅವಧೂತ ಮಹಾರಾಜ್ ಸ್ವಾಮೀಜಿ ಉಪಸ್ಥಿತರಿದ್ದರು.

Translate »