ಮೈಸೂರು: ಆಧುನಿಕ ಮೈಸೂರು ನಿರ್ಮಾತೃ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮಂಗಳವಾರ ಮೈಸೂರಿನಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಅದ್ಧೂರಿ ಯಾಗಿ ನೆರವೇರಿತು. ಜೊತೆಗೆ ವಿವಿಧ ಸಂಘ- ಸಂಸ್ಥೆಗಳು ನಾಲ್ವಡಿಯವರ ಜಯಂತಿ ಆಚ ರಿಸಿ ಅವರ ಕೊಡುಗೆಗಳನ್ನು ಸ್ಮರಿಸಿದವು.
ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆ ಯರ್ ಜಯಂತ್ಯೋತ್ಸವ ಸಮಿತಿ ಹಾಗೂ ಅರಸು ಬಳಗಗಳ ಒಕ್ಕೂಟದ ಸಂಯು ಕ್ತಾಶ್ರಯದಲ್ಲಿ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರ ಮನೆ ಆವರಣದ ಪುರಾತನ ಲಕ್ಷ್ಮೀರ ಮಣಸ್ವಾಮಿ ದೇವಸ್ಥಾನದ ಎದುರು ಹೂವಿನ ಅಲಂಕಾರದಲ್ಲಿ ಸಿಂಗಾರಗೊಂಡ ಸಾರೋಟಿನಲ್ಲಿದ್ದ ನಾಲ್ವಡಿಯವರ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವ ದಲ್ಲಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಅಧಿಕಾರಿಗಳು ನಾಲ್ವಡಿ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಶೃಂಗಾರಗೊಂಡಿದ್ದ ಕೆಆರ್ ವೃತ್ತ: ನಾಲ್ವಡಿ ಜಯಂತಿ ಹಿನ್ನೆಲೆಯಲ್ಲಿ ಕೆಆರ್ ವೃತ್ತದಲ್ಲಿರುವ ನಾಲ್ವಡಿ ಪ್ರತಿಮೆ ಹಾಗೂ ಮಂಟಪವನ್ನು ಹೂವಿನಿಂದ ಅಲಂಕರಿಸಿ ಶೃಂಗರಿಸಲಾಗಿತ್ತು. ಪ್ರತಿಮೆಗೂ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು. ವೀರಗಾಸೆ, ಕಂಸಾಳೆ, ಮಂಗಳವಾದ್ಯ ಸೇರಿ ದಂತೆ ವಿವಿಧ ಜಾನಪದ ಕಲಾತಂಡಗ ಳೊಂದಿಗೆ ಸಾಗಿದ ಮೆರವಣಿಗೆಯು ಅರ ಮನೆ ಉತ್ತರ ದ್ವಾರದ ಮೂಲಕ ಕೆಆರ್ ವೃತ್ತ ತಲುಪಿತು. ಬಳಿಕ ಡಿ.ದೇವರಾಜ ಅರಸು ರಸ್ತೆ ಮಾರ್ಗವಾಗಿ ಜೆಎಲ್ಬಿ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಮೆಟ್ರೋಪೋಲ್ ವೃತ್ತದ ಮೂಲಕ ಹುಣಸೂರು ರಸ್ತೆಯಲ್ಲಿ ಸಾಗಿ ಕಲಾಮಂದಿರ ತಲುಪಿ ಅಂತ್ಯಗೊಂಡಿತು.
ಸಭಾ ಕಾರ್ಯಕ್ರಮ: ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮ ವನ್ನು ಸಚಿವ ಜಿ.ಟಿ.ದೇವೇಗೌಡ ಉದ್ಘಾ ಟಿಸಿದರಲ್ಲದೆ, ನಾಲ್ವಡಿ ಕೃಷ್ಣರಾಜ ಒಡೆ ಯರ್ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ದರು. ಬಳಿಕ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಳ್ವಿಕೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು. ಶಿಕ್ಷಣ, ಆರೋಗ್ಯ, ಕೃಷಿ, ಕಲೆ, ಸಾಹಿತ್ಯ ಸೇರಿದಂತೆ ಆರೋಗ್ಯಕರ ಸಮಾಜಕ್ಕೆ ಅಗತ್ಯವಾದ ಎಲ್ಲಾ ಕ್ಷೇತ್ರದ ಪ್ರಗತಿಗೂ ಆದ್ಯತೆ ನೀಡಿದ್ದರು. ಅವರ ಆದರ್ಶ ಹಾಗೂ ಜನಪರ ಕಾರ್ಯ ಕ್ರಮಗಳ ಬಗ್ಗೆ ಸಂಶೋಧನೆಗಳು ನಡೆ ಯುವ ಮೂಲಕ ಅವುಗಳನ್ನು ಇಂದಿಗೆ ಅಳವಡಿಸಿಕೊಳ್ಳುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಇಂದು ಬೆಂಗಳೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ನಾಲ್ವಡಿ ಜಯಂತಿ ಆಚರಣೆಗೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಶಾಸಕಾಂಗ ಸಭೆಗೆ ತೆರಳಬೇಕಿದ್ದು, ಇದರ ಜೊತೆಗೆ ಎಲ್ಲಾ ವಿವಿಗಳ ಕುಲಪತಿಗಳ ಸಭೆ ಇಂದು ನಡೆಸುವ ಉದ್ದೇಶವಿತ್ತು. ಆದರೆ ಜಯಂತಿಯಲ್ಲಿ ಭಾಗವಹಿಸ ಬೇಕೆಂಬ ಕಾರಣಕ್ಕೆ ಕುಲಪತಿಗಳ ಸಭೆ ಮುಂದೂಡಿದ್ದೇನೆ. ರಾಜಪ್ರಭುತ್ವದ ವ್ಯವಸ್ಥೆಯಲ್ಲೇ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಿದ್ದದ್ದು ನಾಲ್ವಡಿಯವರ ಮೇರು ವ್ಯಕ್ತಿತ್ವ. ಹಿಂದುಳಿದ ವರ್ಗಕ್ಕೆ ದನಿಯಾ ಗಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ತಿಳಿಸಿದರು.
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಸೇರಿದಂತೆ ನಾಗರಿಕರಿಂದ ಸಭಾಂಗಣ ಭರ್ತಿಯಾಗಿತ್ತು. ಮೈಸೂರು ವಿವಿ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ವಿ.ಶ್ರೀನಿವಾಸ ಮುಖ್ಯ ಭಾಷಣ ಮಾಡಿದರು. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸದಸ್ಯೆ ಮಂಗಳಾ ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಅರಸು ಬಳಗಗಳ ಮುಖಂ ಡರು ಮತ್ತಿತರರು ಹಾಜರಿದ್ದರು.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರು ನಾಮಕರಣಕ್ಕೆ ಒತ್ತಾಯ
ಮೈಸೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡುವ ಸಂಬಂಧ ಹಳೇ ಮೈಸೂರು ಪ್ರಾಂತ್ಯದ ಶಾಸಕರು ಹಾಗೂ ಸಂಸದರು ಒಕ್ಕೊರಲಿನಿಂದ ಕೇಂದ್ರ ಸರ್ಕಾರವನ್ನು ಒತ್ತಾ ಯಿಸಲಿದ್ದೇವೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ನಡೆದ ನಾಲ್ವಡಿ ಜಯಂತಿ ಯಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜ ಅರಸು ಈ ಸಂಬಂಧ ಗಮನ ಸೆಳೆದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್ಸಿಂಹ, ಸಮಲತಾ ಅಂಬರೀಶ್ ಹಾಗೂ ಶಾಸಕರು ಸೇರಿ ನಿರ್ಣಯಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದೇವೆ. ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿ ನಿಧಿ ವ್ಯವಸ್ಥೆ ಜಾರಿಗೊಳಿಸಿದ 10ನೇ ಚಾಮರಾಜ ಒಡೆಯರ್ ಹಾಗೂ ನ್ಯಾಯ ವಿಧೇಯಕ ಸಭೆ ಜಾರಿಗೊಳಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೋಗಳನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಹಾಕುವ ಸಂಬಂಧವೂ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಚಿವರು ತಿಳಿಸಿದರು.
ನಾಲ್ವಡಿ ಹೆಸರಿಡುವುದು ಒಳ್ಳೆಯ ಚಿಂತನೆ: ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೈಸೂರನ್ನು ಸುವ್ಯವಸ್ಥಿತವಾಗಿ ನಿರ್ಮಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಮಗೆ ಕೊಡುಗೆ ಯಾಗಿ ನೀಡಿದ್ದಾರೆ. ಅವರು ಅಭಿವೃದ್ಧಿಯ ಹರಿಕಾರರು. ಆದರೆ ಮಹಾರಾಜರು ಕೊಟ್ಟ ಕೊಡುಗೆಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್ ದುರಸ್ತಿ ಮಾಡಿ ಕೊಳ್ಳದಿರುವುದು ದುರಂತ. ನಾಲ್ಕು ಸರ್ಕಾರಗಳು ಬಂದರೂ ಇಂದಿಗೂ ಈ ಎರಡು ಮಹತ್ವ ಕಟ್ಟಡಗಳು ದುಸ್ಥಿತಿಯಲ್ಲೇ ಇವೆ ಎಂಬುದು ವಿಷಾದನೀಯ. ಈ ಐತಿಹಾಸಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಲು ಸಿದ್ಧವಿದ್ದು, ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರಿಡುವುದು ಒಳ್ಳೆಯ ಚಿಂತನೆ. ಇದರ ಪರವಾಗಿ ನಾನೂ ನಿಲ್ಲುತ್ತೇನೆ ಎಂದು ನುಡಿದರು.