ಮೋದಿ ಅವರದು 5 ವರ್ಷದ ಭ್ರಷ್ಟಾಚಾರ ಮುಕ್ತ ಆಡಳಿತ
ಮೈಸೂರು

ಮೋದಿ ಅವರದು 5 ವರ್ಷದ ಭ್ರಷ್ಟಾಚಾರ ಮುಕ್ತ ಆಡಳಿತ

April 5, 2019

ಮೈಸೂರು,: ಹಿಂದೆ ಆಡಳಿತ ನಡೆಸಿದ ಯುಪಿಎ ಸರ್ಕಾರ ಕಲ್ಲಿ ದ್ದಲು, ಹೆಲಿಕಾಪ್ಟರ್ ಖರೀದಿ ಸೇರಿದಂತೆ ಮತ್ತಿತರೆ ಹಗರಣಗಳನ್ನು ಮಾಡಿ ದೇಶ ವನ್ನು ಭ್ರಷ್ಟಾಚಾರ ಕೂಪವನ್ನಾಗಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿ ದ್ದಾರೆ ಎಂದು ಬಿಜೆಪಿ ಮುಖಂಡರಾದ ನಟಿ ಮಾಳವಿಕ ಅವಿನಾಶ್ ಹೇಳಿದರು.

ಜನರಲ್ ಕೆ.ಸಿ.ಕಾರ್ಯಪ್ಪ (ಮೆಟ್ರೋ ಪೋಲ್ ವೃತ್ತದ ಬಳಿಯಿರುವ ಗೋವಿಂದ ರಾವ್ ಮೆಮೋರಿಯಲ್ ಹಾಲ್‍ನಲ್ಲಿ ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಗುರುವಾರ ನಡೆದ `ಮಹಿಳಾ ಕಾರ್ಯಕರ್ತರ ಸಮಾವೇಶ’ವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಮೋದಿ ಸರ್ಕಾರದಲ್ಲಿ ಒಂದೇ ಒಂದು ಭ್ರಷ್ಟಾ ಚಾರದ ಹಗರಣವಿಲ್ಲ. ಅವರ ಉತ್ತಮ ಆಡಳಿತ ದಿಂದ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.7.02ರಷ್ಟು ಹೆಚ್ಚಾಗಿದೆ. ಇದ ರೊಂದಿಗೆ ಇಡೀ ವಿಶ್ವದಲ್ಲಿ ಭಾರತವು ವೇಗ ವಾಗಿ ಬೆಳೆಯುತ್ತಿರುವ ದೇಶವಾಗಿದೆ ಎಂದರು.

ಸೈನಿಕರ ಬಲ ತೋರಿಸಿಕೊಟ್ಟರು: ಪುಲ್ವಾಮಾ ದಾಳಿಯಲ್ಲಿ 44 ಮಂದಿ ಯೋಧರು ವೀರಮರಣ ಹೊಂದಿದರು. ಅದಾದ 11 ದಿನಕ್ಕೆ ಮೋದಿ ಅವರು ಪಾಕಿ ಸ್ತಾನದೊಳಕ್ಕೆ ವಾಯುಸೇನೆ ಕಳುಹಿಸಿ ಉಗ್ರರ ತಾಣಗಳ ಮೇಲೆ ದಾಳಿ ಮಾಡಿ ದೇಶದ ಸೈನಿಕರ ಬಲವನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ಮಹಿಳೆಯರ ಭದ್ರತೆಗೆ ವಿಶೇಷ ಕ್ರಮ ವಹಿಸಿದ್ದು, ಸ್ವಚ್ಛ ಭಾರತ ಅಭಿಯಾನದ ಮೂಲಕ ಪ್ರತಿ ಮನೆಗೆ ಶೌಚಾಲಯ. ಜತೆಗೆ ಪ್ರತಿ ಶಾಲೆಗಳಲ್ಲೂ ಶೌಚಾಲಯ ನಿರ್ಮಿಸಿ ದರು. ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ವಿತರಿಸಲಾಗಿದೆ ಎಂದರು.
ಕಡುಬಡವರಿಗೆ ಜನ್‍ಧನ್ ಯೋಜನೆ ಯಡಿ ಶೂನ್ಯಠೇವಣಿ ರಹಿತ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಮಾಡಿ ಕೊಟ್ಟಿದ್ದು, ಆ ಮೂಲಕ ಸರ್ಕಾರದಿಂದ ಬರುವ ವಿವಿಧ ಯೋಜನೆಗಳ ಸಹಾಯ ಧನವನ್ನು ನೇರವಾಗಿ ಅವರ ಖಾತೆಗೆ ರವಾನೆ ಮಾಡಿ ಭ್ರಷ್ಟಾಚಾರ, ಮಧ್ಯ ವರ್ತಿಗಳ ಹಾವಳಿಯನ್ನು ತಪ್ಪಿಸಿದ್ದಾರೆ. ಮಾತೃವಂದನಾ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಹೆಣ್ಣುಮಕ್ಕಳು, ರೈತರು, ಯುವಕರು ಎಲ್ಲರನ್ನೂ ಸಶಕ್ತರನ್ನಾಗಿಸಿದ್ದಾರೆ. ಹಾಗಾಗಿ ಮೈಸೂರಲ್ಲಿ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವ ರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡ ಬೇಕು ಎಂದು ಮನವಿ ಮಾಡಿದರು.

