ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಒತ್ತು: ಡಿಸಿಎಂ ಡಾ.ಅಶ್ವಥ್‍ನಾರಾಯಣ್
ಮೈಸೂರು

ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಒತ್ತು: ಡಿಸಿಎಂ ಡಾ.ಅಶ್ವಥ್‍ನಾರಾಯಣ್

September 21, 2019

ಮೈಸೂರು ಸೆ.20(ಆರ್‍ಕೆಬಿ)-ರಾಜ್ಯದಲ್ಲಿ ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಒತ್ತು ನೀಡಿ, ಉನ್ನತ ಶಿಕ್ಷಣ ಪಡೆದವರಿಗೆ ಉದ್ಯೋಗ ದೊರಕುವಂತಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯ ಮಂತ್ರಿ ಡಾ.ಅಶ್ವಥ್‍ನಾರಾಯಣ್ ತಿಳಿಸಿದರು.

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾ ಡಿದರು. ಐಟಿ-ಬಿಟಿ ಕಂಪನಿಗಳು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ನಿರ್ವ ಹಿಸಲು ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದರು. ಪ್ರವಾಹದಿಂದಾಗಿ ರಾಜ್ಯದಲ್ಲಿ ಹಲವಾರು ಮನೆ, ರಸ್ತೆಗಳು ನಾಶವಾ ಗಿದ್ದು, ರಾಜ್ಯ ಸರ್ಕಾರ ಮನೆಗಳಿಗೆ 1,000 ಕೋಟಿ ರೂ., ರಸ್ತೆಗಳಿಗೆ 500 ಕೋಟಿ ರೂ. ಬಿಡುಗಡೆ ಮಾಡಿದೆ. ಮನೆಗಳನ್ನು ಕಟ್ಟಿ ಕೊಡುವ ಕೆಲಸ ನಡೆಯುತ್ತಿದೆ ಎಂದರು.

ಈ ಹಿಂದೆ ಇದ್ದ ಸರ್ಕಾರಗಳು ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಳ್ಳಲು ಒಂದೂವರೆ ಲಕ್ಷ ಕೊಡುತ್ತಿತ್ತು. ನಾವು 5 ಲಕ್ಷ ನೀಡುತ್ತಿದ್ದೇವೆ. ಕಾಂಗ್ರೆಸ್‍ನವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದಿನ ಸರ್ಕಾರ ನೆರೆ ಪರಿಹಾರಕ್ಕೆ ಎಷ್ಟು ಪರಿಹಾರ ಬಿಡುಗಡೆ ಮಾಡಿದೆ. ಎಷ್ಟರ ಮಟ್ಟಿಗೆ ಕೆಲಸ ಆಗಿದೆ ಎಂಬುದನ್ನು ನೀವೇ ಗಮನಿಸಿ ಎಂದ ಅವರು, ಈಗ ಬಿಡುಗಡೆ ಆಗಿರುವ ಹಣದ ಜೊತೆಗೆ ಲೋಕೋಪ ಯೋಗಿ ಇಲಾಖೆಯಿಂದಲೂ ಹೆಚ್ಚುವರಿ ಯಾಗಿ 500 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದೂ ಹೇಳಿದರು.

ಸೋಮಣ್ಣ ಉತ್ಸಾಹಕ್ಕೆ ಡಿಸಿಎಂ ಮೆಚ್ಚುಗೆ: ಮೈಸೂರು ದಸರಾ ಮಹೋತ್ಸವವು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು, ಉಸ್ತು ವಾರಿ ಸಚಿವ ವಿ.ಸೋಮಣ್ಣ ಅವರು ತುಂಬಾ ಉತ್ಸಾಹದಿಂದ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮಗಳ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ದಸರಾ ಹಬ್ಬವನ್ನು ನಾವೆಲ್ಲರೂ ಒಟ್ಟಿಗೆ ಸೇರಿ ಯಶಸ್ವಿ ಮಾಡಲಿ ದ್ದೇವೆ ಎಂದರು. ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್, ಮುಖಂಡರಾದ ಹೆಚ್.ವಿ.ರಾಜೀವ್ ಇನ್ನಿತರರು ಉಪಸ್ಥಿತರಿದ್ದರು.

Translate »