ಫೆಬ್ರವರಿಯಲ್ಲಿ ರಾಷ್ಟ್ರಪತಿ ರಸ್ತೆ ಲೋಕಾರ್ಪಣೆ
ಮೈಸೂರು

ಫೆಬ್ರವರಿಯಲ್ಲಿ ರಾಷ್ಟ್ರಪತಿ ರಸ್ತೆ ಲೋಕಾರ್ಪಣೆ

December 31, 2018

ನಂಜನಗೂಡು: ಹಲವಾರು ಅಡ್ಡಿ ಅಂತಕಗಳಿಂದ ಆರಂಭಗೊಂಡ ನಗರದ ರಾಷ್ಟ್ರಪತಿ ರಸ್ತೆ ಕಾಂಕ್ರಿಟ್ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದ್ದಾರೆ.

ಆರ್.ಪಿ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು, ವರ್ತಕರು, ಸಂಘ ಸಂಸ್ಥೆಗಳು ಈ ರಸ್ತೆಯ ಕಾಂಕ್ರಿಟ್ ಕಾಮಗಾರಿ ವಿಳಂಬದ ಬಗ್ಗೆ ಮತ್ತು ಸಮಸ್ಯೆಗಳನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಡಿ.31ರೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸ ಲಾಗಿತ್ತು. ಅದರಂತೆ ಸದ್ಯ ಶೇ.90 ಭಾಗ ಕಾಮಗಾರಿ ಪೂರ್ಣಗೊಂಡಿದೆ. ಜನವರಿ ತಿಂಗಳಲ್ಲಿ ಕ್ಯೂರಿಂಗ್ ಮಾಡುವ ಕಾರಣ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಉಸ್ತು ವಾರಿ ಸಚಿವ ಜಿ.ಟಿ.ದೇವೆಗೌಡ, ಸಂಸದ ಆರ್ ಧ್ರುವನಾರಾಯಣ್ ಸಮ್ಮುಖದಲ್ಲಿ ರಸ್ತೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ನಗರದ ಹಳೆಯ ಸುಭಾಷ್ ಪಾರ್ಕ್‍ನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಅಲ್ಲಿದ್ದ ಅನಧಿಕೃತ ಮಳಿಗೆಯನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದು, ಸುಂದರ ಪಾರ್ಕ್ ಮಾಡುವ ಮೂಲಕ ಹೂಸ ರೂಪ ನೀಡ ಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಬಾಲಚಂದ್ರು, ಪ್ರಜ್ವಲ್‍ಶಶಿ, ದೇವಿರಮ್ಮಹಳ್ಳಿ ಜಿ.ಬಸವ ರಾಜು, ಕುರಹಟ್ಟಿ ಸಿದ್ದರಾಜು, ಧನರಾಜ್ ಬೂಲ, ನಗರಸಭಾ ಸದಸ್ಯ ಖಾಲಿದ್, ಮಹದೇವಸ್ವಾಮಿ, ಗಿರೀಶ್, ಮಾದೇಶ್, ಕಪ್ಪಸೋಗೆ ಶಿವರುದ್ರ, ನಿಧಿ ಸುರೇಶ್ ಇದ್ದರು.

Translate »