ದೇಶ ಸಂಕಷ್ಟ: ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶ ಸಂಕಷ್ಟಕ್ಕೆ ಸಿಲುಕಿತ್ತು. ಸಾಲದ ಹೊರೆಯಿಂದ ನಲುಗಿತ್ತು. ಎಲ್ಲಾ ರಾಜಕಾರಣಿಗಳು ಜನಸಾಮಾನ್ಯರ ಕಷ್ಟ ಗಳಿಗೆ ಸ್ಪಂದಿಸುವ ಕುರಿತು ಯೋಚಿಸದೆ ದೇಶದ ಹಣವನ್ನು ಲೂಟಿ ಮಾಡಿ ಭ್ರಷ್ಟರಾಗಿದ್ದರು. ಅಷ್ಟೇ ಅಲ್ಲದೆ, ಕಲ್ಲಿದ್ದಲು, ಹೆಲಿಕಾಪ್ಟರ್ ಖರೀದಿ ಸೇರಿದಂತೆ ಮತ್ತಿತರೆ ಹಗರಣಗಳ ಮಾಡಿ ದೇಶವನ್ನು ಭ್ರಷ್ಟಾಚಾರ ಕೂಪವನ್ನಾಗಿಸಿದ್ದರು ಎಂದು ಟೀಕಿಸಿದರು.

2008ರ ನ.26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ 200ಕ್ಕೂ ಹೆಚ್ಚು ಜನರು ಬಲಿಯಾದರು. ಆದರೂ ಯುಪಿಎ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಪಾಕಿಸ್ತಾನ ಭಯೋ ತ್ಪಾದನೆಯನ್ನು ಮತ್ತಷ್ಟು ಹೆಚ್ಚು ಮಾಡಿತು. ಇದನ್ನು ನಿಗ್ರಹಿಸಲು ಅವರಿಗೆ ಧೈರ್ಯ ಇರಲಿಲ್ಲ. ಅಷ್ಟೇ ಅಲ್ಲದೆ, 2010ರಲ್ಲಿ ದೆಹಲಿ ಯಲ್ಲಿ ನಿರ್ಭಯ ಪ್ರಕರಣ ನಡೆಯಿತು. ಈ ವೇಳೆ ಇಡೀ ವಿಶ್ವವೇ ಸುರಕ್ಷತೆ ಇಲ್ಲದೆ ಹೇಗೆ ಬದುಕುತ್ತಿದ್ದಾರೆಂದು ಬೇಸರ ವ್ಯಕ್ತ ಪಡಿಸಿತ್ತು ಎಂದು ಹೇಳಿದರು.

2014ರಲ್ಲಿ ಮೋದಿ ಪ್ರಧಾನಿಯಾದ ನಂತರ 5 ವರ್ಷದ ಆಡಳಿತ ಅವಧಿ ಯಲ್ಲಿ ಭ್ರಷ್ಟಾಚಾರ ಮುಕ್ತ, ದೇಶದ ಆಂತ ರಿಕ ಭದ್ರತೆ, ರಕ್ಷಣೆ ಮತ್ತು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಶಾಸಕ ಎಲ್.ನಾಗೇಂದ್ರ, ಅರ್ಪಿತಾ ಪ್ರತಾಪ ಸಿಂಹ, ಬಿಜೆಪಿ ಮಹಿಳಾ ಮೋರ್ಚಾ ಚಿಕ್ಕಮ್ಮ ಬಸವರಾಜು, ಬಿಜೆಪಿ ಮುಖಂಡ ರಾದ ಫಣೀಶ್, ನಗರಪಾಲಿಕೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Translate »