ಪಿಎಫ್‍ಐನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ವಿತರಣೆ
ಮೈಸೂರು

ಪಿಎಫ್‍ಐನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ವಿತರಣೆ

December 31, 2018

ಮೈಸೂರು: ಮೈಸೂರಿನ ಉದಯಗಿರಿಯಲ್ಲಿ ರುವ ಸಫಾ ಫಂಕ್ಷನ್ ಹಾಲ್‍ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಉನ್ನತ ವಿದ್ಯಾಭ್ಯಾಸ ಮಾಡು ತ್ತಿರುವ 40 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನಪ್ರತಿನಿಧಿಗಳು ಬಡತನ, ನಿರುದ್ಯೋಗ, ಸಂಶೋಧನೆ ಕುರಿತು ಚರ್ಚೆಗಳನ್ನು ಮಾಡದೆ ದೇವರುಗಳ ಜಾತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿ ಸಿದರು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ನಾಮಕರಣ ಮಾಡಲು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರಂತೆ. ಆದರೆ, ಇದರಿಂದ ಪ್ರಯಾಣಿಕರಿಗಾಗುವ ಅನುಕೂಲಗಳೇನು? ನೆರೆ ರಾಜ್ಯ ಕೇರಳದಲ್ಲಿ 4 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಸುಸಜ್ಜಿತ ಮೂಲ ಸೌಕರ್ಯಗಳನ್ನು ಒಳಗೊಂಡಿವೆ. ನಮ್ಮಲ್ಲಿ ಬೆಂಗಳೂರು ಹೊರತುಪಡಿಸಿದರೆ, ಬೇರೆ ಸುಸಜ್ಜಿತ ವಿಮಾನ ನಿಲ್ದಾಣ ಎಲ್ಲಿವೆ? ಎಂದು ಪ್ರಶ್ನಿಸಿದರು. ಮೈಸೂರು ಸರ್ಖಾಜಿ ಮೌಲನಾ ಹುಸ್ಮಾನ್ ಷರೀಫ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರ್ಯ ದರ್ಶಿ ಯಾಸಿರ್ ಹಸನ್, ಮೌಲನಾ ಅಯೂಬ್ ಅನ್ಸಾರಿ, ಮೌಲನಾ ಕಲೀಂ ಉಲ್ಲಾ ಸಿದ್ದಿಕಿ, ಅಮೀನ್ ಸೇಠ್, ಕಲೀಂ ಅಹಮದ್ ಇದ್ದರು.

Translate »