ಮೈಸೂರು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ   ಹಬ್ಬದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗಿ
ಮೈಸೂರು

ಮೈಸೂರು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗಿ

December 31, 2018

ಮೈಸೂರು, ಡಿ.30(ಆರ್‍ಕೆಬಿ)- ಮೈಸೂ ರಿನ ಸಿದ್ದಾರ್ಥನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಬಾಡಿಗಾರ್ಡ್ ಲೈನ್) ಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ನಡೆಯಿತು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಬಾಲ ಭವನ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ-ಸಮಗ್ರ ಶಿಕ್ಷಣ ಕರ್ನಾಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತ ಜ್ಞಾನ ವಿಜ್ಞಾನ ಕರ್ನಾಟಕ ಜಂಟಿ ಆಶ್ರಯದಲ್ಲಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.

ಬಾಲಮಂದಿರ, ಭಾಲಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾಕಿ ಕ್ವಾಟ್ರ್ರಸ್ ಆದರ್ಶ ಶಾಲೆ, ಜೆಎಸ್‍ಎಸ್ ಕನ್ನಡ ಮಾಧ್ಯಮ ಶಾಲೆಗಳ 100ಕ್ಕೂ ಹೆಚ್ಚು ಮಕ್ಕಳು ಜಿಲ್ಲಾ ಮಟ್ಟದ ವಿಜ್ಞಾನ ಹಬ್ಬ ದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಪೇಪರ್‍ನಲ್ಲಿ ಟೊಪ್ಪಿ, ದೋಣಿ, ಹೆಲಿ ಕಾಪ್ಟರ್ ತಯಾರಿಕೆ, ಸ್ಪೈರಲ್‍ಸ್ನೇಕ್, 3ಡಿ ಡ್ರ್ಯಾಗನ್, 3ಡಿ ಕನ್ನಡಕ, ನೀರಿನ ಸ್ಪ್ರಿಂಕ್ಲರ್, ಚಲಿಸುವ ಇಲಿ, ಕುದುರೆ, ಸೋಪ್ ಬಬಲ್ ಸೇರಿದಂತೆ 20ಕ್ಕೂ ಹೆಚ್ಚು ಮಾದರಿಗಳನ್ನು ರಚಿಸುವ ಮೂಲಕ ಸಂತಸಪಟ್ಟರು. ಕಾರ್ಯಕ್ರಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯ ಎಸ್.ವಜ್ರಮುನಿ, ಮೈಸೂರು ಅಧ್ಯಕ್ಷ ಡಾ.ಶ್ರೀನೆನಾಯಕ್, ಜಿಲ್ಲಾ ಬಾಲಭವನದ ಪ್ರಧಾನ ಸಂಘಟಕ ಕೃಷ್ಣಮೂರ್ತಿ, ಸಂಪ ನ್ಮೂಲ ವ್ಯಕ್ತಿಗಳಾಗಿ ರವೀಂದ್ರ, ಕೃಷ್ಣ ಶರ್ಮ, ತಿಬ್ಬೇಗೌಡ, ಪ್ರಸನ್ನ, ಹರ್ಷ ಇನ್ನಿತರರು ಭಾಗವಹಿಸಿದ್ದರು

Translate »