ಹುಣಸೂರು: ದೇಶ ದಲ್ಲಿನ ದುಡಿಯುವ ವರ್ಗ ಹಾಗೂ ರೈತರನ್ನು ಸಂಕಷ್ಟದಲ್ಲಿ ಜೀವನ ನಡೆಸುವಂತೆ ಮಾಡಿ ರುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜ.8 ಮತ್ತು 9ರಂದು ಹಮ್ಮಿ ಕೊಂಡಿರುವ ಅಖಿಲ ಭಾರತ ಮುಷ್ಕರ ವನ್ನು ಬೆಂಬಲಿಸುವಂತೆ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಮನವಿ ಮಾಡಿದರು.
2019ರ ಜನವರಿ 8, 9 ರಂದು ನಡೆ ಯುವ ಅಖಿಲ ಭಾರತ ಮಷ್ಕರವನ್ನು ಬೆಂಬಲಿಸಿ ಪಟ್ಟಣದ ಹಳೆ ಬಸ್ ನಿಲ್ದಾಣದ ಮುಂಭಾಗ ಸಿಪಿಎಂ ಸೇರಿದಂತೆ ಎಡಪಕ್ಷ ಗಳು ಏರ್ಪಡಿಸಿದ್ದ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಸಮಸ್ಯೆಗಳನ್ನು ನಿರ್ಲ ಕ್ಷಿಸಿರುವ ಕೇಂದ್ರ ಸರ್ಕಾರ ದೇವರ ಹೆಸರಿ ನಲ್ಲಿ ಜನರನ್ನು ದಾರಿ ತಪ್ಪಿಸಿ ನೈಜ ಸಮಸ್ಯೆ ಗಳನ್ನು ಮರೆಮಾಚಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ದೊಡ್ಡ ದೊಡ್ಡ ಶ್ರೀಮಂತರ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎನ್ನುತ್ತಿದೆ. ತೀವ್ರ ಕೃಷಿ ಬಿಕ್ಕಟ್ಟು ಗ್ರಾಮೀಣ ಭಾರತದಲ್ಲಿ ಅಪಾರ ಸಂಕಷ್ಟ ಉಂಟು ಮಾಡಿದೆ. ಡಾ.ಸ್ವಾಮಿ ನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ಕೃಷಿ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆಯನ್ನು ನಿಗದಿ ಮಾಡಲು ಕೇಂದ್ರ ಸರ್ಕಾರ ಮುಂದಾಗು ತ್ತಿಲ್ಲ. ಈ ಸರ್ಕಾರ ಯಾರ ಪರವಾಗಿ ಅಧಿಕಾರ ನಡೆಸುತ್ತಿದೆ ಎಂಬುದು ಇದರಿಂದ ತಿಳಿಯುತ್ತಿದೆ ಎಂದು ಸಿಡಿಮಿಡಿಗೊಂಡರು.
ಎಸ್‍ಯುಸಿಐನ ಮುಖಂಡ ಶಶಿಧರ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೂಪಿಸಿದ ನೀತಿ ಗಳು ನೋಟು ಅಮಾನ್ಯೀಕರಣ, ಜಿಎಸ್‍ಟಿ ಜಾರಿ, ಪೆಟ್ರೋಲ್-ಡೀಸೆಲ್ ಮೇಲಿನ ಅಧಿಕ ಕ್ರಮಗಳಿಂದ ಹಾಗೂ ಸಾರ್ವ ಜನಿಕ ಪಡಿತರ ವ್ಯವಸ್ಥೆಯನ್ನು ಕುಂಠಿತ ಗೊಳಿಸಿದ ಹಿನ್ನೆಲೆಯಿಂದ ಜನ ಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ನೋಟ್ ಬ್ಯಾನ್ ನಂತರದಲ್ಲಿ ಸಣ್ಣ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದು ಕೊಂಡಿದ್ದಾರೆ ಎಂದ ಅವರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಸುಳ್ಳಾಗಿದೆ. ಬದಲಾಗಿ ದೇಶದಲ್ಲಿ 40 ಲಕ್ಷ ಉದ್ಯೋಗಗಳು ನಶಿಸಿವೆ ಎಂದು ದೂರಿದರು. ಸಿಪಿಐಎಂಎಲ್ ಮುಖಂಡ ಚೌಡಳ್ಳಿ ಜವರಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಜನ, ಕಾರ್ಮಿಕ ವಿರೋಧಿ. ದೇಶ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಿ, ಜನರ ಹಕ್ಕುಗಳ ರಕ್ಷಣೆಗಾಗಿ ಜ.8, 9ರ ಹೋರಾಟವನ್ನು ಬೆಂಬಲಿಸುವಂತೆ ಕೋರಿದರು. ಈ ವೇಳೆ ಸಿಪಿಐ ಮುಖಂಡ ಜಗನ್ನಾಥ್, ಸಿಪಿಎಂ ಮುಖಂಡರಾದ ಬಸವ ರಾಜು ವಿ.ಕಲ್ಕುಣಿಕೆ ಜಗದೀಶ್ ಸೂರ್ಯ ಮಾತನಾಡಿದರು. ದಲಿತ ಹಕ್ಕುಗಳ ಸಮಿತಿಯ ಬೆಳ್ತೂರು ವೆಂಕಟೇಶ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೆಗೌಡ, ಡಿವೈಎಫ್‍ಐ ಮುಖಂಡ ವಿ.ದುರ್ಗೇಶ್, ಕೆಪಿಆರ್‍ಎಸ್ ತಾಲೂಕು ಕಾರ್ಯದರ್ಶಿ ಉಡುವೆಪುರ ಲೋಕೇಶ್ ಇತರಿದ್ದರು.