ಕೆ-ಸೆಟ್ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಹಾಜರು
ಮೈಸೂರು

ಕೆ-ಸೆಟ್ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಹಾಜರು

December 31, 2018

ಮೈಸೂರು: ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ನಡೆದ ಕೆ-ಸೆಟ್ ಪರೀಕ್ಷೆಯನ್ನು ಮೈಸೂರಿನ 11 ಕೇಂದ್ರಗಳಲ್ಲಿ ಭಾನುವಾರ ಸಾವಿರಾರು ವಿದ್ಯಾರ್ಥಿಗಳು ಎದುರಿಸಿದರು. ಮೈಸೂರು ನಗರದ ಮಹಾರಾಜ, ಮಹಾರಾಣಿ, ಎಸ್‍ಡಿಎಂ, ನಟರಾಜ ಸೇರಿದಂತೆ 11 ಕಾಲೇಜುಗಳಲ್ಲಿ ಭಾನುವಾರ ನಡೆದ ಕೆ-ಸೆಟ್ ಪರೀಕ್ಷೆಯನ್ನು ಬರೆಯುವುದಕ್ಕೆ 95 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ ಹಲವು ಅಭ್ಯರ್ಥಿಗಳು ಗೈರು ಹಾಜರಾಗಿರುವ ಮಾಹಿತಿ ಇದ್ದು, ಪರೀಕ್ಷೆಯಲ್ಲಿ ಪಾಲ್ಗೊಂಡ ವರ ನಿಖರ ಸಂಖ್ಯೆ ಸೋಮವಾರ ತಿಳಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪತ್ರಿಕೋದ್ಯಮ, ಇತಿಹಾಸ, ಸಮಾಜಶಾಸ್ತ್ರ ಸೇರಿದಂತೆ ಒಟ್ಟು 40 ವಿಷಯಗಳಿಗೆ ಕೆ-ಸೆಟ್ ಪರೀಕ್ಷೆ ನಡೆಯಿತು. ಯುಜಿಸಿಯಿಂದ 14 ಮಂದಿ ವೀಕ್ಷಕರು ಪರೀಕ್ಷೆಯನ್ನು ಸುಸೂತ್ರ ವಾಗಿ ನಡೆಸುವುದರೊಂದಿಗೆ ಕೇಂದ್ರದ ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ವಹಿಸಲು ಆಗಮಿಸಿದ್ದರು. ಇದರೊಂದಿಗೆ ಸ್ಕ್ವಾಡ್ ಪರೀಕ್ಷಾ ಅಕ್ರಮವನ್ನು ತಡೆಗಟ್ಟಲು ಕಾರ್ಯಾ ಚರಿಸುತ್ತಿತ್ತು. ಎಲ್ಲಾ ಕೇಂದ್ರಗಳಲ್ಲೂ ಗೊಂದಲವಿಲ್ಲದೆ ಪರೀಕ್ಷೆ ಸುಗಮವಾಗಿ ನಡೆದಿದೆ.
ಹಿಡಿತವಿಲ್ಲದ ಅನುವಾದ: ಸಹಾಯಕ ಪ್ರಾಧ್ಯಾಪಕರಾಗುವುದಕ್ಕೆ ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲೇ ಬೇಕಾಗಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಒಳಗೊಂಡಂತೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಕೆ-ಸೆಟ್ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು. ಮೈಸೂರು, ಚಾಮ ರಾಜನಗರ, ಹಾಸನ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಕೆ-ಸೆಟ್ ಪರೀಕ್ಷೆ ಬರೆಯಲು ಉತ್ಸುಕರಾಗಿ ಆಗಮಿಸಿದ್ದರು. ಆದರೆ ಪರೀಕ್ಷೆ ಬರೆಯುವ ವೇಳೆ ಪ್ರಶ್ನೆ ಪತ್ರಿಕೆಯನ್ನು ಕಂಡು ವಿದ್ಯಾರ್ಥಿಗಳು ಹೌಹಾರಿದ್ದಾರೆ. ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುಮಾದ ಮಾಡುವಾಗ ಪದಗಳ ಜೋಡಣೆ, ಅಕ್ಷರಗಳು ಸರಿಯಾಗಿ ಮುದ್ರಣವಾಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಅರ್ಥವಾಗದೇ ಪರದಾಡಿರು ವುದನ್ನು ಹಲವಾರು ವಿದ್ಯಾರ್ಥಿಗಳು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »